ಪದವಿ ಕಾಲೇಜು ಸಿಬ್ಬಂದಿಗೆ ವೇತನ ಬಾಕಿ ಉಳಿಸುವಂತಿಲ್ಲ: ಸರ್ಕಾರ

Kannadaprabha News   | Asianet News
Published : Mar 14, 2021, 12:04 PM ISTUpdated : Mar 14, 2021, 12:19 PM IST
ಪದವಿ ಕಾಲೇಜು ಸಿಬ್ಬಂದಿಗೆ ವೇತನ ಬಾಕಿ ಉಳಿಸುವಂತಿಲ್ಲ: ಸರ್ಕಾರ

ಸಾರಾಂಶ

ಖಜಾನೆ-2ರಲ್ಲಿ ಸಾಕಷ್ಟು ಅನುದಾನ ಲಭ್ಯವಿದ್ದರೂ ಸಹ ವೇತನ ಕ್ಲೇಮು ಮಾಡಲು ಬಟವಾಡೆ ಅಧಿಕಾರಿಗಳ ಅನಗತ್ಯ ವಿಳಂಬ| ಅನುದಾನ ಪಡೆದು ವೇತನ ಬಿಡುಗಡೆ ಮಾಡಬೇಕು| ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 152 ಕಾಲೇಜುಗಳ 247 ಸಿಬ್ಬಂದಿಗಿಲ್ಲ ವೇತನ| 

ಬೆಂಗಳೂರು(ಮಾ.14): ಅನುದಾನ ಲಭ್ಯವಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಹಲವು ಸಿಬ್ಬಂದಿಗೆ ವೇತನ ನೀಡಿಕೆಯಲ್ಲಿ ವಿಳಂಬವಾಗುತ್ತಿದ್ದು, ಕೂಡಲೇ ಈ ಸಮಸ್ಯೆ ಸರಿಪಡಿಸಲು ಕಾಲೇಜು ಶಿಕ್ಷಣ ಇಲಾಖೆ ಕಟ್ಟುನಿಟ್ಟಾಗಿ ಸೂಚಿಸಿದೆ. 

2020-21ನೇ ಸಾಲಿನಲ್ಲಿ ಮಾಚ್‌ರ್‍ ಅವಧಿಯ ವೇತನ ಹೊರತುಪಡಿಸಿ ಯಾವುದೇ ವೇತನ ಬಾಕಿಯನ್ನು ಉಳಿಸಿಕೊಳ್ಳುವಂತಿಲ್ಲ ಎಂದು ಸೂಚಿಸಿದ್ದರೂ, ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 152 ಕಾಲೇಜುಗಳ 247 ಸಿಬ್ಬಂದಿಗೆ ಕೆಲ ತಿಂಗಳ ವೇತನ ನೀಡಲಾಗಿಲ್ಲ. 

ಬೇಸಿಗೆ ರಜೆ, ಪರೀಕ್ಷೆ ಇಲ್ಲದೇ ಪಾಸ್ ಸುದ್ದಿಗೆ ಸ್ಪಷ್ಟನೆ ಕೊಟ್ಟ ಸಚಿವ ಸುರೇಶ್ ಕುಮಾರ್

ವೇತನದ ಅನುದಾನ ಸೆಳೆಯಲು ಖಜಾನೆ-2ರಲ್ಲಿ ಸಾಕಷ್ಟು ಅನುದಾನ ಲಭ್ಯವಿದ್ದರೂ ಸಹ ವೇತನ ಕ್ಲೇಮು ಮಾಡಲು ಬಟವಾಡೆ ಅಧಿಕಾರಿಗಳು ಅನಗತ್ಯ ವಿಳಂಬ ಮಾಡಿದ್ದಾರೆ. ಕೂಡಲೇ ಅನುದಾನ ಪಡೆದು ವೇತನ ಬಿಡುಗಡೆ ಮಾಡಬೇಕು. ಒಂದು ವೇಳೆ ಅನುದಾನ ಇಲಾಖೆಗೆ ವಾಪಸ್‌ ಹೋದಲ್ಲಿ, ವೇತನ ಬಿಡುಗಡೆ ಬಗ್ಗೆ ಸಿಬ್ಬಂದಿ ದೂರು ನೀಡಿದಲ್ಲಿ ಬಟವಾಡೆ ಅಧಿಕಾರಿಗಳನ್ನೇ ನೇರ ಹೊಣೆಗಾರರಾಗಿ ಮಾಡುವುದಾಗಿ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು ಎಲ್ಲ 152 ಕಾಲೇಜುಗಳಿಗೆ ಸೂಚನೆ ನೀಡಿದ್ದಾರೆ.
 

PREV
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ