ಎಂಜಿನಿಯರಿಂಗ್ ಓದಲು ಮ್ಯಾಥ್ಸ್, ಫಿಜಿಕ್ಸ್ ಕಡ್ಡಾಯವಲ್ಲ!

By Suvarna News  |  First Published Mar 13, 2021, 2:32 PM IST

ಇಷ್ಟು ದಿನ ಪಿಯುಸಿಯಲ್ಲಿ ಸೈನ್ಸ್ ಓದಿದ್ರೆ ಮಾತ್ರ ಇಂಜಿನಿಯರಿಂಗ್ ಡಿಗ್ರಿ ಓದಬಹುದಾಗಿತ್ತು. ಅದರಲ್ಲೂ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ಈ ಮೂರು ವಿಷಯಗಳನ್ನ ಕಡ್ಡಾಯವಾಗಿ ಕಲಿತರೆ ಮಾತ್ರ ಬಿಟೆಕ್‌ಗೆ ಅವಕಾಶವಿತ್ತು. ಆದ್ರೆ ಇನ್ಮುಂದೆ ಹಾಗೇನೂ ಇಲ್ಲ. ಪಿಯುಸಿ ಹಂತದಲ್ಲಿ ಭೌತಶಾಸ್ತ್ರ ಮತ್ತು ಗಣಿತ ಓದದೇ ಇದ್ದರೂ ಎಂಜಿನಿಯರಿಂಗ್ ಕೋರ್ಸುಗಳಿಗೆ ಪ್ರವೇಶ ಪಡೆಯಬಹುದು!


ಪಿಯುಸಿ ಹಂತದಲ್ಲಿ ನೀವು ಮ್ಯಾಥ್ಸ್ ಮತ್ತು ಫಿಜಿಕ್ಸ್ ಓದಿಲ್ಲ. ಆದರೂ ಇಂಜಿನಿಯರಿಂಗ್ ಓದಬೇಕು ಎನ್ನಿಸಿದರೆ ಇನ್ನುಮುಂದೆ ಓದಬಹುದು. ಪಿಯುಸಿಯಲ್ಲಿ ವೈವಿದ್ಯಮಯ ವಿಷಯಗಳನ್ನ ಅಭ್ಯಾಸ ಮಾಡಿದವರು, ಇನ್ಮುಂದೆ ಸುಲಭವಾಗಿ ಬಿಟೆಕ್ ಮಾಡಬಹುದು. ಯಾಕಂದ್ರೆ ಇನ್ಮುಂದೆ ಬಿ.ಇ, ಬಿ.ಟೆಕ್ ಪದವಿಗಳಿಗೆ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ಕಡ್ಡಾಯವಲ್ಲ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಹೇಳಿದೆ.

ಪರೀಕ್ಷೆ ಮೂಲಕ 822 ಹುದ್ದೆಗಳಿಗೆ ಯುಪಿಎಸ್‌ಸಿಯಿಂದ ನೇಮಕಾತಿ

Tap to resize

Latest Videos

undefined

ಮಹತ್ವಾಕಾಂಕ್ಷಿ ಎಂಜಿನಿಯರಿಂಗ್ ಅಭ್ಯರ್ಥಿಗಳು ಡಿಗ್ರಿಗೆ ಸೇರಲು 12 ನೇ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಅಥವಾ ಗಣಿತಶಾಸ್ತ್ರವನ್ನು ಅಧ್ಯಯನ ಮಾಡುವ ಅಗತ್ಯವಿಲ್ಲ. ಇತ್ತೀಚಿನ ಬೆಳವಣಿಗೆಯಲ್ಲಿ, ತಾಂತ್ರಿಕ ಶಿಕ್ಷಣ ನಿಯಂತ್ರಕವಾದ ಅಖಿಲ ಭಾರತ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ (ಎಐಸಿಟಿಇ) ಯುಜಿ ಎಂಜಿನಿಯರಿಂಗ್ ಕೋರ್ಸ್‌ಗಳಾದ ಬಿಇ ಮತ್ತು ಬಿ. ಟೆಕ್ ಪ್ರವೇಶಕ್ಕೆ ಈ ಮೂರು ವಿಷಯಗಳನ್ನು ಐಚ್ಛಿಕಗೊಳಿಸಿದೆ.

ಪರಿಷ್ಕೃತ ನಿಯಮಗಳನ್ನು ಒಳಗೊಂಡ ಅನುಮೋದನೆ ಪ್ರಕ್ರಿಯೆ ಕೈಪಿಡಿ 2020-2021 ಅನ್ನು ಎಐಸಿಟಿಇ ಇತ್ತೀಚೆಗೆ ಬಿಡುಗಡೆ ಮಾಡಿದೆ. ಹೊಸ ನಿಯಮಾವಳಿಯ ಪ್ರಕಾರ, ಭೌತಶಾಸ್ತ್ರ, ಗಣಿತ, ರಸಾಯನಶಾಸ್ತ್ರ, ಕಂಪ್ಯೂಟರ್ ವಿಜ್ಞಾನ, ಎಲೆಕ್ಟ್ರಾನಿಕ್ಸ್, ಮಾಹಿತಿ, ತಂತ್ರಜ್ಞಾನ, ಜೀವಶಾಸ್ತ್ರ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ತಾಂತ್ರಿಕ ವೃತ್ತಿಪರ ವಿಷಯ, ಕೃಷಿ, ಎಂಜಿನಿಯರಿಂಗ್, ಗ್ರಾಫಿಕ್ಸ್, ಬಿಸಿನೆಸ್ ಸ್ಟಡೀಸ್, ಉದ್ಯಮಶೀಲತೆ: ಇವುಗಳಲ್ಲಿ ಯಾವುದಾದ್ರೂ ಮೂರು ವಿಷಯಗಳೊಂದಿಗೆ ವಿದ್ಯಾರ್ಥಿಗಳು 10+2 ಉತ್ತೀರ್ಣರಾಗಬೇಕು.

ಹೊಸ ಕ್ರಮವು ವಿಭಿನ್ನ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ. "ವೈವಿಧ್ಯಮಯ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳಿಗೆ ಅಪೇಕ್ಷಿತ ಕಲಿಕೆಯ ಫಲಿತಾಂಶಗಳನ್ನು ಸಾಧಿಸಲು ವಿಶ್ವವಿದ್ಯಾಲಯಗಳು ಗಣಿತ, ಭೌತಶಾಸ್ತ್ರ, ಎಂಜಿನಿಯರಿಂಗ್ ಡ್ರಾಯಿಂಗ್ ನಂತಹ ಸೂಕ್ತವಾದ ಬ್ರಿಡ್ಜ್ (ಪೂರಕ) ಕೋರ್ಸ್‌ಗಳನ್ನು ನೀಡಲಿವೆ" ಎಂದು ಹೊಸ ಕೈಪಿಡಿಯಲ್ಲಿ ಉಲ್ಲೇಖಿಸಲಾಗಿದೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸದಲಗಾದಲ್ಲಿ ಹೊಸ ಕೇಂದ್ರೀಯ ವಿದ್ಯಾಲಯ

ಎಐಸಿಟಿಇಯ ಪರಿಷ್ಕೃತ ನಿಯಮವು ರಾಷ್ಟ್ರೀಯ ಶಿಕ್ಷಣ ನೀತಿಯ ದೃಷ್ಟಿಗೆ ಅನುಗುಣವಾಗಿದ್ದು, ವಿದ್ಯಾರ್ಥಿಗಳಿಗೆ ಅವರ ವಿಷಯಗಳ ಆಯ್ಕೆಯಲ್ಲಿ ವಿಶೇಷವಾಗಿ ಸೆಕೆಂಡರಿ ಸ್ಕೂಲ್‌ನಲ್ಲಿ ಹೆಚ್ಚಿನ ಪ್ಲೆಕ್ಸಿಬಲ್ ಆಗಿರಬೇಕು. ಇದರಿಂದ ಅವರು ತಮ್ಮ ವೃತ್ತಿ ಮತ್ತು ಜೀವನ ಮಾರ್ಗವನ್ನು ಉತ್ತಮವಾಗಿ ರೂಪಿಸಿಕೊಳ್ಳಬಹುದು. ಆದಾಗ್ಯೂ, ಗಣಿತಶಾಸ್ತ್ರವು ಎಲ್ಲಾ ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರಮುಖ ವಿಷಯವಾಗಿದ್ದು, ಈಗ ಬದಲಾದ ನಿಯಮದ ಬಗ್ಗೆ ಕಳವಳ ವ್ಯಕ್ತವಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಸೂಚಿಸಿದೆ. ಈ ಹೊಸ ಕ್ರಮವು ಭಾರತೀಯ ಎಂಜಿನಿಯರಿಂಗ್ ಕಾಲೇಜುಗಳು ಉತ್ಪಾದಿಸುವ ಎಂಜಿನಿಯರ್‌ಗಳ ಗುಣಮಟ್ಟವನ್ನು ತೆಗೆದುಕೊಳ್ಳಬಹುದು ಎಂಬ ಆತಂಕವಿದೆ.

ಇಲ್ಲಿವರೆಗೂ, ಎಂಜಿನಿಯರಿಂಗ್ ಅಧ್ಯಯನಕ್ಕೆ 12 ನೇ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ಕಡ್ಡಾಯವಾಗಿದೆ. ದೇಶಾದ್ಯಂತ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪಡೆಯಲು ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಅಂಕಗಳು ಮತ್ತು 12ನೇ ತರಗತಿ/ಪಿಯುಸಿ ಬೋರ್ಡ್ ಪರೀಕ್ಷೆಯಲ್ಲಿ ಈ ಮೂರು ವಿಷಯಗಳಲ್ಲಿ ಪಡೆದ ಅಂಕಗಳನ್ನು ಪರಿಗಣಿಸಲಾಗುತ್ತಿದೆ. ಅಲ್ಲದೆ, ಜೆಇಇ ಮುಖ್ಯ ಮತ್ತು ಸುಧಾರಿತ ಪರೀಕ್ಷೆಗೂ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ಕಡ್ಡಾಯವಾಗಿದೆ.

ಪರಿಷ್ಕೃತ ಕೈಪಿಡಿಯಲ್ಲಿ ಏನಿದೆ:  12 ನೇ ತರಗತಿ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಕೋರ್ಸ್‌ಗಳನ್ನು ತೆಗೆದುಕೊಳ್ಳಲು ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಕಡ್ಡಾಯವಲ್ಲ. ಈ ಯಾವುದೇ ಮೂರು ವಿಷಯಗಳೊಂದಿಗೆ ವಿದ್ಯಾರ್ಥಿಗಳು 12 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು: ಭೌತಶಾಸ್ತ್ರ, ಗಣಿತ, ರಸಾಯನಶಾಸ್ತ್ರ, ಕಂಪ್ಯೂಟರ್ ವಿಜ್ಞಾನ, ಎಲೆಕ್ಟ್ರಾನಿಕ್ಸ್, ಮಾಹಿತಿ, ತಂತ್ರಜ್ಞಾನ, ಜೀವಶಾಸ್ತ್ರ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ತಾಂತ್ರಿಕ ವೃತ್ತಿಪರ ವಿಷಯ, ಕೃಷಿ, ಎಂಜಿನಿಯರಿಂಗ್, ಗ್ರಾಫಿಕ್ಸ್, ಬಿಸಿನೆಸ್ ಸ್ಟಡೀಸ್, ಉದ್ಯಮಶೀಲತೆ.

ಮೆಗಾ ನೇಮಕಾತಿ: ಶೀಘ್ರವೇ 6,552 ಹುದ್ದೆಗಳಿಗೆ ಇಎಸ್ಐಸಿ ನೇಮಕಾತಿ

ಕಾಯ್ದಿರಿಸದ ವರ್ಗದ ವಿದ್ಯಾರ್ಥಿಗಳು ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ 45% ಅಂಕಗಳನ್ನು ಪಡೆಯಬೇಕು. ಕಾಯ್ದಿರಿಸಿದ ವರ್ಗದ ಅಭ್ಯರ್ಥಿಗಳಿಗೆ ರಿಯಾಯಿತಿ ಇದ್ದು, 40%ರಷ್ಟು ಅಂಕ  ಗಳಿಸಬೇಕು. ವೈವಿಧ್ಯಮಯ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಗಣಿತ, ಭೌತಶಾಸ್ತ್ರ, ಎಂಜಿನಿಯರಿಂಗ್ ಡ್ರಾಯಿಂಗ್ ಇತ್ಯಾದಿಗಳ ಕುರಿತು ಬ್ರಿಡ್ಜ್ ಕೋರ್ಸ್‌ಗಳನ್ನು ವಿಶ್ವವಿದ್ಯಾಲಯಗಳು ನೀಡಲಿವೆ.

click me!