ಸಿಇಟಿ ಪರೀಕ್ಷೆ: PUC ಸೈನ್ಸ್ ವಿದ್ಯಾರ್ಥಿಗಳಿಗೆ ಉಚಿತ ಆನ್ ಲೈನ್ ತರಬೇತಿ

By Suvarna News  |  First Published Jun 14, 2021, 8:38 PM IST

* ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆ ತಯಾರಾಗಲು ಉಚಿತ ಆನ್ ಲೈನ್ ತರಬೇತಿ
* ವಿದ್ಯಾರ್ಥಿಗಳ‌‌ ಕಲಿಕೆ ದೃಷ್ಟಿಯಿಂದ  ವಿನೂತನ ಕಾರ್ಯಕ್ರಮ ಜಾರಿ
* ಪದವಿ ಪೂರ್ವ ಶಿಕ್ಷಣ ‌ಇಲಾಖೆ ವಿನೂತನ ಕಾರ್ಯಕ್ರಮ


ಬೆಂಗಳೂರು,(ಜೂನ್.14) : ದ್ವಿತೀಯ ಪಿಯುಸಿ ಸೈನ್ಸ್ (ವಿಜ್ಞಾನ) ವಿಭಾಗದ ವಿದ್ಯಾರ್ಥಿಗಳಿಗೆ CET ಪರೀಕ್ಷೆಗೆ ಅನುಕೂಲವಾಗಲು ಉಚಿತ ' ಆನ್ ಲೈನ್ ' ಕ್ಲಾಸ್ ನಡೆಸಲು ಪಿಯು ಬೋರ್ಡ್ ಮುಂದಾಗಿದೆ.

ಎಸ್.ಸಿ.ಹೆಚ್ ಫೌಂಡೇಶನ್ ಸಹಯೋಗದಲ್ಲಿ ಜ್ಞಾನ- ವಿಜ್ಞಾನ ತರಂಗ ಯೋಜನೆ ಜಾರಿ ಮಾಡಲಾಗಿದ್ದು, ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆಗೆ ತಯಾರಾಗಲು ಉಚಿತ ಆನ್ ಲೈನ್ ತರಬೇತಿ ನೀಡಲಾಗುತ್ತದೆ.

Latest Videos

undefined

ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸಿಇಟಿ ಅಂಕ ಮಾತ್ರ ಪರಿಗಣನೆ 

ವಿಷಯ ಪಠ್ಯ ತಜ್ಞರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಿದ್ದು, ಸಿಇಟಿಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಭತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ ವಿಷಯದಲ್ಲಿ ತಲಾ 25 ಅಧಿವೇಷನ, ತಲಾ ಒಂದು ಪ್ರಶ್ನೆ ಪತ್ರಿಕೆ ಬಿಡಿಸುವಿಕೆ ಇರಲಿದೆ.

ಇಂದಿನಿಂದ ಪ್ರತಿದಿನ ಸಂಜೆ 5 ರಿಂದ ರಾತ್ರಿ 8 ಗಂಟೆಯವರೆಗೆ ನೇರ ಪ್ರಸಾರವಾಗಲಿದೆ. ಈಗಾಗಲೇ ಈ ಕಾರ್ಯಕ್ರಮಕ್ಕೆ 60 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿದ್ದಾರೆ. ಇನ್ನುಳಿದ ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬಹುದಾಗಿದೆ.

click me!