ರಾಜ್ಯ ಸರ್ಕಾರದ ಅನ್ಯಾಯದ ವಿರುದ್ಧ ಸಿಡಿದೆದ್ದ ಅರಣ್ಯಶಾಸ್ತ್ರ ಪದವಿ ವಿದ್ಯಾರ್ಥಿಗಳು

By Suvarna News  |  First Published Feb 12, 2024, 5:59 PM IST

ಅರಣ್ಯ ಪದವಿಯನ್ನು ಪೂರೈಸಿದ ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆಯಲ್ಲಿನ ವಿವಿಧ ಹುದ್ದೆಗಳ ಭರ್ತಿ ಮಾಡುವ ಸಂದರ್ಭ ಪೂರ್ಣ ಪ್ರಮಾಣದಲ್ಲಿ ಮೀಸಲು ನೀಡುವಂತೆ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ.


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಫೆ.12): ಅರಣ್ಯ ಪದವಿಯನ್ನು ಪೂರೈಸಿದ ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆಯಲ್ಲಿನ ವಿವಿಧ ಹುದ್ದೆಗಳ ಭರ್ತಿ ಮಾಡುವ ಸಂದರ್ಭ ಪೂರ್ಣ ಪ್ರಮಾಣದಲ್ಲಿ ಮೀಸಲು ನೀಡುವಂತೆ ಅರಣ್ಯಶಾಸ್ತ್ರ ಪದವಿ ವಿದ್ಯಾರ್ಥಿಗಳು ಕಳೆದ ಎರಡು ದಿನಗಳಿಂದ ನಿರಂತರ ಪ್ರತಿನಿಭಟನೆ ನಡೆಸುತ್ತಿದ್ದಾರೆ. ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಇರುವ ಅರಣ್ಯ ವಿದ್ಯಾಲಯದ ನೂರಾರು ವಿದ್ಯಾರ್ಥಿಗಳು ಎರಡು ದಿನಗಳಿಂದ ತೀವ್ರ ಪ್ರತಿಭಟನೆ ನಡೆಸುತಿದ್ದಾರೆ. 

Tap to resize

Latest Videos

undefined

ಭಾನುವಾರ ತಮ್ಮ ಕಾಲೇಜು ಬಳಿಯೇ ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿಗಳು, ಡೀನ್ ಕಚೇರಿ ಮುಂದೆ ಘೋಷಣೆಗಳನ್ನು ಕೂಗಿದ್ದರು. ಸೋಮವಾರ ತಮ್ಮ ಕಾಲೇಜು ಬಳಿಯಿಂದ ಪೊನ್ನಂಪೇಟೆ ಬಸ್ಸು ನಿಲ್ದಾಣದವರೆಗೆ ಮೆರವಣಿಗೆ ನಡೆಸಿದರು. ಹಲವು ವರ್ಷಗಳಿಂದಲೂ ತಮ್ಮ ಬೇಡಿಕೆಗಳನ್ನು ಸರ್ಕಾರಗಳು ಈಡೇರಿಸುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಏಷ್ಯಾದಲ್ಲೇ‌ ಅತಿ ಹೆಚ್ಚು ಗಾಳಿ‌ ಬೀಸುವ, ರಾಜ್ಯದ ಪ್ರಸಿದ್ಧ ತಾಣ ಜೋಗಿಮಟ್ಟಿಗೆ ಪ್ರವಾಸಿಗರ ನಿರ್ಬಂಧ

ಬಸ್ಸು ನಿಲ್ದಾಣದವರೆಗೆ ಮೆರವಣಿಗೆ ಸಾಗಿದ ವಿದ್ಯಾರ್ಥಿಗಳು ಬಳಿಕ ಬಸ್ಸು ನಿಲ್ದಾಣದಲ್ಲಿ ಒಂದು ಗಂಟೆಯೂ ಹೆಚ್ಚು ಸಮಯ ಪ್ರತಿಭಟನಾ ಧರಣಿ ನಡೆಸಿದರು. ಅಲ್ಲದೆ ಅರಣ್ಯಶಾಸ್ತ್ರ ಪದವಿಯನ್ನು ಕಲಿಯಲು ಬಂದ ನಮ್ಮ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಏನಾಗುತ್ತಿದೆ ಎಂಬುದನ್ನು ಬಿಂಬಿಸುವ ಬೀದಿ ನಾಟಕವನ್ನು ಮಾಡಿ ಎಲ್ಲರ ಗಮನ ಸೆಳೆದರು. 

ಈ ಸಂದರ್ಭ ಮಾತನಾಡಿದ ವಿದ್ಯಾರ್ಥಿ ಮುಖಂಡ ಸುಹಾಸ್ ನಾವು ಅರಣ್ಯ ಸಂರಕ್ಷಿಸುವುದಕ್ಕಾಗಿಯೇ ವಿಶೇಷವಾಗಿ ಅರಣ್ಯ ಪದವಿಯನ್ನು ಅಧ್ಯಯನ ಮಾಡುತ್ತೇವೆ. ಆದರೆ ಸರ್ಕಾರಗಳು ಅರಣ್ಯ ಇಲಾಖೆಯ ವಿವಿಧ ಹುದ್ದೆಗಳನ್ನು ಭರ್ತಿ ಮಾಡುವಾಗ ನಮ್ಮನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಪರಿಗಣಿಸಲಾಗುತ್ತಿದೆ. ಆದರೆ ಉಳಿದ ಇಲಾಖೆಯ ಹುದ್ದೆಗಳಿಗೆ ನಾವು ಅರ್ಜಿಯನ್ನು ಹಾಕಲು ಅವಕಾಶವಿಲ್ಲದಂತ ಪರಿಸ್ಥಿತಿ ಇದೆ. ಅರಣ್ಯ ಪದವಿಯನ್ನು ಇತರೆ ಪದವಿಗಳಂತೆ ಪರಿಗಣಿಸಿ, ಇಲ್ಲವೇ ಅರಣ್ಯ ಇಲಾಖೆಯ ಹುದ್ದೆಗಳ ಭರ್ತಿಯ ಸಂದರ್ಭ ನಮಗೆ ವಿಶೇಷ ಅವಕಾಶ ನೀಡುವಂತೆ ಒತ್ತಾಯಿಸಿದರು.

 ಪ್ರತಿಭಟನಾ ಸ್ಥಳಕ್ಕೆ ವಿರಾಜಪೇಟೆ ಶಾಸಕ ಪೊನ್ನಣ್ಣ, ಅಥವಾ ಅರಣ್ಯ ಸಚಿವರು ಬರಬೇಕು. ಬಂದು ನಮ್ಮ ಅಹವಾಲನ್ನು ಆಲಿಸಿ ಸಮಸ್ಯೆಯ ಪರಿಹಾರಕ್ಕೆ ಚಿಂತಿಸಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ಅರಮಣಾಂತರವಾಗಲಿದೆ ಎಂದು ಎಚ್ಚರಿಸಿದರು. ಸದ್ಯ ಪ್ರತಿಭಟನೆಯನ್ನು ಮುಂದುವರಿಸಿರುವ ವಿದ್ಯಾರ್ಥಿಗಳು ನಮ್ಮ ಬೇಡಿಕೆಯನ್ನು ಸರ್ಕಾರ ಈಡೇರಿಸುವವರೆಗೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.

ವೈವಾಹಿಕ ಜೀವನ ವಿಫಲವಾಗಿ 4 ಬಾರಿ ಮದುವೆಯಾದ ನಟಿಗೆ ಬಾಲಿವುಡ್‌ ಕೂಡ ಕೈ ...

ವಿದ್ಯಾರ್ಥಿ ಮುಖಂಡ ಕಿಶನ್ ಗೌಡ ಮಾತನಾಡಿ ಹಿಂದಿನ ರಾಜ್ಯ ಬಿಜೆಪಿ ಸರ್ಕಾರ ಅರಣ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆಯಲ್ಲಿ ಇದ್ದ ಶೇ 75 ರಷ್ಟು ಮೀಸಲಾತಿಯನ್ನು ತೆಗೆದು ಹಾಕಿ ಶೇ 50 ರಷ್ಟನ್ನು ಕಡಿತ ಮಾಡಿತು. ಅದರಲ್ಲೂ ಶೇ 25 ರಷ್ಟು ಹುದ್ದೆಗಳನ್ನು ಅರಣ್ಯ ಶಾಸ್ತ್ರ ವಿದ್ಯಾರ್ಥಿಗಳಿಗೆ ಮೀಸಲಿರಿಸಿದರೆ, ಉಳಿದ 25 ರಷ್ಟನ್ನು ಇತರೆ ಬಿಎಸ್ಸಿ ಪದವೀಧರರಿಗೆ ಮೀಸಲಿರಿಸಿದೆ. ಇದರಿಂದ ಅರಣ್ಯಶಾಸ್ತ್ರ ಅಧ್ಯಯನ ಮಾಡಿದ ಪದವೀಧರರಿಗೆ ಘೋರ ಅನ್ಯಾಯ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಇದನ್ನು ಸರಿಪಡಿಸುವವರೆಗೆ ಯಾವುದೇ ಕಾರಣಕ್ಕೂ ನಮ್ಮ ಹೋರಾಟವನ್ನು ಕೈಬಿಡುವುದಿಲ್ಲ. ಸರ್ಕಾರದ ನಿಯಮದಂತೆ ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಕೃಷಿ ಹಾಗೂ ತೋಟಗಾರಿಕೆ ಪದವೀಧರರೇ ಆಗಬೇಕು. ಆದರೆ ಇದೇ ರೀತಿಯ ನಿಯಮವನ್ನು ಅರಣ್ಯ ಶಾಸ್ತ್ರ ಅಧ್ಯಯನ ಮಾಡಿದವರಿಗೆ ಹಾಗೂ ಅರಣ್ಯ ಇಲಾಖೆಗೆ ಏಕೆ ಜಾರಿ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.

click me!