ಫ್ಲಿಪ್‌ಕಾರ್ಟ್‌ನ ಈ ಲಾಂಚ್‌ಪ್ಯಾಡ್ ಪ್ರೋಗ್ರಾಮ್‌ನಲ್ಲಿ ಕಳೆದ ವರ್ಷ 2000 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ವರ್ಷವೂ ಮತ್ತೆ ಈ ಕಾರ್ಯಕ್ರಮ ಆರಂಭಿಸಿರುವ ಕಂಪನಿ, ಪ್ರಶಿಕ್ಷಣಾರ್ಥಿಗಳಿಗೆ ದಿನಕ್ಕೆ 500 ರೂ. ನೀಡುತ್ತದೆ.
ರಾಷ್ಟ್ರೀಯ ಹಬ್ಬ ಹಾಗೂ ದೊಡ್ಡ ದೊಡ್ಡ ಹಬ್ಬಗಳು ಬಂದ್ರೆ ಸಾಕು ಆನ್‌ಲೈನ್ ಶಾಪಿಂಗ್ ಮೇಳಗಳು ಶುರುವಾಗುತ್ತವೆ. ಗ್ರಾಹಕರನ್ನು ಸೆಳೆಯಲು ಹಲವು ಆಫರ್‌ಗಳನ್ನು ನೀಡುತ್ತವೆ. ಅದರಲ್ಲೂ ಇಂಡಿಪೆಂಡೆನ್ಸ್ ಡೇ, ರಿಪಬ್ಲಿಕ್ ಡೇ, ದಸರಾ, ದೀಪಾವಳಿ ಸಂದರ್ಭಗಳಲ್ಲಿ ಅಮೇಜಾನ್, ಫ್ಲಿಪ್‌ಕಾರ್ಟ್‌ನಂತಹ ದೈತ್ಯ ಕಂಪನಿಗಳು ನಾನಾ ವಿಧದ ಹಾಗೂ ಭಾರೀ ರಿಯಾಯಿತಿ ನೀಡಿ ಗ್ರಾಹಕರನ್ನ ಆಕರ್ಷಿಸುತ್ತವೆ. ಹಬ್ಬಗಳ ನಿಮಿತ್ತ ವರ್ಷಕ್ಕೊಮ್ಮೆ ಅಥವಾ ಎರಡು ಬಾರಿ ಬಿಗ್ ಸೀಸನ್ ಸೇಲ್ ಆಯೋಜಿಸುತ್ತವೆ.
ಅಂದ ಹಾಗೇ ಇಷ್ಟು ದಿನ ಕೇವಲ ಆನ್‌ಲೈನ್ ವ್ಯವಹಾರಕ್ಕಷ್ಟೇ ಮಾತ್ರ ಸೀಮಿತವಾಗಿದ್ದ ಫ್ಲಿಪ್‌ಕಾರ್ಟ್ ಇದೀಗ ಮತ್ತೊಂದು ಹೊಸ ಹೆಜ್ಜೆ ಇಟ್ಟಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡೋಕೆ ಮುಂದಾಗಿದೆ. 45 ದಿನಗಳ ಇಂಟರ್ನ್‌ಶಿಪ್ ಮತ್ತೆ ಆರಂಭಿಸುತ್ತಿದೆ. ಇದಕ್ಕೆ ಫ್ಲಿಪ್‌ಕಾರ್ಟ್ ಲಾಂಚ್‌ಪ್ಯಾಡ್ ಪ್ರೋಗ್ರಾಮ್ ಎಂದು ಕರೆಯಲಾಗುತ್ತದೆ. ಕಳೆದ ವರ್ಷವೂ ಫ್ಲಿಪ್‌ಕಾರ್ಟ್ ಈ ಇಂಟರ್ನಿಶಿಫ್ ಪ್ರೋಗ್ರಾಮ್ ಆರಂಭಿಸಿತ್ತು. ಆಗಲೂ ವಿದ್ಯಾರ್ಥಿಗಳಿಂದ ಒಳ್ಳೆಯ ಪ್ರತಿಕ್ರಿಯೆ ದೊರೆತಿತ್ತು.
undefined
ಕಡಿಮೆ ಖರ್ಚಿನಲ್ಲಿ ಉನ್ನತ ಸಂಸ್ಥೆಗಳಿಂದ ಆನ್‌ಲೈನ್ ಶಿಕ್ಷಣ ಪಡೆಯಿರಿ
500 ರೂಪಾಯಿ ಕೊಡ್ತಾರೆ
ಫ್ಲಿಪ್‌ಕಾರ್ಟ್ ಹಬ್ಬದ ಸಂದರ್ಭಗಳಲ್ಲಿ ಬಿಗ್ ಬಿಲಿಯನ್ ಡೇ ಮಾರಾಟ ಆರಂಭಿಸುತ್ತದೆ. ಈ ಸಂದರ್ಭದಲ್ಲಿ ಲಾಂಚಿಂಗ್‌ಪ್ಯಾಡ್ ಪ್ರಶಿಕ್ಷಣಾರ್ಥಿಗಳಿಗೆ ವಸ್ತುಗಳ ಪೂರೈಕೆ ಜಾಲದ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯುವುದಲ್ಲದೇ, ಕಂಪನಿಗೂ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಿಗೆ ಸಪ್ಲೈ ಚೈನ್ ಬಗ್ಗೆ ತಿಳಿಸಿಕೊಡುವುದು ಮಾತ್ರವಲ್ಲದೇ, ಅವರಿಗೆ ಪ್ರತಿ ನಿತ್ಯ 500 ರೂ. ಅನ್ನು ಕಂಪನಿ ನೀಡುತ್ತದೆ. ಅಂದರೆ, ವಿದ್ಯಾರ್ಥಿಗಳು 45 ದಿನದಲ್ಲಿ 20 ಸಾವಿರಕ್ಕೂ ಹೆಚ್ಚು ಹಣವನ್ನು ಪಡೆದುಕೊಳ್ಳಬಹುದು.
ದ್ವಿತೀಯ ಸ್ತರದ ನಗರಗಳ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಫ್ಲಿಪ್‌ಕಾರ್ಟ್ ಇಂಟರ್ನ್‌ಶಿಪ್ ಲಾಂಚ್‌ಪ್ಯಾಡ್ ಪ್ರೋಗ್ರಾಮ್ ದೊರೆಯಲಿದೆ. ಹಬ್ಬದ ಸೀಸನ್ ಹಾಗೂ ಬಿಗ್ ಬಿಲಿಯನ್ ಡೇಸ್ ಮಾರಾಟ ಮುಗಿದ ನಂತರವೂ ಇದು ಮುಂದುವರಿಯಲಿದೆ. 45 ದಿನಗಳ ಇಂಟರ್ನ್‌ಶಿಪ್ ವಿದ್ಯಾರ್ಥಿಗಳಿಗೆ ನಿರ್ಣಾಯಕ ಕೌಶಲ್ಯಗಳನ್ನು ಪಡೆಯಲು ಮತ್ತು ಇ-ಕಾಮರ್ಸ್ ಉದ್ಯಮಕ್ಕಾಗಿ ತರಬೇತಿ ಪಡೆದ ವೃತ್ತಿಪರರ ಪರಿಸರ ವ್ಯವಸ್ಥೆಯನ್ನು ರಚಿಸಲು ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ.
ಮುಂದುವರಿದ ಲಾಕ್‌ಡೌನ್ ಹೀರೋ ಸೋನು ಸೂದ್ ಸಮಾಜಮುಖಿ ಕಾರ್ಯ
ಕರ್ನಾಟಕದ ಮಾಲೂರು ಇದೆ
ಕಳೆದ ವರ್ಷ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಿನೋಲಾ (ಹರಿಯಾಣ), ಭಿವಾಂಡಿ (ಮಹಾರಾಷ್ಟ್ರ), ಉಲುಬೇರಿಯಾ ಮತ್ತು ಡಂಕುಣಿ (ಪಶ್ಚಿಮ ಬಂಗಾಳ) ಮತ್ತು ಮಾಲೂರು (ಕರ್ನಾಟಕ), ಮೆಡ್ಚಲ್ (ತೆಲಂಗಾಣ) ಮತ್ತು ಇನ್ನೂ ಅನೇಕ ಸ್ಥಳಗಳಲ್ಲಿ ಶಿಕ್ಷಣ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಫ್ಲಿಪ್‌ಕಾರ್ಟ್ ತಿಳಿಸಿದೆ. ಅಲ್ಲೆಲ್ಲ ಫ್ಲಿಪ್ ಕಾರ್ಟ್ ತನ್ನ ಕೇಂದ್ರಗಳನ್ನ ಹೊಂದಿದೆ.
ಇ ಕಾಮರ್ಸ್ ಸಪ್ಲೈ ಬಗ್ಗೆ ತಿಳಿವಳಿಕೆ
ಮುಂಬರುವ ಹಬ್ಬದ ಸಂದರ್ಭದಲ್ಲಿ ನಮ್ಮ ಇಂಟರ್ನಿಗಳಿಗೆ ಆಕರ್ಷಕವಾಗಿ ಮತ್ತು ತಲ್ಲೀನಗೊಳಿಸುವ ಕೆಲಸದ ಅನುಭವವನ್ನು ಒದಗಿಸುವ ವಿಶ್ವಾಸವಿದೆ. ಇದು ಪೂರೈಕೆ ಸರಪಳಿಯ ಕಡೆಗೆ ಹೆಚ್ಚಿನ ಆಸಕ್ತಿಯನ್ನು ಉಂಟುಮಾಡಲು ಸಹಾಯ ಮಾಡುತ್ತದೆ ಎಂದು ಫ್ಲಿಪ್‌ಕಾರ್ಟ್ ಕಂಪನಿ ಹೇಳಿಕೊಂಡಿದೆ.
ಇಂಟರ್ನ್‌ಶಿಪ್‌ಗೆ ಸೇರಿದ ನಂತರ, ವಿದ್ಯಾರ್ಥಿಗಳಿಗೆ ಅವರ ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡುವ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು, ಪೂರೈಕೆ ಸರಪಳಿ ನಿರ್ವಹಣೆಯ ವಿವಿಧ ಅಂಶಗಳಲ್ಲಿ ತರಬೇತಿ ನೀಡಲಾಗುವುದು.
ತರಗತಿ ಗೆ ಪ್ರವೇಶಿಸುವ ಮೊದಲು ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್, ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವುದು ಕಡ್ಡಾಯವಾಗಿದೆ. ಅಲ್ಲದೆ ಎಲ್ಲಾ ಸಮಯದಲ್ಲೂ ಆರೋಗ್ಯಾ ಸೇತು ಅಪ್ಲಿಕೇಶನ್‌ನ ಬಳಕೆ ಕೂಡ ಇದರಲ್ಲಿ ಸೇರಿದೆ ಎಂದು ಕಂಪನಿ ತಿಳಿಸಿದೆ.
IPL ಗ್ರೌಂಡಲ್ಲಿ Unacademy board: ಇದರ ಹಿಂದಿದೆ ಯಶಸ್ಸಿನ ಕಥೆ
ಈ ಕೋರ್ಸ್ ವಿದ್ಯಾರ್ಥಿಗಳು ತಮ್ಮ ಕಾರ್ಯಾಚರಣೆಗಳಲ್ಲಿ ಚುರುಕುತನವನ್ನು ಬೆಳೆಸಲು ಸಹಾಯ ಮಾಡುತ್ತದೆ.ವೇಗವಾಗಿ ಬದಲಾಗುತ್ತಿರುವ ಈ ಸನ್ನಿವೇಶಕ್ಕೆ ತಕ್ಕಂತೆ ಕೌಶಲ್ಯವನ್ನು ವೃದ್ದಿಸಿಕೊಳ್ಳಲು ನೆರವಾಗಲಿದೆ ಎಂದು ಕಂಪನಿ ಹೇಳಿದೆ.