
ಬೆಂಗಳೂರು (ಜು.7) ಫ್ಲಿಪ್‌ಕಾರ್ಟ್ ಫೌಂಡೇಶನ್ ಮತ್ತು ದಿ ಅಕ್ಷಯ ಪಾತ್ರ ಫೌಂಡೇಶನ್ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಸರ್ಕಾರಿ ಶಾಲೆಗಳ 1 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಬೆಳಗಿನ ಉಪಾಹಾರವನ್ನು ವಿತರಿಸಲಾಗಿದೆ.
ಅಕ್ಷಯ ಪಾತ್ರ ಸಂಸ್ಥೆಅಕ್ಷಯ ಪಾತ್ರ ಸಂಸ್ಥೆಯ ಮಾರ್ನಿಂಗ್ ನ್ಯೂಟ್ರಿಷನ್ ಪ್ರೋಗ್ರಾಮ್ ಅಡಿಯಲ್ಲಿ ಜಾರಿಗೊಳಿಸಲಾದ ಈ ಯೋಜನೆಯು, ಭಾರತ ಸರ್ಕಾರದ ಪಿಎಂ ಪೋಷಣ್ ಕಾರ್ಯಕ್ರಮಕ್ಕೆ ಪೂರಕವಾಗಿ ನಡೆಯುತ್ತಿದೆ. 21 ಲಕ್ಷಕ್ಕೂ ಹೆಚ್ಚು ಬಾರಿ ಪೌಷ್ಟಿಕಾಂಶಯುಕ್ತ ಉಪಹಾರ ವಿತರಿಸುವ ಮೂಲಕ ಮಕ್ಕಳು ಉತ್ತಮ ಪೌಷ್ಟಿಕಾಂಶ, ಶಕ್ತಿ ಮತ್ತು ಏಕಾಗ್ರತೆಯೊಂದಿಗೆ ತಮ್ಮ ಶಾಲಾ ದಿನವನ್ನು ಪ್ರಾರಂಭಿಸಲು ಈ ಯೋಜನೆ ಸಹಾಯ ಮಾಡಿದೆ.
ಈ ಕುರಿತು ಫ್ಲಿಪ್‌ಕಾರ್ಟ್ ಗ್ರೂಪ್‌ನ ಮುಖ್ಯ ಕಾರ್ಪೊರೇಟ್ ವ್ಯವಹಾರಗಳ ಅಧಿಕಾರಿ ರಜನೀಶ್ ಕುಮಾರ್ ಪ್ರತಿಕ್ರಿಯಿಸಿ, ಧೀರ್ಘ ಅನುಭವ ಮತ್ತು ಮಕ್ಕಳ ಜೀವನವನ್ನು ಉತ್ತಮಗೊಳಿಸುವ ಬದ್ಧತೆಯನ್ನು ಹೊಂದಿರುವ ಸಂಸ್ಥೆಗಳೊಂದಿಗೆ ಕೆಲಸ ಮಾಡುವುದರಿಂದ ಮಾತ್ರ ಸುಸ್ಥಿರ ಬದಲಾವಣೆ ಸಾಧ್ಯ ಎಂಬ ನಮ್ಮ ನಂಬಿಕೆಗೆ ಈ ಸಹಯೋಗವೇ ಸಾಕ್ಷಿ ಎಂದಿದ್ದಾರೆ.