US Education: ಅಮೆರಿಕದಲ್ಲಿ ಓದಿ ಅಲ್ಲೇ ಕೆಲಸ ಮಾಡಬೇಕಾ? ₹95 ಲಕ್ಷ ಶುಲ್ಕ ಕಟ್ಟಲು ಸಿದ್ಧರಾಗಿ! ಟ್ರಂಪ್ ಹೊಸ ಪ್ಲಾನ್!

Ravi Janekal   | CMS
Published : Jul 31, 2026, 03:02 PM IST
Donald Trump Considers 100000 Doller Fee for Foreign Students to Work in US After Studies rav

ಸಾರಾಂಶ

ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆದು, ನಂತರ ಅಲ್ಲೇ ಉದ್ಯೋಗ ಮಾಡಬೇಕೆನ್ನುವುದು ಕನಸು ಹೊತ್ತು ಹಲವು ವಿದೇಶಿ ವಿದ್ಯಾರ್ಥಿಗಳಿಗೆ ಡೊನಾಲ್ಡ್ ಟ್ರಂಪ್ ಆಡಳಿತ ಶಾಕ್ ನೀಡುವ  ಸಾಧ್ಯತೆಯಿದೆ. ವರದಿಗಳ ಪ್ರಕಾರ, ಇಂತಹ ವಿದ್ಯಾರ್ಥಿಗಳಿಂದ  95 ಲಕ್ಷ ರೂ.ಶುಲ್ಕ ವಸೂಲಿ ಮಾಡುವ ಪ್ರಸ್ತಾಪವೊಂದು ಚರ್ಚೆಯಲ್ಲಿದೆ.

ಅಮೆರಿಕದಲ್ಲಿ ಓದಿ, ಅಲ್ಲೇ ಕೆಲಸ ಹುಡುಕಿ ಜೀವನ ರೂಪಿಸಿಕೊಳ್ಳಬೇಕು ಎಂಬುದು ಇಂದಿನ ಬಹುತೇಕ ಯುವಕರ ಕನಸು. ಇಂಥ ಕನಸು ಹೊತ್ತು ಅಮೆರಿಕ ಹೋಗುವ ವಿದೇಶಿ ವಿದ್ಯಾರ್ಥಿಗಳಿಗೆ ಡೊನಾಲ್ಡ್ ಶಾಕ್ ಕೊಟ್ಟಿದ್ದಾನೆ. ವಿಷ್ಯ ಏನಪ್ಪಂದ್ರೆ, ಯಾರು ಅಮೆರಿಕದಲ್ಲಿ ಶಿಕ್ಷಣ ಉದ್ಯೋಗದ ಕನಸು ಕಟ್ಟಿಕೊಂಡು ದೇಶಕ್ಕೆ ಬರ್ತಾರೋ ಅಂಥ ವಿದ್ಯಾರ್ಥಿಗಳ ಮೇಲೆ ಆರ್ಥಿಕ ಹೊರೆ ಹಾಕುವ ಪ್ಲಾನ್ ಮಾಡಲಾಗಿದೆ.

ವರದಿಗಳ ಪ್ರಕಾರ, ಡೊನಾಲ್ಡ್ ಟ್ರಂಪ್ ಆಡಳಿತವು ವಿದೇಶಿ ವಿದ್ಯಾರ್ಥಿಗಳಿಗೆ ಶಿಕ್ಷಣದ ನಂತರ ವರ್ಕ್ ಪರ್ಮಿಟ್ ನೀಡಲು ಬರೋಬ್ಬರಿ 1 ಲಕ್ಷ ಡಾಲರ್, ಅಂದರೆ ಸುಮಾರು 95 ಲಕ್ಷ ರೂಪಾಯಿ ಶುಲ್ಕ ವಿಧಿಸುವ ಹೊಸ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ಇದನ್ನ ಟ್ರಂಪ್ ಸರ್ಕಾರವು ಗಂಭೀರವಾಗಿ ಪರಿಗಣಿಸುತ್ತಿದೆ. ಒಂದು ವೇಳೆ ಈ ನಿಯಮ ಜಾರಿಗೆ ಬಂದರೆ ಭಾರತದಂತಹ ದೇಶಗಳಿಂದ ಶೈಕ್ಷಣಿಕ ಸಾಲ ಪಡೆದು ಅಮೆರಿಕಕ್ಕೆ ಹೋಗುವ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಲಿದೆ. ಓದಿನ ನಂತರ ಒಂದಷ್ಟು ವರ್ಷ ಕೆಲಸ ಮಾಡಿ ಸಾಲ ತೀರಿಸುವ ಮತ್ತು ಅನುಭವ ಗಳಿಸುವ ಅವರ ಪ್ಲಾನ್‌ಗಳಿಗೆ ಟ್ರಂಪ್‌ನ ಈ ಪ್ರಸ್ತಾಪ ತಣ್ಣೀರೆರಚಬಹುದು.

ವಿದೇಶಿ ವಿದ್ಯಾರ್ಥಿಗಳೇ ಟ್ರಂಪ್ ಟಾರ್ಗೆಟ್?

ಟ್ರಂಪ್ ಆಡಳಿತದ ಈ ಚಿಂತನೆಯು 'ಅಮೆರಿಕನ್ ಫಸ್ಟ್' ನೀತಿಯ ಮುಂದುವರಿದ ಭಾಗ ಎಂದೇ ವಿಶ್ಲೇಷಿಸಲಾಗುತ್ತಿದೆ. ಅಮೆರಿಕದ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದ ನಂತರ ದೇಶದಲ್ಲಿಯೇ ಉಳಿದು ಕೆಲಸ ಮಾಡಲು ಇಚ್ಛಿಸುವವರಿಗೆ ಮಾತ್ರ ಈ ದುಬಾರಿ ಶುಲ್ಕ ಅನ್ವಯವಾಗಲಿದೆ ಎಂದು ವರದಿಗಳು ಹೇಳಿವೆ. ಸದ್ಯಕ್ಕೆ ಇದೊಂದು ಪ್ರಸ್ತಾಪವಾಗಿದ್ದು, ಇನ್ನೂ ಚರ್ಚೆಯ ಹಂತದಲ್ಲಿದೆ. ಒಂದು ವೇಳೆ ಈ ಪ್ರಸ್ತಾಪ ಕಾನೂನಾಗಿ ಬದಲಾದರೆ, ಅಮೆರಿಕವು ಉನ್ನತ ಶಿಕ್ಷಣಕ್ಕೆ ಅತ್ಯಂತ ದುಬಾರಿ ದೇಶವಾಗಿ ಬದಲಾಗುವುದರಲ್ಲಿ ಸಂಶಯವಿಲ್ಲ. ಇದು ಅಮೆರಿಕದ ಉನ್ನತ ಶಿಕ್ಷಣ ವ್ಯವಸ್ಥೆಯ ಆಕರ್ಷಣೆಯನ್ನೇ ಕಡಿಮೆ ಮಾಡಬಹುದು. ಆಗ, ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳು ಅಮೆರಿಕದ ಬದಲು ಕೆನಡಾ, ಆಸ್ಟ್ರೇಲಿಯಾ ಅಥವಾ ಯುರೋಪ್ ದೇಶಗಳತ್ತ ಮುಖ ಮಾಡುವ ಸಾಧ್ಯತೆ ಹೆಚ್ಚಾಗುತ್ತದೆ. ಸದ್ಯಕ್ಕೆ ಇದೊಂದು ಪ್ರಸ್ತಾಪವಷ್ಟೇ ಆಗಿದ್ದರೂ, ಟ್ರಂಪ್ ಆಡಳಿತದ ಹಿಂದಿನ ಕಠಿಣ ವಲಸೆ ನೀತಿಗಳ ಹಿನ್ನೆಲೆ ನೋಡಿದರೆ ಇದು ನಿಜವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈ ಸುದ್ದಿ ಹೊರಬೀಳುತ್ತಿದ್ದಂತೆ ಅಮೆರಿಕದಲ್ಲಿರುವ ವಿದೇಶಿ ವಿದ್ಯಾರ್ಥಿ ಸಮುದಾಯದಲ್ಲಿ ಸಹಜವಾಗಿಯೇ ಆತಂಕ ಮನೆಮಾಡಿದೆ.

PREV
click me!

Recommended Stories

650 ರಿಂದ 500, ಕೊನೆಗೆ 135: ಒಂದೇ ದಿನದಲ್ಲಿ ಮೂರು ಬಾರಿ ಬದಲಾದ NEET ಸ್ಕೋರ್‌, ಕೋರ್ಟ್‌ ಮೆಟ್ಟಿಲೇರಿದ ಅಭ್ಯರ್ಥಿ!
ಭದ್ರತಾ ಸಲಹೆಗಾರ ಅಜಿತ್ ದೋವಲ್ ದಿಢೀರ್​ ಸಂಸತ್ತಿಗೆ ಎಂಟ್ರಿ: ವಿಪಕ್ಷಗಳು ತಲ್ಲಣ- ಏನಿದರ ವಿಶೇಷತೆ