SSLC ರಿಸಲ್ಟ್ ಪ್ರಕಟವಾದ ಬೆನ್ನಲ್ಲೇ ಫಸ್ಟ್ PUC ಅಡ್ಮಿಷನ್‌ ಆರಂಭ: ಇಲ್ಲಿದೆ ಸಂಪೂರ್ಣ ಮಾಹಿತಿ

By Suvarna News  |  First Published Aug 10, 2021, 8:03 PM IST

* ಪ್ರಥಮ ಪಿಯುಸಿ ದಾಖಲಾತಿ ಪ್ರಕ್ರಿಯೆಗೆ ಚಾಲನೆ
* ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ  ಸುತ್ತೋಲೆ
* ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ ಆಗಸ್ಟ್ 31 ದಾಖಲಾತಿಗೆ ಕೊನೆಯ ದಿನ


ಬೆಂಗಳೂರು, (ಆ.10): 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಇದೀಗ ಪ್ರಥಮ ಪಿಯುಸಿ ದಾಖಲಾತಿ ಪ್ರಕ್ರಿಯೆ ಆರಂಭವಾಗಲಿದೆ.

ಪದವಿ ಪೂರ್ವ ಶಿಕ್ಷಣ ಇಲಾಖೆ ಇಂದು (ಆ.10) ಪ್ರಥಮ ಪಿಯುಸಿ ದಾಖಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸುತ್ತೋಲೆ ಹೊರಡಿಸಿದೆ. ಅಡ್ಮಿಷನ್ ದಿನಾಂಕ ಹಾಗು ಅಡ್ಮಿಷನ್ ಶುಲ್ಕ ಸೇರಿದಂತೆ ಹಲವು ಮಾಹಿತಿಗಳನ್ನು ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.

Tap to resize

Latest Videos

ಆ. 23ರಿಂದಲೇ ಪದವಿ ಪ್ರವೇಶಕ್ಕೆ ವಿದ್ಯಾರ್ಥಿಗಳ ದಾಖಲಾತಿ ಆರಂಭ: ಅಶ್ವತ್ಥನಾರಾಯಣ

ಇಂದಿನಿಂದ ಅಂದ್ರೆ ಆ.10ರಿಂದ ಆಗಸ್ಟ್ 30 ರ ವರೆಗೆ ದಂಡ ಶುಲ್ಕವಿಲ್ಲದ ದಾಖಲಾತಿ ಅವಕಾಶ ನೀಡಲಾಗಿದೆ. ಬಳಿಕ ಸೆಪ್ಟೆಂಬರ್ 1 ರಿಂದ 11ರವರೆಗೆ ದಂಡ ಸಮೇತ ಅಡ್ಮಿಷನ್‌ ಪ್ರಕ್ರಿಯೆ ನಡೆಯಲಿದೆ.

ಸೆಪ್ಟೆಂಬರ್ 11ರ ಬಳಿಕ ದಾಖಲಾತಿ ಆಗಿಲ್ಲ ಅಂದ್ರೆ  ಸೆಪ್ಟೆಂಬರ್ 13 ರಿಂದ 25 ರವರೆಗೆ ವಿಶೇಷ ದಂಡ 2890 ರೂ ಪೈನ್ ಕಟ್ಟಿ ದಾಖಲಾತಿ ಆಗಬಹುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ನಿನ್ನೆ (ಆ.09) ಅಷ್ಟೇ ಎಸ್‌ಎಸ್‌ಎಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಓರ್ವ ವಿದ್ಯಾರ್ಥಿಯನ್ನು ಹೊರತಿಪಡಿಸಿ ಇನ್ನುಳಿದ ಅಂದ್ರೆ ಪರೀಕ್ಷೆ ಬರೆದು ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

click me!