BCWD PhD Students Scholarship 2021-22: ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ PhD ವ್ಯಾಸಂಗ ವೇತನಕ್ಕೆ ಅರ್ಜಿ ಆಹ್ವಾನ

By Suvarna News  |  First Published Dec 22, 2021, 8:42 PM IST
  • ಪಿಎಚ್.ಡಿ ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವ್ಯಾಸಂಗ ವೇತನ
  • ಫೆಲೋಶಿಪ್ ಮಂಜೂರಾತಿಗಾಗಿ ಹಿಂದುಳಿದ ವರ್ಗಗಳ ಇಲಾಖೆಯಿಂದ ಅರ್ಜಿ ಆಹ್ವಾನ
  • ಡಿಸೆಂಬರ್ 30 ಅರ್ಜಿ ಸಲ್ಲಿಸಲು ಕೊನೆ ದಿನ

ಬೆಂಗಳೂರು ಡಿ(22): 2021-22ನೇ ಸಾಲಿನ ಪೂರ್ಣಾವಧಿ ಪಿಎಚ್.ಡಿ ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ವ್ಯಾಸಂಗ ವೇತನ/ಫೆಲೋಶಿಪ್ ಮಂಜೂರಾತಿಗಾಗಿ ಹಿಂದುಳಿದ ವರ್ಗಗಳ ಇಲಾಖೆಯಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು  ಡಿಸೆಂಬರ್ 30, 2021ರ ಸಂಜೆ 5:30ರೊಳಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಕೋರಲಾಗಿದೆ. 2021-22ನೇ ಸಾಲಿನಲ್ಲಿ ಕರ್ನಾಟಕದ ಶಾಸನಬದ್ದ ವಿಶ್ವ ವಿದ್ಯಾಲಯಗಳಲ್ಲಿ/ಅಧೀನಕ್ಕೆ ಒಳಪಡುವ ಸಂಸ್ಥೆಗಳಲ್ಲಿ ಪ್ರಥಮ ವರ್ಷದ ಪಿಹೆಚ್.ಡಿ ಅಧ್ಯಯನ ಮಾಡುತ್ತಿರುವ ಹೊಸ ವಿದ್ಯಾರ್ಥಿಗಳು ಮಾತ್ರ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ.

ಪ್ರಸಕ್ತ ಸಾಲಿನಲ್ಲಿ ಪೂರ್ಣಾವಧಿ ಪಿಎಚ್.ಡಿ ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ, 3ಬಿ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ/ಫೆಲೋಶಿಪ್ ಕೊಡಲಾಗುತ್ತದೆ.

Latest Videos

undefined

ಮಾನವಿಕ ವಿಷಯಗಳು, ಭಾಷೆ, ಸಮಾಜ ವಿಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಕೃಷಿ ಮತ್ತು ಸಂಬಂಧಿತ ವಿಜ್ಞಾನಗಳು, ವಾಣಿಜ್ಯ ಮತ್ತು ನಿರ್ವಹಣೆ, ತಾಂತ್ರಿಕ ಹಾಗೂ ವೈದ್ಯಕೀಯ ವಿಜ್ಞಾನಗಳಲ್ಲಿ ಪೂರ್ಣಾವಧಿ ಪಿಎಚ್.ಡಿ ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ಅರ್ಹ ವಿದ್ಯಾರ್ಥಿಗಳಿಗೆ ತಿಂಗಳಿಗೆ ರೂ.10,000/- ದಂತೆ ವಿದ್ಯಾರ್ಥಿ ವೇತನ/ಫೆಲೋಶಿಪ್  ಪ್ರವರ್ಗವಾರು ಮೀಸಲಾತಿ ಹಾಗೂ ಅನುದಾನ ಲಭ್ಯತೆಗೆ ಅನುಗುಣವಾಗಿ ಅರ್ಹ ವಿದ್ಯಾರ್ಥಿಗಳಿಗೆ ಸಿಗಲಿದೆ.

Reliance Foundation scholarship: ವಿದ್ಯಾರ್ಥಿ ವೇತನಕ್ಕೆ Reliance ಫೌಂಡೇಶನ್ ಅರ್ಜಿ ಆಹ್ವಾನ, UGಗೆ 4ಲಕ್ಷ, PGಗೆ 6ಲಕ್ಷ ರೂ

ವಿದ್ಯಾರ್ಥಿ ವೇತನ ಪಡೆಯಲು ಇರಬೇಕಾದ ಮಾನದಂಡಗಳು ಇಂತಿದೆ:
*ಭಾರತದ ಪ್ರಜೆಯಾಗಿ ಕರ್ನಾಟಕದಲ್ಲಿ ಖಾಯಂ ವಾಸ್ತವ್ಯದಲ್ಲಿರಬೇಕು.
*ಕರ್ನಾಟಕ ಸರಕಾರ ಅಧಿಸೂಚಿಸಿರುವ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿರಬೇಕು.
*ಕರ್ನಾಟಕದ ಶಾಸನಬದ್ಧ ವಿಶ್ವವಿದ್ಯಾಲಯಗಳಲ್ಲಿಅಥವಾ ವಿಶ್ವವಿದ್ಯಾಲಯದ ಅಧೀನಕ್ಕೆ ಒಳಪಡುವ ಸಂಸ್ಥೆಗಳಲ್ಲಿ ಪೂರ್ಣಾವಧಿ (Full Time) ಪಿಎಚ್.ಡಿ ಅಧ್ಯಯನದಲ್ಲಿ ತೊಡಗಿರಬೇಕು.
*ಸೌಲಭ್ಯವನ್ನು ಪಡೆಯಲಿಚ್ಛಿಸುವ ವಿದ್ಯಾರ್ಥಿಯು ಭಾರತ ಸರ್ಕಾರ /ಕರ್ನಾಟಕ ಸರ್ಕಾರ/ವಿಶ್ವವಿದ್ಯಾಲಯ ಅಥವಾ ಇತರೆ ಯಾವುದೇ ಸಂಸ್ಥೆಗಳಿಂದ ಮಾಸಿಕ ವ್ಯಾಸಂಗ ವೇತನ/ಫೆಲೋಶಿಪ್ ಗೆ ಆಯ್ಕೆಯಾಗಿರಬಾರದು.

GATE Exam Schedule 2022: ಇಂಜಿನಿಯರಿಂಗ್ GATE 2022ರ ಪರೀಕ್ಷೆಯ ದಿನಾಂಕ ಪ್ರಕಟ

ವಿದ್ಯಾರ್ಥಿ ವೇತನ ಪಡೆಯಲು ಇರಬೇಕಾದ ಶೈಕ್ಷಣಿಕ ಅರ್ಹತೆಗಳು ಇಂತಿದೆ:
*ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ.55 ಅಂಕಗಳನ್ನು ಪಡೆದಿರಬೇಕು.
*ವಿಶ್ವವಿದ್ಯಾಲಯ ಅಥವಾ ಅಧಿಕೃತ ಸಂಸ್ಥೆಗಳಲ್ಲಿ ಸಂಶೋಧನಾ ಮಾರ್ಗದರ್ಶಕರ ಅಡಿಯಲ್ಲಿ ಪಿಎಚ್.ಡಿ ಅಧ್ಯಯನಕ್ಕಾಗಿ ಹೆಸರು ನೋಂದಣಿ ಮಾಡಿಕೊಂಡಿರಬೇಕು.
*ಅಭ್ಯರ್ಥಿಗೆ ಗರಿಷ್ಠ 35 ವರ್ಷಗಳಾಗಿರಬೇಕು

RUDSETI Self Employment Training: ಸ್ವ ಉದ್ಯೋಗ ಉಚಿತ ತರಬೇತಿಗೆ ರುಡ್‌ಸೆಟ್‌ ಅರ್ಜಿ

ವಿದ್ಯಾರ್ಥಿ ವೇತನ ಪಡೆಯಲು ಇಚ್ಚಿಸುವ ವಿದ್ಯಾರ್ಥಿ ಮತ್ತು ಕುಟುಂಬದ ಒಟ್ಟು ವಾರ್ಷಿಕ ಆದಾಯಮಿತಿ:
*ಪ್ರವರ್ಗ-1 - ರೂ.4.50 ಲಕ್ಷ.
*ಪ್ರವರ್ಗ-2(ಎ), 3(ಎ), 3(ಬಿ) ಮತ್ತು Other OBC - ರೂ.3.50 ಲಕ್ಷ.

RRI Recruitment 2022: ಬೆಂಗಳೂರಿನ ರಾಮನ್​ ಸಂಶೋಧನಾ ಸಂಸ್ಥೆಯಲ್ಲಿ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆ

ಕೇಂದ್ರ / ರಾಜ್ಯ ಸರ್ಕಾರಿ / ಅನುದಾನಿತ ಸಂಸ್ಥೆ / ಸಾರ್ವಜನಿಕ ಸ್ವಾಮ್ಯತೆಗೆ ಒಳಪಟ್ಟ ಸಂಸ್ಥೆಗಳ ಉದ್ಯೋಗಿಗಳು ಈ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುವುದಿಲ್ಲ.  ಆದರೆ ಈ ನಿರ್ಬಂಧ ಹೆಣ್ಣು ಮಕ್ಕಳಿಗೆ ಅನ್ವಯಿಸುವುದಿಲ್ಲ. ಒಬ್ಬ ವಿದ್ಯಾರ್ಥಿಗೆ ಒಂದು ಬಾರಿ ಮಾತ್ರ ಪಿಎಚ್.ಡಿ ಅಧ್ಯಯನಕ್ಕಾಗಿ ಈ ಸೌಲಭ್ಯವನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ: 8050770004 ಮತ್ತು ಅಧಿಕೃತ ವೆಬ್‌ಸೈಟ್‌: https://bcwd.karnataka.gov.in/ ಗೆ ಭೇಟಿ ನೀಡಬಹುದು.

click me!