* ಶಾಲಾ- ಕಾಲೇಜುಗಳಲ್ಲಿ ಏಕರೂಪದ ವಸ್ತ್ರಸಂಹಿತೆ ತನ್ನಿ: ನಿವೃತ್ತ ವೀಸಿಗಳು
* ಶ್ರೀಮಂತರ ಉಡುಪು ಕಂಡು ಬಡವರು ವಿಚಲಿತರಾಗ್ತಾರೆ
* ಇದರಿಂದ ಶಿಕ್ಷಣ ಸಂಸ್ಥೆಗಳಲ್ಲಿ ಏಕಾಗ್ರತೆಗೆ ಭಂಗವಾಗುತ್ತೆ
ಬೆಂಗಳೂರು(ಮಾ. 02) ಹಿಜಾಬ್ ವಿವಾದ (Hijab Row) ತಾರಕಕ್ಕೇರಿರುವ ಬೆನ್ನಲ್ಲೇ ಕರ್ನಾಟಕ (Karnataka) ವಿಶ್ರಾಂತ ಕುಲಪತಿಗಳ ವೇದಿಕೆಯು ಶೈಕ್ಷಣಿಕ ಸಂಸ್ಥೆಗಳಲ್ಲಿ ಏಕರೂಪದ ವಸ್ತ್ರ ಸಂಹಿತೆಯಿಂದ (School Uniforms) ಶಾಂತಿಯುತ ವಾತಾವರಣ ನಿರ್ಮಾಣವಾಗಿ ಕಲಿಕೆಗೆ ಸಹಾಯಕವಾಗುತ್ತದೆ. ಸಾರ್ವಜನಿಕ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ಏಕರೂಪದ ಡ್ರೆಸ್ ಕೋಡ್ ಜಾರಿಗೆ ತರಬೇಕು ಎಂದು ಅಭಿಪ್ರಾಯಪಟ್ಟಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ವೇದಿಕೆ ಉಪಾಧ್ಯಕ್ಷ ಪ್ರೊ.ಕೆ.ನಾರಾಯಣ ಗೌಡ, ಕಾರ್ಯಕಾರಿ ಸದಸ್ಯ ಪ್ರೊ.ಆರ್.ಎನ್.ಶ್ರೀನಿವಾಸಗೌಡ, ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಬಡವರು ಅಥವಾ ಶ್ರೀಮಂತರು, ಯಾವುದೇ ಜಾತಿ ಅಥವಾ ಧರ್ಮದವರು ಅಡೆತಡೆಯಿಲ್ಲದೆ ಗುಣಮಟ್ಟದ ವಿದ್ಯಾಭ್ಯಾಸ ಮಾಡಬೇಕಾದರೆ ವಸ್ತ್ರ ಸಂಹಿತೆ ಸಹ ಪ್ರಮುಖ ಅಂಶಗಳಲ್ಲೊಂದಾಗಿದೆ. ವಿದ್ಯಾರ್ಥಿಗಳು ಶೈಕ್ಷಣಿಕ ಸಂಸ್ಥೆಗಳಿಂದ ಹೊರಬಂದ ನಂತರ ತಮ್ಮ ಆಯ್ಕೆಯ ಉಡುಗೆಯನ್ನು ಬಳಸಲು ಸ್ವತಂತ್ರರು ಎಂದು ತಿಳಿಸಿದ್ದಾರೆ.
ಶ್ರೀಮಂತ ವಿದ್ಯಾರ್ಥಿಗಳು ಸಾಮಾನ್ಯವಾಗಿ ಹೆಚ್ಚಿನ ಮೌಲ್ಯದ ಫ್ಯಾಷನ್ ಉಡುಪುಗಳನ್ನು ಧರಿಸುತ್ತಾರೆ. ಕಡಿಮೆ ಆರ್ಥಿಕ ಹಿನ್ನೆಲೆಯ ವಿದ್ಯಾರ್ಥಿಗಳು ದಿನವೂ ದುಬಾರಿ ಬೆಲೆಯ ಫ್ಯಾಷನಬಲ್ ಡ್ರೆಸ್‌ಗಳನ್ನು ಧರಿಸಿದ ವಿದ್ಯಾರ್ಥಿಗಳನ್ನು ಕಂಡಾಗ ಸಾಮಾನ್ಯವಾಗಿ ವಿಚಲಿತರಾಗುತ್ತಾರೆ. ಇದರಿಂದ ಏಕಾಗ್ರತೆಗೆ ಭಂಗ ಬರುತ್ತದೆ. ನಾವೇನು ಪಾಪ ಮಾಡಿದ್ದೇವೆ ಎಂದು ಶಪಿಸಿಕೊಳ್ಳುತ್ತಾರೆ. ಈ ಸನ್ನಿವೇಶಗಳು ತರಗತಿಯಲ್ಲಿ ಪದೇ ಪದೇ ಮರುಕಳಿಸುತ್ತವೆ ಎಂದು ವಿವರಿಸಿದ್ದಾರೆ.
ಪರೀಕ್ಷೆ ತಪ್ಪಿಸಿಕೊಂಡರೆ ಸರ್ಕಾರ ಜವಾಬ್ದಾರನಲ್ಲ
ವಸ್ತ್ರ ಸಂಹಿತೆ ಜಾರಿಯಲ್ಲಿದ್ದರೆ ಕ್ಯಾಂಪಸ್‌ಗೆ ಅನಧಿಕೃತ ವ್ಯಕ್ತಿಗಳ ಪ್ರವೇಶವನ್ನು ಗುರುತಿಸಲು ಸಹಾಯಕವಾಗುತ್ತದೆ. ಪೋಷಕರು ದುಬಾರಿ ಉಡುಪುಗಳಿಗೆ ಹೆಚ್ಚು ಖರ್ಚು ಮಾಡದಂತೆ ತಡೆಯುತ್ತದೆ. ವಿವಿಧ ರೀತಿಯ ಉಡುಪುಗಳು ಮತ್ತು ಧಾರ್ಮಿಕ ಒತ್ತಾಯಗಳಿಂದ ವಿದ್ಯಾರ್ಥಿಗಳನ್ನು ವಿಭಜಿಸಿದರೆ, ವಿದ್ಯಾರ್ಥಿಗಳು ಪರಸ್ಪರ ಸಂವಹನ ಮಾಡುವುದನ್ನು ತಪ್ಪಿಸಲು ಒಲವು ತೋರುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಎಸ್ಸೆಸ್ಸೆಲ್ಸಿ (SSLC) ಪರೀಕ್ಷೆಗೆ 8.73 ಲಕ್ಷ ವಿದ್ಯಾರ್ಥಿಗಳು ನೋಂದಣಿ : ಮಾ.28 ರಿಂದ ಏ.11ರವರೆಗೆ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ರಾಜ್ಯಾದ್ಯಂತ 8.73 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ವಸ್ತುನಿಷ್ಠ ಮಾದರಿಯ ಪ್ರಶ್ನೆಗಳೊಂದಿಗೆ ಹಳೆಯ ಪದ್ಧತಿಯಲ್ಲೇ ಪರೀಕ್ಷೆ ನಡೆಯಲಿದೆ. ಕೊರೋನಾ ಕಾರಣದಿಂದ ಶಾಲೆಗಳಿಗೆ ರಜೆ ಘೋಷಿಸಿದ್ದ ಹಿನ್ನೆಲೆಯಲ್ಲಿ ಶೇ.20 ರಷ್ಟುಪಠ್ಯಕಡಿತಗೊಳಿಸಿ ಈಗಾಗಲೇ ಪೂರ್ವ ಸಿದ್ಧತಾ ಪರೀಕ್ಷೆ ಮುಗಿಸಲಾಗಿದೆ. ಸಾಮಾನ್ಯವಾಗಿ 20 ರಿಂದ 25 ಸಾವಿರ ಖಾಸಗಿ ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ತೆಗೆದುಕೊಳ್ಳುತ್ತಿದ್ದರು, ಆದರೆ ಈ ಸಲ ಅವರ ಸಂಖ್ಯೆ 46 ಸಾವಿರಕ್ಕೆ ಹೆಚ್ಚಳವಾಗಿದೆ. 2019-20 ರಲ್ಲಿ 8ನೇ ತರಗತಿ ಮತ್ತು 2020-21ರಲ್ಲಿ 9ನೇ ತರಗತಿಯ ಪರೀಕ್ಷೆ ನಡೆಸದೆ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಲಾಗಿತ್ತು. ಇದೀಗ ಈ ಮಕ್ಕಳು ಎಸ್ಸೆ್ಸಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ.
ಎಲ್ಲಿಗೆ ಬಂತು ಹಿಜಾಬ್ ಗೊಂದಲ: ಉಡುಪಿಯ ಶಾಲೆಯೊಂದರಲ್ಲಿ ಆರಂಭವಾದ ಹಿಜಾಬ್ ಗೊಂದಲ ಕರ್ನಾಟಕ ಹೈಕೋರ್ಟ್ ವರೆಗೆ ಬಂದಿ ನಿಂತಿದೆ. ಹಿಜಾಬ್ ಧರಿಸಿ ವಿದ್ಯಾಋfಥಿನಯರು ಬರುವುದಾದರೆ ನಾವು ಕೇಸರಿ ಶಾಳು ಧರಿಸಿ ಬರುತ್ತೇವೆ ಎಂದು ಹಿಂದು ವದ್ಯಾರ್ಥಿಗಳು ಹೇಳುತ್ತಿದ್ದು ಕಾನೂನಿನ ಸೂತ್ರ ಇನ್ನು ಹೊರಗೆ ಬಂದಿಲ್ಲ. ಹೈಕೋರ್ಟ್ ನಲ್ಲಿ ವ್ಯಾಪಕ ವಾದ ವಿವಾದ ನಡೆದಿದ್ದು ಶಾಲಾ ಕಾಲೇಜುಗಳಲ್ಲಿ ಧಾರ್ಮಿಕ ಉಡುಗೆಗೆ ಅವಕಾಶ ಇಲ್ಲ ಎಂದು ಹೈಕೋರ್ಟ್ ಮಧ್ಯಂತರ ತೀರ್ಪು ನೀಡಿದೆ.