Karnataka Ukraine Students: ಉಕ್ರೇನ್ ನಿಂದ ತವರಿಗೆ ಬಂದ ಕರ್ನಾಟಕದ 37 ವಿದ್ಯಾರ್ಥಿಗಳು

By Suvarna News  |  First Published Feb 28, 2022, 11:49 PM IST

ಉಕ್ರೇನ್ ನಲ್ಲಿರುವ 454 ವಿದ್ಯಾರ್ಥಿಗಳನ್ನು ವಿದೇಶಾಂಗ ಇಲಾಖೆ ರಾಯಭಾರ ಕಚೇರಿಯ ಸಹಾಯದಿಂದ ಕರ್ನಾಟಕ ನಿಯಂತ್ರಣ ಕೊಠಡಿ ಬರಮಾಡಿಕೊಂಡಿದೆ ಎಂದು ಉಕ್ರೇನ್ ನಿಂದ ಕನ್ನಡಿಗರ ಸ್ಥಳಾಂತರಕ್ಕೆ ಸಮನ್ವಯ ಸಾಧಿಸುತ್ತಿರುವ ನೋಡಲ್ ಅಧಿಕಾರಿ ಹಿರಿಯ ಐಎಎಸ್ ಅಧಿಕಾರಿ ಮನೋಜ್ ರಾಜನ್ ತಿಳಿಸಿದ್ದಾರೆ.


ಬೆಂಗಳೂರು (ಫೆ.28): ಯುದ್ಧಪೀಡಿತ ಉಕ್ರೇನ್ (ukraine) ನಲ್ಲಿ ಸಿಕ್ಕಿಹಾಕಿಕೊಂಡಿರುವ 454 ವಿದ್ಯಾರ್ಥಿಗಳನ್ನು ವಿದೇಶಾಂಗ ಇಲಾಖೆ ರಾಯಭಾರ ಕಚೇರಿಯ ಸಹಾಯದಿಂದ ಕರ್ನಾಟಕ ನಿಯಂತ್ರಣ ಕೊಠಡಿ ಬರಮಾಡಿಕೊಂಡಿದೆ ಎಂದು ಉಕ್ರೇನ್ ನಿಂದ ಕನ್ನಡಿಗರ ಸ್ಥಳಾಂತರಕ್ಕೆ ಸಮನ್ವಯ ಸಾಧಿಸುತ್ತಿರುವ ನೋಡಲ್ ಅಧಿಕಾರಿ ಹಿರಿಯ ಐಎಎಸ್ ಅಧಿಕಾರಿ ಮನೋಜ್ ರಾಜನ್ (Senior IFS officer Manoj Rajan) ತಿಳಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಮನ್ವಯತೆಯಿಂದ ಈ ಹಿಂದೆ 31 ವಿದ್ಯಾರ್ಥಿಗಳು ಕರ್ನಾಟಕಕ್ಕೆ (Karnataka) ಉಕ್ರೇನ್ ನಿಂದ ಆಗಮಿಸಿದ್ದರೆ, ಇಂದು ಸಾಯಂಕಾಲ ಮತ್ತೆ 6 ಮಂದಿ ವಿದ್ಯಾರ್ಥಿಗಳು ಬರಲಿದ್ದು ಒಟ್ಟಾರೆ 5 ತಂಡಗಳಲ್ಲಿ ಆಗಮಿಸಲಿದ್ದಾರೆ ಎಂದರು. ಮೊದಲ ವಿದ್ಯಾರ್ಥಿಗಳ ತಂಡ ನಿನ್ನೆ ಬೆಳಗ್ಗೆ 8.30ಕ್ಕೆ ಮುಂಬೈಯಿಂದ ಬೆಂಗಳೂರಿಗೆ ಬಂದಿದ್ದು ಮತ್ತೊಂದು ಐವರು ವಿದ್ಯಾರ್ಥಿಗಳ ತಂಡ ರಾತ್ರಿ 8.30ಕ್ಕೆ ಬಂದಿಳಿದಿದೆ.

Tap to resize

Latest Videos

ನಂತರ ರಾತ್ರಿ 9 ಗಂಟೆಗೆ ಮತ್ತೊಂದು ವಿದ್ಯಾರ್ಥಿಗಳ ತಂಡ ಹೀಗೆ 30 ಜನ ವಿದ್ಯಾರ್ಥಿಗಳು (Students) ನಿನ್ನೆ ಬಂದಿಳಿದಿದ್ದಾರೆ ಎಂದು ವಿವರಿಸಿದರು. ಉಕ್ರೇನ್ ನಿಂದ ವಿದ್ಯಾರ್ಥಿಗಳು ಮುಂಬೈ (Mumbai) ಅಥವಾ ದೆಹಲಿಗೆ (Delhi) ಸುರಕ್ಷಿತವಾಗಿ ಬಂದಿಳಿಯುವಂತೆ ಕರ್ನಾಟಕ ಸರ್ಕಾರ (Karnataka government) ಎಲ್ಲಾ ವ್ಯವಸ್ಥೆಗಳನ್ನು ಮಾಡಿದೆ ಎಂದು ಮನೋಜ್ ರಾಜನ್ ( Manoj Rajan) ಹೇಳಿದ್ದಾರೆ.

Aided Employees Association Karnataka: ಅನುದಾನಿತ ನೌಕರರ ಪ್ರತಿಭಟನೆ, ಮಾರ್ಚ್​ 4 ರಂದು ಶಾಲಾ-ಕಾಲೇಜು ಬಂದ್! 

ಭಾರತೀಯರ ರಕ್ಷಣೆ ಕುರಿತು ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ!: ಉಕ್ರೇನ್ ಮೇಲೆ ರಷ್ಯಾ ದಾಳಿ (Russia Ukraine war) ತೀವ್ರಗೊಳಿಸುತ್ತಿದ್ದಂತೆ ಇತ್ತ ಭಾರತ ಯುದ್ಧ ಭೂಮಿಯಲ್ಲಿರುವ ಭಾರತೀಯರ ರಕ್ಷಣೆಗೆ ಅವಿರತ ಶ್ರಮವಹಿಸುತ್ತಿದೆ. ಸತತ ಕಾರ್ಯಾಚರಣೆ, ಸಭೆ ನಡೆಸಲಾಗುತ್ತಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅಧ್ಯಕ್ಷತೆಯಲ್ಲಿ ಉಕ್ರೇನ್ ಪರಿಸ್ಥಿತಿ ಹಾಗೂ ಭಾರತೀಯ ರಕ್ಷಣೆ ಕುರಿತು ಉನ್ನತ ಮಟ್ಟದ ಸಭೆ ನಡೆಸಲಾಗಿದೆ.

ಈ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಸಚಿವರಾದ ಜ್ಯೋತಿರಾಧಿತ್ಯ ಸಿಂಧಿಯಾ, ಹರ್ದಿಪ್ ಪುರಿ, ಕಿರಣ್ ರಿಜಿಜು ಹಾಗೂ ವಿಕೆ ಸಿಂಗ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ನಿನ್ನೆ(ಫೆ.27) ಪ್ರಧಾನಿ ಮೋದಿ ಯುಪಿ ಚುನಾವಣಾ ರ್ಯಾಲಿ ಮುಗಿಸಿದ ಬೆನ್ನಲ್ಲೇ ಉನ್ನತ ಮಟ್ಟದ ಸಭೆ ನಡೆಸಿ ಮಹತ್ವದ ಸೂಚನೆ ನೀಡಿದ್ದರು. ಇದೀಗ ಎರಡನೇ ಸಭೆ ನಡೆಸಿ ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆ ತರಲು ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ.

BANK OF BARODA RECRUITMENT 2022: ಮ್ಯಾನೇಜಿರಿಯಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ ಸಭೆಯಲ್ಲಿ ಉಕ್ರೇನ್‌ನಿಂದ ಭಾರತೀಯ ನಾಗರೀಕರು, ವಿದ್ಯಾರ್ಥಿಗಳನ್ನು ರಕ್ಷಿಸಿ ಸುರಕ್ಷಿತವಾಗಿ ಭಾರತಕ್ಕೆ ಕರೆತರುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಉಕ್ರೇನ್‌ನಲ್ಲಿನ ಭಾರತೀಯ ರಾಯಭಾರ ಕಚೇರಿ ಹಾಗೂ ಉಕ್ರೇನ್ ನೆರೆ ದೇಶಗಳಲ್ಲಿನ ಭಾರತೀಯ ರಾಯಭಾರ ಕಚೇರಿಗಳಿಗೆ ಸೂಚನೆ ನೀಡಲಾಗಿದೆ.  

ಈಗಾಗಲೇ ಭಾರತೀಯರ ರಕ್ಷಣಾ ಕಾರ್ಯ ಆಪರೇಶನ್ ಗಂಗಾ ಮಿಶನ್ ಮತ್ತಷ್ಟು ಯಶಸ್ವಿಗೊಳಿಸಲು ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾರನ್ನ  ರೋಮೆನಿಯಾ ತೆರಳಲು ಸೂಚಿಸಿದೆ. ಹಂಗೇರಿಗೆ ಸಚಿವ ಹರ್ದಿಪ್ ಪುರಿ, ಪೊಲೆಂಡ್‌ಗೆ ವಿಕೆ ಸಿಂಗ್, ಸ್ಲೋವಾಕಿಯಾಗೆ ಕಿರಣ್ ರಿಜಿಜುಗೆ ತೆರಳಲು ಸೂಚಿಸಲಾಗಿದೆ.

ಆಪರೇಷನ್‌ ಗಂಗಾ’ಗೆ ಪ್ರತ್ಯೇಕ ಟ್ವೀಟರ್‌ ಖಾತೆ!
ಉಕ್ರೇನ್‌ನಿಂದ ಭಾರತಕ್ಕೆ ಭಾರತೀಯರನ್ನು ಕರೆತರುವ ಕಾರಾರ‍ಯಚರಣೆಗೆ ವಿದೇಶಾಂಗ ಇಲಾಖೆ ಪ್ರತ್ಯೇಕ ಟ್ವೀಟರ್‌ ಹ್ಯಾಂಡಲ್‌ ಆರಂಭಿಸಿದೆ.ಈ ಟ್ವೀಟರ್‌ ಖಾತೆಯಲ್ಲಿ ತೆರವು ಕಾರ್ಯಾಚರಣೆ ಕುರಿತ ಮಾಹಿತಿ ನೀಡಿ ಸಹಾಯ ಮಾಡಲಾಗುತ್ತದೆ.

click me!