ಬೆಂಗಳೂರು (ಡಿ.10): ಕರ್ನಾಟಕದ ಎಲ್ಲಾ ಶಾಲೆಗಳು ಹಾಗೂ ಶಿಕ್ಷಣ ಇಲಾಖೆಯ (Education Department) ಕಚೇರಿಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ (plastic ban) ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ (Department of Public Education)ಆದೇಶ ಹೊರಡಿಸಿದೆ. ಶಿಕ್ಷಣ ಇಲಾಖೆ ಆಯುಕ್ತರು (Commissioner Directorate) ಆದೇಶ ಹೊರಡಿಸಿದ್ದು, ಕಟ್ಟುನಿಟ್ಟಿನ ಪಾಲನೆ ಮಾಡುವಂತೆ ಆದೇಶದಲ್ಲಿ ಉಲ್ಲೇಖೀಸಲಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ (Minister of Education) ಸಚಿವ ನಾಗೇಶ್ ( BC Nagesh) ಅವರು ಶಾಲೆ ಹಾಗೂ ಕಚೇರಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ಪ್ಲಾಸ್ಟಿಕ್ ಸುತ್ತಿದ ಹೂಗುಚ್ಛ, ಪ್ಲಾಸ್ಟಿಕ್ ಕಾಗದದಿಂದ ಪ್ಯಾಕ್ ಮಾಡಿದ ಪುಸ್ತಕಗಳನ್ನು ನೀಡುತ್ತಿರುವುದು ಗಮನಕ್ಕೆ ಬಂದಿದೆ. ರಾಜ್ಯದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದ್ದು, ಅದರಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಭಿತ್ತಿಪತ್ರ, ಪ್ಲಾಸ್ಟಿಕ್ ಬಾವುಟ, ಫ್ಲೆಕ್ಸ್, ಪ್ಲಾಸ್ಟಿಕ್ ತಟ್ಟೆ, ಲೋಟ, ಚಮಚ, ಥರ್ಮಾ ಕೋಲ್, ತೋರಣ, ಪ್ಲಾಸ್ಟಿಕ್‌ನಿಂದ ತಯಾರಿಸಿದ ಯಾವುದೇ ರೀತಿಯ ವಸ್ತುಗಳನ್ನು ಬಳಸದಂತೆ ತಿಳಿಸಲಾಗಿದೆ. ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಎಲ್ಲಾ ಡಿಡಿಪಿಐ'ಗಳು ಮತ್ತು ಬಿಇಒ ಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿ ಆದೇಶ ಹೊರಡಿಸಿದ್ದಾರೆ. ಈ ನಿಯಮಗಳು ತಕ್ಷಣ ದಿಂದಲೇ ಜಾರಿಗೆ ಬರುವಂತೆ ಇಲಾಖೆ ಹೇಳಿದೆ.
undefined
ಕೇಂದ್ರ ಸರಕಾರದಿಂದ 2022ರ ಜುಲೈಗೆ ಮಹತ್ವದ ನಿರ್ಣಯ: ಪ್ಲಾಸ್ಟಿಕ್ ಮಹಾಮಾರಿ ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರ (Centrsl Governmnet) ಇದರ ಮೊದಲ ಹಂತವಾಗಿ ಹ್ಯಾಂಡ್ ಕವರ್, ನೀರಿನ ಬಾಟಲಿ ಸೇರಿದಂತೆ 12 ರೀತಿಯ ಪ್ಲಾಸ್ಟಿಕ್ ವಸ್ತುಗಳ ಮೇಲೆ ನಿಷೇದ ಹೇರಲು ಮುಂದಾಗಿದೆ. 2022ರ ಜುಲೈ ತಿಂಗಳಿನಿಂದ ಏಕಬಳಕೆ ಪ್ಲಾಸ್ಟಿಕ್ ಉತ್ಪಾದನೆ ಹಾಗೂ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಘೋಷಣೆ ಮಾಡಿದೆ.
ನಿಷೇಧದ ನಂತ್ರ ರಾತ್ರಿಹೊತ್ತಲ್ಲಿ ಪ್ಲಾಸ್ಟಿಕ್ ತಯಾರಿ, BBMPಗೆ ತಲೆನೋವು
ಕೇಂದ್ರ ಪರಿಸರ ಸಚಿವಾಲಯ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ತಿದ್ದುಪಡಿ ನಿಯಮ 2021ರ ಈ ಸೂಚನೆ ನೀಡಿದೆ. 2022ರ ಜುಲೈ ನಿಂದ ಹೆಚ್ಚಿನ ತ್ಯಾಜ್ಯಕ್ಕೆ ಕಾರಣವಾಗುತ್ತಿರುವ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಆಮದು, ಸಂಗ್ರಹಣೆ, ವಿತರಣೆ, ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಿದೆ.
Egg Distribution in Schools: ಮಕ್ಕಳಿಗೆ ಮೊಟ್ಟೆ ಕೊಟ್ಟರೆ ತಪ್ಪಲ್ಲ: ಬಿಜೆಪಿ ಶಾಸಕ ರಘುಪತಿ ಭಟ್
ಹ್ಯಾಂಡ್ ಕವರ್ (50 ಮೈಕ್ರಾನ್ ಗಿಂತ ಕೆಳಗಿನದ್ದು), ನಾನ್ ಒವೆನ್ ಕ್ಯಾರಿ ಬ್ಯಾಗ್ ಗಳು, ಪೊಟ್ಟಣಕ್ಕೆ ಬಳಸಲಾಗುವು ಕವರ್ ಗಳು, ಸ್ಟ್ರಾಗಳು, ಫೋಮ್ಡ್ ಕಪ್ ಗಳು, ಪ್ಲಾಸ್ಟಿಕ್ ಕಪ್ ಗಳು, ಪ್ಲಾಸ್ಟಿಕ್ ನೀರಿನ ಗ್ಲಾಸ್ ಗಳು, ಪ್ಲಾಸ್ಟಿಕ್ ಲ್ಯಾಮಿನೇಟೆಡ್ ಬಿಲ್ ಗಳು, ಬೋರ್ಡ್ ಗಳು, ಬೇಕರಿ ತಿನಿಸುಗಳ ಹಾಕುವ ಸಣ್ಣ ಪ್ಲಾಸ್ಟಿಕ್ ಕಪ್ ಗಳು ಮತ್ತು ಪಾತ್ರೆಗಳು (150 ಮಿಲಿ ಮತ್ತು 5 ಗ್ರಾಂ ಕ್ಕಿಂತ ಕಡಿಮೆ); ಕಿವಿ ಮೊಗ್ಗುಗಳು, ಆಕಾಶಬುಟ್ಟಿಗಳು, ಧ್ವಜಗಳು ಮತ್ತು ಮಿಠಾಯಿಗಳ ಹಾಕಲು ಬಳಸುವ ಟ್ರಾನ್ಸ್ ಪರೆಂಟ್ (ಪಾರದರ್ಶಕ) ಪ್ಲಾಸ್ಟಿಕ್ ಕವರ್ ಗಳು; ಸಿಗರೇಟ್ ಬಟ್ಸ್ ಗಳು, ಪಾನೀಯಗಳಿಗಾಗಿ ಬಳಸುವ ಗ್ಲಾಸ್ ಗಳು(200 ಮಿಲಿಗಿಂತ ಕಡಿಮೆ) ಮತ್ತು ರಸ್ತೆಬದಿಯ ಬ್ಯಾನರ್‌ಗಳು (100 ಮೈಕ್ರಾನ್‌ಗಳಿಗಿಂತ ಕಡಿಮೆ) ಸೇರಿದಂತೆ ಒಟ್ಟು 12 ಬಗೆಯ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ.