CBSE academic session 2021-22: ಸಿಬಿಎಸ್‌ಸಿ ವಿದ್ಯಾರ್ಥಿಗಳ ನೋಂದಣಿ ಡಿ.15 ರಿಂದ ಆರಂಭ

By Gowthami KFirst Published Dec 9, 2021, 8:03 PM IST
Highlights
  • CBSE 9,10ನೇ ತರಗತಿಗಳಿಗೆ ನೋಂದಣಿ ಡಿ.15 ರಿಂದ ಪ್ರಾರಂಭ
  • ಸಿಬಿಎಸ್‌ಇ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಲಿಂಕ್ ಲಭ್ಯ
  • 12ನೇ ತರಗತಿ ಬೋರ್ಡ್ ಪರೀಕ್ಷೆಗೆ ಡಿ.2 ರಿಂದ ಹೆಸರು ನೋಂದಾವಣೆಗೆ ಅವಕಾಶ

ನವದೆಹಲಿ (ಡಿ.9): ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಬುಧವಾರ 2021-22 ನೇ ತರಗತಿಗೆ 9 ಮತ್ತು 10ನೇ ತರಗತಿಗಳಿಗೆ ವಿದ್ಯಾರ್ಥಿಗಳ ನೋಂದಣಿ ಡಿಸೆಂಬರ್ 15 ರಿಂದ ಪ್ರಾರಂಭವಾಗುತ್ತದೆ ಎಂದು ಅಧಿಕೃತ ಮಾಹಿತಿ ನೀಡಿದೆ. ಸಿಬಿಎಸ್‌ಇ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಲಿಂಕ್ ಲಭ್ಯವಾಗಲಿದೆ ಮಾತ್ರವಲ್ಲ ಅಂಗಸಂಸ್ಥೆ ( affiliated) ಶಾಲೆಗಳು ತಮ್ಮ ವಿದ್ಯಾರ್ಥಿಗಳನ್ನು ಒಂಬತ್ತನೇ ಮತ್ತು ಹತ್ತನೇ ತರಗತಿಗಳಿಗೆ ಆನ್‌ಲೈನ್‌ನಲ್ಲಿ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವ ಮುನ್ನ ತಾವು ನೋಂದಣಿ ಮಾಡಿಕೊಳ್ಳಬೇಕು ಎಂದು ಮಂಡಳಿ ತಿಳಿಸಿದೆ. ಆನ್​ಲೈನ್​ ನೋಂದಣಿ ಪ್ರಕ್ರಿಯೆ ಮೂಲಕ ಹೆಸರು ಸಲ್ಲಿಸಿದ 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ 2022-23 ನೇ ಸಾಲಿನ ಬೋರ್ಡ್​ ಪರೀಕ್ಷೆಯಲ್ಲಿ ಹಾಜರಾಗಲು ಅನುಮತಿಸಲಾಗುವುದು ಎಂದು CBSE ಸ್ಪಷ್ಟಪಡಿಸಿದೆ. 

ಆನ್‌ಲೈನ್ ಸಲ್ಲಿಕೆಗೆ ಮುಂದುವರಿಯುವ ಮೊದಲು ಸಂಯೋಜಿತ (affiliated) ಶಾಲೆಗಳು ತಮ್ಮನ್ನು ನೋಂದಾಯಿಸಿಕೊಳ್ಳಬೇಕು ಎಂದು CBSE ಹೇಳಿದೆ. ಶಾಲೆಗಳು ಸಂಬಂಧಿತ ಸಂಖ್ಯೆಯನ್ನು ಬಳಕೆದಾರರ ಐಡಿ ಎಂದು ಬಳಕೆ ಮಾಡಬೇಕು ಎಂದು ಮಂಡಳಿ ಇದೇ ವೇಳೆ ತಿಳಿಸಿದೆ. ಹೊಸದಾಗಿ ಸಂಯೋಜಿತವಾಗಿರುವ ಶಾಲೆಗಳು ಪಾಸ್‌ವರ್ಡ್ ಸ್ವೀಕರಿಸದಿದ್ದಲ್ಲಿ ಶಾಲೆಯ ಕೋಡ್ ಮತ್ತು ಪಾಸ್‌ವರ್ಡ್ ಪಡೆಯಲು ಸಂಬಂಧಿಸಿದ ಪ್ರಾದೇಶಿಕ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ. 

'ಹೊಸ ಶಾಲೆಗಳು ಮೊದಲು ಒಎಐಎಸ್​ಐಎಸ್​ (OASIS) ಪೋರ್ಟಲ್​ನಲ್ಲಿ ತಮ್ಮ ಮಾಹಿತಿಯನ್ನು ಮೊದಲು ನಮೂದಿಸಬೇಕು. ಒಎಐಎಸ್​ಐಎಸ್​ ಮಾಹಿತಿಯನ್ನು ಅತ್ಯಂತ ಜಾಗರೂಕತೆಯಿಂದ ತುಂಬಬೇಕು. ಒಮ್ಮೆ ಅಧಿಕೃತಗೊಂಡ ಮಾಹಿತಿಯನ್ನು ಮತ್ತೆ ಬದಲಾಯಿಸಲು ಸಾಧ್ಯವೇ ಇಲ್ಲ ಎಂದು ಸಿಬಿಎಸ್​ಇ  ಸ್ಪಷ್ಟವಾಗಿ ಹೇಳಿದೆ.

CBSE Mistake: ಗುಜರಾತ್ ಹತ್ಯಾಕಾಂಡ ಯಾರ ಆಡಳಿತದಲ್ಲಾಯಿತೆಂಬ ಪಶ್ನೆ

ಈ ವರ್ಷದಿಂದ ತಿದ್ದುಪಡಿಗೆ ಯಾವುದೇ ವಿಂಡೋ ಲಭ್ಯವಾಗದ ಕಾರಣ ಸರಿಯಾದ ಡೇಟಾವನ್ನು ಅಪ್‌ಲೋಡ್ ಮಾಡಲು ಮಂಡಳಿಯು ಶಾಲೆಗಳಿಗೆ ಸಲಹೆ ನೀಡಿದೆ. ಅಪ್ಲಿಕೇಶನ್ ಪ್ರಕ್ರಿಯೆಯ ವಿವರವಾದ ಮಾರ್ಗಸೂಚಿಗಳು CBSE ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

KFD FG Exam Key Answer: ಫಾರೆಸ್ಟ್‌ ಗಾರ್ಡ್‌ ಹುದ್ದೆ ಲಿಖಿತ ಪರೀಕ್ಷೆಯ ಕೀ ಉತ್ತರ ಬಿಡುಗಡೆ

ಡಿ. 2 ರಿಂದ ಸಿಬಿಎಸ್‌ಸಿ ಎಕ್ಸಾಮಿನೇಷನ್ 2022ಗೆ ನೋಂದಣಿ ಆರಂಭ: ಸಿಬಿಎಸ್‌ಸಿ ಎಕ್ಸಾಮಿನೇಷನ್ 2022ಗಾಗಿ (CBSE Board 12th Exams 2022) ಪ್ರಮುಖ ಮಾಹಿತಿಯನ್ನು ಬಿಡುಗಡೆ ಮಾಡಿದೆ ಮತ್ತು 12 ನೇ ತರಗತಿ ಬೋರ್ಡ್ ಪರೀಕ್ಷೆಗೆ ಹಾಜರಾಗುವ ಖಾಸಗಿ ಅಭ್ಯರ್ಥಿಗಳು (Private Candidates)  ಗುರುವಾರದಿಂದ ಅಂದರೆ ಡಿಸೆಂಬರ್ 2 ರಿಂದ ತಮ್ಮ  ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಸೂಚಿಸಿದೆ. ಈ ವಿದ್ಯಾರ್ಥಿಗಳಿಗೆ ಸಿಬಿಎಸ್‌ಇ (CBSE) ಪರೀಕ್ಷೆ ನಡೆಸಲಿದೆ.

Bank of Baroda Recruitment 2021: ಬ್ಯಾಂಕ್ ಆಫ್ ಬರೋಡಾದಲ್ಲಿ ಉದ್ಯೋಗ, ತಿಂಗಳಿಗೆ 63,840 ರೂ

CBSE ಯ ಸೂಚನೆಗಳ ಪ್ರಕಾರ, 2021 ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮತ್ತು ಉತ್ತೀರ್ಣರಾದ ವಿದ್ಯಾರ್ಥಿಗಳು ಸಹ ಪರೀಕ್ಷೆಗೆ ಹಾಜರಾಗಬಹುದು. ಒಂದು ಅಥವಾ ಅದಕ್ಕಿಂತ ಹೆಚ್ಚಿನ ವಿಷಯಗಳಲ್ಲಿ ತಮ್ಮ ಅಂಕಗಳನ್ನು ಹೆಚ್ಚಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳು ಕೂಡ ಇದರಲ್ಲಿ ನೋಂದಾವಣೆ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಟರ್ಮ್ 2 ಪಠ್ಯಕ್ರಮದ ಆಧಾರದ ಮೇಲೆ ಮಾತ್ರ ನಡೆಸಲಾಗುವುದು ಎಂದು CBSE ಸ್ಪಷ್ಟಪಡಿಸಿದೆ.

SBI Recruitment 2021: ಎಸ್‌ಬಿಐನಲ್ಲಿ ತಿಂಗಳಿಗೆ 63,840ರೂ ಸಂಬಳದ ಉದ್ಯೋಗ,

ಬೋರ್ಡ್ ಪರೀಕ್ಷೆ 2022 ರಲ್ಲಿ ಕಾಣಿಸಿಕೊಳ್ಳುವ ಎಲ್ಲಾ ಖಾಸಗಿ ವಿದ್ಯಾರ್ಥಿಗಳಿಗೆ ಹೊಸ ರೋಲ್ ಸಂಖ್ಯೆಯನ್ನು ನೀಡಲಾಗುತ್ತದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಹೊಸ ರೋಲ್ ಸಂಖ್ಯೆಗಳನ್ನು ನೀಡಲಾಗುವುದು ಎಂದು ಸಿಬಿಎಸ್‌ಇ ತಿಳಿಸಿದೆ.  ಖಾಸಗಿ ವಿದ್ಯಾರ್ಥಿಗಳಿಗೆ  (Private Students) CBSE ಪರೀಕ್ಷೆ 2022ಕ್ಕೆ ಹೆಸರು ನೋಂದಾಯಿಸಲು ಕೊನೆಯ ದಿನಾಂಕ 20 ಡಿಸೆಂಬರ್ 2021 ನಿಗದಿಪಡಿಸಲಾಗಿದೆ. ವಿದ್ಯಾರ್ಥಿಗಳು ರೂ.2000 ವಿಳಂಬ ಶುಲ್ಕದೊಂದಿಗೆ ಡಿಸೆಂಬರ್ 30 ರವರೆಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.

click me!