ಅಧಿಕಾರದಲ್ಲಿದ್ದವರು ಡಾ. ರಾಜ್ ಗುಣ ಅಳವಡಿಸಿಕೊಳ್ಳಬೇಕು'

By Suvarna News  |  First Published Aug 16, 2021, 9:39 PM IST

* ಡಾ ರಾಜ್ ಕುಮಾರ್ ಅಕಾಡೆಮಿಯಿಂದ ಲರ್ನಿಂಗ್ ಆಪ್
* ಸಿಎಂ  ಬಸವರಾಜ ಬೊಮ್ಮಾಯಿ ಅವರಿಂದ ಲೋಕಾರ್ಪಣೆ
* ಆನ್ ಲೈನ್ ಮೂಲಕ ಸುಲಭ ಕಲಿಕೆ
* ಡಾ. ರಾಜ್ ಕುಮಾರ್ ಸ್ಮರಿಸಿದ ಸಿಎಂ ಬೊಮ್ಮಾಯಿ


ಬೆಂಗಳೂರು(ಆ.  16)  ಶಿಕ್ಷಣದ ದಾರಿಯಲ್ಲಿ ಇನ್ನೊಂದು ಹೆಜ್ಜೆ ಇಟ್ಟ ಡಾ. ರಾಜ್ ಕುಮಾರ್ ಅಕಾಡೆಮಿ ವಿಶೇಷ ಲರ್ನಿಂಗ್ ಆಪ್ ತಯಾರಿಕೆ ಮಾಡಿದೆ.  ಡಾ. ರಾಜ್ ಕುಮಾರ್ ಲರ್ನಿಂಗ್ ಆ್ಯಪನ್ನು ಸಿಎಂ ಬಸವರಾಜ್ ಬೊಮ್ಮಾಯಿ ಲೋಕಾರ್ಪಣೆ ಮಾಡಿದರು.

ಬೆಂಗಳೂರಿನ ಶೆರ್ಟನ್ ಹೊಟೆಲ್ ನಲ್ಲಿ  ಡಾ ರಾಜ್ ಕುಮಾರ್ ಲರ್ನಿಂಗ್ ಆ್ಯಪ್ ಲೋಕಾರ್ಪಣೆ ಕಾರ್ಯಕ್ರಮ  ನಡೆಯಿತು. ಡಾ. ರಾಜ್ ಕುಮಾರ್ ಅಕಾಡೆಮಿ ನಾಗರೀಕ ಸೇವಾ ಪರೀಕ್ಷೆ ತೆರಬೇತಿಯಲ್ಲಿ ಹೆಸರು ಮಾಡಿದೆ.

Tap to resize

Latest Videos

ಕೊರೋನಾದಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕಷ್ಟ ಆಗುತ್ತಿದೆ.  ಈ ಆ್ಯಪ್ ಮೂಲಕ ಪಿಯುಸಿ ವಿದ್ಯಾರ್ಥಿಗಳಿಂದ ಎಲ್ಲರೂ ಉಪಯೋಗಿಸಿಕೊಳ್ಳಬಹು.

ಆನ್ ಲೈನ್ ಕಲಿಕೆ ಬಹು ಸುಲಭ, ಕಿಚ್ಚ ಚಾರಿಟೇಬಲ್‌ನಿಂದ ಡಾರ್ಕ್ ಬೋರ್ಡ್!

ಲೋಕಾರ್ಪಣೆ ನಂತರ ಮಾನಾಡಿದ ಸಿಎಂ ಬೊಮ್ಮಾಯಿ, ರಾಘವೇಂದ್ರ ರಾಜ್ ಕುಮಾರ್ ನನ್ನ ಅತ್ಯಂತ ಆತ್ಮೀಯರು. ರಾಜ್ ಕುಮಾರ್ ಅಪ್ಪಾಜಿಯ ಸಂಪರ್ಕಕ್ಕೆ ನೇರ ಕಾರಣ ರಾಘವೇಂದ್ರ ರಾಜ್ ಕುಮಾರ್. ಪಾರ್ವತಮ್ಮ ಕೂಡ ನನ್ನ ಜೊತೆಗೆ ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದರು. ಅಮ್ಮ ನಮ್ಮ ಮನೆಗೆ ಗ್ಯಾಸ್ ಕನೆಕ್ಷನ್ ಬೇಕು ಅಂದಿದ್ರು. ನಾನು ಮಾಡಿ ಕೊಟ್ಟಿದ್ದೆ ಎಂಬುದನ್ನು ನೆನಪಿಸಿಕೊಂಡರು.

ಡಾ. ರಾಜ್ ಕುಮಾರ್ ಅಂದ್ರೆ ಒಬ್ಬ ಸಾಧಕ. ಈ ಮಾತು ಹೇಳೋಕೆ ಕಾರಣ ಸ್ವಾಮಿ ವಿವೇಕನಂದ ಹೇಳಿದ ಮಾತು. ಸಾಧಕನಿಗೆ ಸಾವು ಅಂತ್ಯವಲ್ಲ.. ಸಾವಿನ ನಂತರವೂ  ಸಾಧನೆ ಬದುಕಿರುತ್ತೆ ಅಂತಹ ಸಾಧನೆ ಮಾಡಿದಂತಹ ಕರ್ನಾಟಕದ ಏಕ ಸ್ಟಾರ್‌ ರಾಜ್ ಕುಮಾರ್ ಸ್ಟಾರ್ ಅಂದ್ರೆ ಸಿನಿಮಾ ಸ್ಟಾರ್ ಅಲ್ಲ. ಆಕಾಶದಲ್ಲಿರೋ ದೊಡ್ಡ ನಕ್ಷತ್ರ.. ಅದು ರಾಜ್ ಕುಮಾರ್.. ಅವರ ನುಡಿ, ಮೌಲ್ಯ, ಸರಳ ತನ ವನ್ನ ನಾವು ಕಲಿಬೇಕು ಎಂದು ಬೊಮ್ಮಾಯಿ ಹೇಳಿದರು.

ಅದರಲ್ಲೂ ನಾವು ಅಧಿಕಾರದಲ್ಲಿದ್ದವರು  ರಾಜ್ ಕುಮಾರ್ ಗುಣಗಳನ್ನ ಕಲಿಯಬೇಕು. ರಾಜ್ ಕುಮಾರ್ ಅಷ್ಟು ಹಂಬಲ್ ಆಗರೋದಕ್ಕೆ ಯಾರಿಂದಲೂ ಸಾಧ್ಯವಿಲ್ಲ.  ಒಂದು ಮಗುವಿ‌ನಲ್ಲಿ ತಿಳಿದುಕೊಳ್ಳೋ ಹಂಬಲ ಇರುತ್ತೆ.  ರಾಜ್ ಕುಮಾರ್ ಒಬ್ಬ ವಿದ್ಯಾರ್ಥಿ .. ಪ್ರತಿ ಕ್ಷಣದಲ್ಲೂ ಕಲಿಯುವ ಹಂಬಲ ಇತ್ತು. ಆವರಲ್ಲಿ ಮುಗ್ಧ ತೆ ಎಂದೂ ಕಡಿಮೆ ಆಗಿಲ್ಲ ಎಂದು ಸ್ಮರಿಸಿದರು.

ಅವರ ರಿಯಲ್‌ ಕ್ಯಾರೆಕ್ಟರ್ ಬಹಳ ದೊಡ್ಡದು.. ಅದನ್ನ ಅರ್ಥ ಮಾಡಿಕೊಳ್ಳೊದು ಕಷ್ಟ. ನೀವು ಮಕ್ಕಳಿಗೆ ಜ್ಞಾನ. ಈಗಿನ ಪ್ರಪಂಚದಲ್ಲಿ ಜ್ನಾನ ಇದ್ದೋರಿಗೆ ಮಾತ್ರ‌ ಎಲ್ಲವೂ ಸಿಗುತ್ತೆ. ಜ್ಞಾನಕ್ಕೆ ದೊಡ್ಡ ಬೆಲೆ ಇದೆ.  ಜ್ಞಾನದ ಕ್ಷೇತ್ರಕ್ಕೆ‌ ಡಾ. ರಾಜ್ ಕುಮಾರ್ ಲರ್ನಿಂಗ್ ಆ್ಯಪ್ ಸೇರಿದೆ. ಇದು ದೊಡ್ಡ ಸಾಧನೆ ಎಂದು ಕೊಂಡಾಡಿದರು.

ಮಕ್ಕಳಿಗೆ ಕೇವಲ ಬೋಧನೆ ಮಾಡಿದ್ರೆ ಪ್ರಯೋಜನವಿಲ್ಲ. ಚಿಂತನೆಗೆ ಹಚ್ಚಬೇಕು. ಆಗ ಮಾತ್ರ ಕಲಿಕೆ‌ ಸಾಧ್ಯ.. ರಾಜ್ ಕುಮಾರ್ ಅಕಾಡೆಮಿ ಬಹಳ ಅದ್ಭುತವಾದ ಕೆಲಸ ಮಾಡುತ್ತಿದ್ದೀರಿ. ನೀವು ಇಡೀ ಜಗತ್ತಿಗೆ ರೀಚ್ ಆಗುತ್ತೀರಿ. ಪ್ರಧಾ‌ನ ಮಂತ್ರಿಗಳು ನ್ಯೂ ಎಜ್ಯೂಕೇಷನ್ ಪಾಲಿಸಿ ಮಾಡಿದ್ದಾರೆ ರಾಜ್ ಕುಮಾರ್ ಲರ್ನಿಂಗ್ ಆಪ್ ನ್ಯೂ ಎಜ್ಯೂಕೇಷನ್ ಪಾಲಿಸಿ ಬಹಳ ಉಪಯೋಗ ಆಗುತ್ತೆ. ಕರ್ನಾಟಕದಲ್ಲಿ ನ್ಯೂ ಎಜ್ಯೂಕೇಷನ್ ಪಾಲಿಸಿಯನ್ನ ಮೊದಲು ಅಡಾಪ್ಟ್ ಮಾಡಿಕೊಳ್ಳುತ್ತದೆ ಎಂದು ತಿಳಿಸಿದರು. 

click me!