ಬೆಂಗಳೂರು: ಎರಡೇ ವರ್ಷಕ್ಕೆ ಸ್ಥಗಿತವಾದ ಮನೆ ಬಾಗಿಲಿಗೆ ಶಾಲೆ ಬಿಬಿಎಂಪಿ ಯೋಜನೆ

Published : Jul 27, 2023, 08:33 AM IST
ಬೆಂಗಳೂರು: ಎರಡೇ ವರ್ಷಕ್ಕೆ ಸ್ಥಗಿತವಾದ ಮನೆ ಬಾಗಿಲಿಗೆ ಶಾಲೆ ಬಿಬಿಎಂಪಿ ಯೋಜನೆ

ಸಾರಾಂಶ

ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಶಿಕ್ಷಣ ನೀಡುವಂತೆ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಹೈಕೋರ್ಟ್‌ ಬಿಬಿಎಂಪಿ ಸೂಚನೆ ನೀಡಿತ್ತು. ಅದರಂತೆ 2021ರ ಏಪ್ರಿಲ್‌ನಲ್ಲಿ ಮನೆ ಬಾಗಿಲಿಗೆ ಶಾಲೆ ಯೋಜನೆ ಆರಂಭಿಸಿತ್ತು. ಅದಕ್ಕಾಗಿ ಬಿಎಂಟಿಸಿಯಿಂದ 10 ಬಸ್‌ಗಳನ್ನು ಖರೀದಿಸಿ, ಅದನ್ನು ಮಾರ್ಪಾಡು ಮಾಡಿ ಕೊಳಗೇರಿ ಸೇರಿದಂತೆ ಇನ್ನಿತರ ಕಡೆಗಳಿಗೆ ಆ ಬಸ್‌ನ್ನು ಕಳುಹಿಸಿ ಶಿಕ್ಷಣ ಕೊಡಿಸುವ ಕೆಲಸ ಮಾಡಲಾಗಿತ್ತು. 

ಬೆಂಗಳೂರು(ಜು.27):  ಶಾಲೆಯಿಂದ ಹೊರಗಿಳಿದ ಮಕ್ಕಳಿಗಾಗಿ ಬಿಬಿಎಂಪಿ ಕಳೆದೆರಡು ವರ್ಷಗಳ ಹಿಂದೆ ಮನೆ ಬಾಗಿಲಿಗೆ ಶಾಲೆ ಯೋಜನೆ ಆರಂಭಿಸಿ, ಸಂಚಾರಿ ಶಾಲೆಗಳನ್ನು ನಿಯೋಜಿಸಲಾಗಿತ್ತು. ಆದರೆ ಯೋಜನೆ ಕೇವಲ ಆರಂಭವಾದ ಎರಡೇ ವರ್ಷದಲ್ಲಿ ಸ್ಥಗಿತಗೊಂಡಿದ್ದು, ಅದಕ್ಕಾಗಿ ಸಿದ್ಧಪಡಿಸಲಾಗಿರುವ ಬಸ್‌ಗಳು ವಲಯ ಕಚೇರಿಗಳಲ್ಲಿ ಧೂಳು ತಿನ್ನುವಂತಾಗಿದೆ.

ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಶಿಕ್ಷಣ ನೀಡುವಂತೆ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಹೈಕೋರ್ಟ್‌ ಬಿಬಿಎಂಪಿ ಸೂಚನೆ ನೀಡಿತ್ತು. ಅದರಂತೆ 2021ರ ಏಪ್ರಿಲ್‌ನಲ್ಲಿ ಮನೆ ಬಾಗಿಲಿಗೆ ಶಾಲೆ ಯೋಜನೆ ಆರಂಭಿಸಿತ್ತು. ಅದಕ್ಕಾಗಿ ಬಿಎಂಟಿಸಿಯಿಂದ 10 ಬಸ್‌ಗಳನ್ನು ಖರೀದಿಸಿ, ಅದನ್ನು ಮಾರ್ಪಾಡು ಮಾಡಿ ಕೊಳಗೇರಿ ಸೇರಿದಂತೆ ಇನ್ನಿತರ ಕಡೆಗಳಿಗೆ ಆ ಬಸ್‌ನ್ನು ಕಳುಹಿಸಿ ಶಿಕ್ಷಣ ಕೊಡಿಸುವ ಕೆಲಸ ಮಾಡಲಾಗಿತ್ತು. ಆ ಬಸ್‌ನಲ್ಲಿ ಇಬ್ಬರು ಶಿಕ್ಷಕರು, ಒಬ್ಬ ಸಹಾಯಕ ಸಿಬ್ಬಂದಿಯನ್ನೂ ನಿಯೋಜಿಸಲಾಗಿತ್ತು. ಆದರೆ, ಯೋಜನೆ ಆರಂಭಗೊಂಡಷ್ಟೇ ವೇಗದಲ್ಲಿ ಸ್ಥಗಿತಗೊಂಡಿದೆ. ಕಳೆದೊಂದು ವರ್ಷದಿಂದೀಚೆಗೆ ಯೋಜನೆ ಅಡಿಯಲ್ಲಿನ ಬಸ್‌ಗಳು ಎಲ್ಲೂ ಸಂಚರಿಸದೆ ವಲಯ ಕಚೇರಿಗಳಲ್ಲೇ ನಿಲ್ಲಿಸಲಾಗಿದೆ.

ಮಣಿಪುರ ವಿದ್ಯಾರ್ಥಿಗಳಿಗೆ ರಾಜ್ಯದ ಸ್ವಾಗತ: ಸಚಿವ ಮಧು ಬಂಗಾರಪ್ಪ

ಇದೀಗ ಯೋಜನೆ ಮತ್ತೆ ಆರಂಭಿಸುವುದರ ಬಗ್ಗೆ ಬಿಬಿಎಂಪಿ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಆದರೆ, ಕಳೆದ ಹಲವು ತಿಂಗಳಿನಿಂದ ಸ್ಥಗಿತಗೊಳಿಸಲಾಗಿರುವ 10 ಬಸ್‌ಗಳ ಸದೃಢತೆ ಬಗ್ಗೆ ಪರೀಕ್ಷಿಸಿ ವರದಿ ನೀಡುವಂತೆ 8 ವಲಯದ ಜಂಟಿ ಆಯುಕ್ತರಿಗೆ ಸೂಚಿಸಲಾಗಿದೆ. ಅದರ ಜತೆಗೆ ಬಸ್‌ ಚಾಲಕರು ಮತ್ತು ಸಂಚಾರಿ ಶಾಲೆಯ ಶಿಕ್ಷಕರ ಮಾಹಿತಿಯನ್ನೂ ನೀಡುವಂತೆ ತಿಳಿಸಲಾಗಿದೆ.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ