ನೀವು ಸ್ಟ್ಯಾಂಡ್‌ಅಪ್ ಕಮೆಡಿಯನ್ ಆಗಬೇಕಾ?

Published : Oct 17, 2022, 05:53 PM IST
ನೀವು ಸ್ಟ್ಯಾಂಡ್‌ಅಪ್ ಕಮೆಡಿಯನ್ ಆಗಬೇಕಾ?

ಸಾರಾಂಶ

*ಇತ್ತೀಚಿನ ದಿನಗಳಲ್ಲಿ ವೃತ್ತಿಯಾಗಿ ಬದಲಾಗಿರುವ ಸ್ಟ್ಯಾಂಡ್‌ ಅಪ್ ಕಾಮೆಡಿ *ಜನರನ್ನು ನಗಿಸುವುದು ಸುಲಭವಲ್ಲ, ಈ ಕಾರ್ಯಕ್ಕೆ ವಿಶಿಷ್ಟ ಕೌಶಲ್ಯಗಳು ಬೇಕು *ಹಾಸ್ಯಗಾರ ತನ್ನ ಸುತ್ತಮುತ್ತಲಿನ ಆಗು ಹೋಗುಗಳನ್ನು ಗಮನಿಸುತ್ತಿರಬೇಕು

ನಗಿಸೋದು ಒಂದು ಕಲೆ. ಸಮಯ ಸಂದರ್ಭಕ್ಕೆ ತಕ್ಕಂತೆ ಜೋಕ್ (joke) ಮಾಡೋದು ಎಲ್ಲರಿಗೂ ಕರಗತವಾಗಿರಲ್ಲ. ಹಾಸ್ಯ ಪ್ರಜ್ಞೆಯುಳ್ಳವರಿಗೆ ಮಾತ್ರ ಅದು ಸಾಧ್ಯ. ಜೋಕ್ ಮಾಡೋದಕ್ಕೆ ಕೌಶಲ್ಯ, ಸಮಯೋಚಿತ ಪ್ರಜ್ಞೆ, ಮನೋಭಾವ ಅತ್ಯಗತ್ಯ. ಯಾವ ರೀತಿ ಹೇಳಿದ್ರೆ ಸಂದೇಶ ಕೊಡಬಹುದು, ಹೇಗೆ ಮಾತಾಡಿದ್ರೆ ನಗಿಸಬಹುದು, ಹೇಗೆಲ್ಲಾ ಕಾಮಿಡಿ ಮಾಡಬಹುದು ಅನ್ನೋದರ ಅರಿವು ಜೋಕರ್ಗೆ ಇದ್ದೇ ಇರುತ್ತೆ. ಹಾಸ್ಯ ಪ್ರವೃತ್ತಿ ಇದ್ದರೆ ಮಾತ್ರ ಉತ್ತಮ ಕಾಮಿಡಿಯನ್ ಆಗೋಕೆ ಸಾಧ್ಯ. ಮಾತಿನ ಶೈಲಿ, ಹಾವ-ಭಾವ, ನಗಿಸುವ ಕಲೆಯನ್ನ ಕರಗತ ಮಾಡಿಕೊಂಡಿರಬೇಕು. ಜೋಕ್‌ ಹೇಳಲು, ಬರೆಯಲು ಕಲ್ಪನೆ, ಕೌಶಲ್ಯ, ಸಮಯ ಮತ್ತು ಅಭ್ಯಾಸ ಅತ್ಯಗತ್ಯ. ಹಾಸ್ಯದಲ್ಲಿ (Comedy) ನಾನಾ ರೂಪಗಳಿವೆ. ಕೇವಲ ಮಾತಿನಲ್ಲಿ ಜೋಕ್ ಕಟ್ ಮಾಡೋದು, ಮೌಖಿಕವಾಗಿ ವರ್ತಿಸುತ್ತಾ ನಗಿಸುವುದು, ಚಾರ್ಲಿ ಚಾಪ್ಲಿನ್ (Charlie Chaplin) ರೀತಿ ತಮಾಷೆ ಮಾಡೋದು.. ಇತ್ಯಾದಿ. ಇತ್ತೀಚೆಗೆ ಸ್ಟ್ಯಾಂಡ್-ಅಪ್ ಹಾಸ್ಯ (Stand up Comedy) ಪ್ರದರ್ಶನ ಸಿಕ್ಕಾಪಟ್ಟೆ ಫೇಮಸ್ ಆಗ್ತಿದೆ. ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಬೇಕಾದರೆ, ನಗಿಸುವ ಕಲೆ ಜೊತೆಗೆ ನಟನಾ ಕೌಶಲ್ಯ ಇರಬೇಕು. ಜೋಕ್ಗೆ ತಕ್ಕಂತೆ ಆ್ಯಕ್ಟಿಂಗ್ ಮಾಡುತ್ತಾ, ಗಾಂಭೀರ್ಯತೆ ತೋರುತ್ತಾ ಪ್ರೇಕ್ಷಕರನ್ನ ನಗೆಯ ಹೊನಲಲ್ಲಿ ತೇಲಿಸಬೇಕು. ಸ್ಟ್ಯಾಂಡ್-ಅಪ್ ಕಾಮಿಡಿಯನ್ ಆಗಲು, ಹಲವು ವರ್ಷಗಳ ಕಠಿಣ ಪರಿಶ್ರಮ ಬೇಕಾಗುತ್ತದೆ.  ಹಾಸ್ಯ ಪ್ರದರ್ಶನಕ್ಕೆ ಬರುವ ತೀರ್ಪುಗಳು ಮತ್ತು ಕಾಮೆಂಟ್‌ಗಳನ್ನು ಸಹಿಸಿಕೊಳ್ಳುವ ಸಂಪೂರ್ಣ ಇಚ್ಛೆ ಮತ್ತು ಉತ್ಸಾಹವನ್ನು ಬೆಳೆಸಿಕೊಳ್ಳಬೇಕು. ನೀವು ಉತ್ತಮ ಹಾಸ್ಯಗಾರನಾಗಿದ್ದು, ಸ್ಟ್ಯಾಂಡ್-ಅಪ್ ಕಾಮಿಡಿಯನ್ ಆಗಬೇಕು ಅಂತ ಬಯಸೋದಿದ್ರೆ ಇಷ್ಟು ಮಾಡಿ ಸಾಕು. 

ಮನೆಯಲ್ಲೇ ಕಲಿಸಲು ಮಕ್ಕಳಿಗೆ ವರವಾದ ಟಾಪ್ ಪೆರೇಂಟ್ App

ಸ್ಟ್ಯಾಂಡ್‌  ಅಪ್ ಕಮೆಡಿಯನ್ ಆಗುವುದು ಹೇಗೆ?
ಸ್ಟ್ಯಾಂಡ್-ಅಪ್ ಹಾಸ್ಯಗಾರರು ಸದಾ ಯೋಚಿಸಬೇಕು. ಬಳಿಕ ತಮ್ಮದೇ ಆದ ಕಾಮಿಕ್ ಆಕ್ಟ್ (Comic act) ಅನ್ನು ರಚಿಸಬೇಕು. ಎಷ್ಟು ಸಾಧ್ಯವೋ ಅಷ್ಟು ಸ್ಟ್ಯಾಂಡ್-ಅಪ್ ಹಾಸ್ಯ ಕಾರ್ಯಕ್ರಮಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಬೇಕು.  ಹೆಚ್ಚಿನ ಸ್ಟ್ಯಾಂಡ್ ಅಪ್ ಕಾಮಿಡಿಯನ್‌ಗಳು ಜಯಿಸಬೇಕಾದ ದೊಡ್ಡ ಅಡೆತಡೆಗಳು ಎದುರಾಗೋದು ವೇದಿಕೆಯಲ್ಲಿ. ಪ್ರೇಕ್ಷಕರ ಮುಂದೆ ನಿಲ್ಲುವ ಭಯ ಕಾಡುತ್ತೆ. ಇದನ್ನ ನಿವಾರಿಸಿಕೊಳ್ಳಲು, ಅವಕಾಶ ಸಿಕ್ಕಾಗಲೆಲ್ಲಾ ಓಪನ್ ಮೈಕ್ ಈವೆಂಟ್‌ (Open mice Event)ಗಳಲ್ಲಿ ಪ್ರದರ್ಶನ ನೀಡುವುದು. ಇದು ನಿಮ್ಮ ಭಯವನ್ನು ಹೋಗಲಾಡಿಸಲು ನೆರವಾಗುತ್ತದೆ. ಜೊತೆಗೆ ಪ್ರೇಕ್ಷಕರನ್ನು ಮನರಂಜಿಸುವ ಜೋಕ್‌ಗಳನ್ನು ಅಳೆಯಲು ಮತ್ತು ಪರೀಕ್ಷಿಸಲು ಅನುವು ಮಾಡಿಕೊಡುತ್ತದೆ.  

ಜೋಕ್‌ಗಳನ್ನು ನೀವು ಬರೆಯುವಾಗ, ಕ್ರಾಸ್ ಚೆಕ್ ಮಾಡಿ ಮತ್ತು ನಿಮ್ಮ ಸುತ್ತ ನಡೆಯುವ ಈವೆಂಟ್‌ಗಳೊಂದಿಗೆ ಅವುಗಳನ್ನು ಹೊಂದಿಸಿ. ಹೆಚ್ಚಿನ ಹಾಸ್ಯಗಾರರು ತಮ್ಮದೇ ಆದ ಹಾಸ್ಯ ಶೈಲಿಯನ್ನು ಹೊಂದಿದ್ದಾರೆ. ಈ ಕ್ಷೇತ್ರದಲ್ಲಿ, ಸ್ವಂತಿಕೆ (Individuality) ಅನ್ನೋದು ಬಹಳ ಮುಖ್ಯವಾಗುತ್ತದೆ. ಎಂದಿಗೂ ಕುರುಡಾಗಿ ನಕಲಿಸಲು ಹೋಗಬೇಡಿ.  ಪ್ರತಿ ಪ್ರದರ್ಶನದ ನಂತರ ನಿಮ್ಮ ಕಾರ್ಯಕ್ಷಮತೆಯನ್ನು ನೀವು ಮೌಲ್ಯಮಾಪನ ಮಾಡಬೇಕು. ನಿಮ್ಮ ಕೆಲವು ಜೋಕ್‌ಗಳು ಪ್ರೇಕ್ಷಕರಲ್ಲಿ ದೊಡ್ಡ ಹಿಟ್‌ಗಳಾಗಿ ಹೊರಹೊಮ್ಮುತ್ತವೆ. ಆದರೆ ಇತರರು ಅಷ್ಟೇನೂ ಕುಳಿತುಕೊಳ್ಳುವುದಿಲ್ಲ. ಹೀಗಾಗಿ ಮೌಲ್ಯಮಾಪನ ಮಾಡಿಕೊಂಡರೆ ಮುಂದಿನ ಶೋ ಉತ್ತಮವಾಗಿ ರೂಪಿಸಬಹುದು.  

ಪ್ರತಿಭಾವಂತ ವಿದ್ಯಾರ್ಥಿಗಳೇ... ಈ ಸ್ಕಾಲರ್‌ಶಿಪ್‌ಗಳನ್ನು ಗಮನಿಸಿ! 

ಜನರನ್ನು ಅಚ್ಚರಿಗೊಳಿಸಲು ಮತ್ತು ಅವರ ವೈಯಕ್ತಿಕ ಆಸಕ್ತಿಯ ಸರಿಯಾದ ವಿಷಯಗಳನ್ನೇ ಆಯ್ಕೆ ಮಾಡಿಕೊಂಡು ಹಾಸ್ಯವಾಗಿ ತೋರಿಸಿದರೆ ಉತ್ತಮ.  ಅದಕ್ಕಾಗಿ ಒಂದಷ್ಟು ಅಂಶಗಳನ್ನ ನೆನಪಿಡಿ. ಮೊದಲು ನಿಮ್ಮ ಜೋಕ್‌ನ ಮುಖ್ಯಾಂಶವನ್ನ ಹೈಲೆಟ್ ಮಾಡಿಕೊಳ್ಳಿ. ನಿಮ್ಮ ಪ್ರೇಕ್ಷಕರ ದಿನನಿತ್ಯದ ಅನುಭವಗಳಾಗಿದ್ದರೆ ಚೆನ್ನ. ಆಗಾಗ ಕನ್ನಡಿಯ ಮುಂದೆ ಪ್ರದರ್ಶನ ನೀಡಿ. ನಿಮ್ಮ ಪ್ರೇಕ್ಷಕರ ಮನಸ್ಸಿನಲ್ಲಿ ಚಿತ್ರ ಬಿಡಿಸಲು ಕಥೆಯನ್ನು ಹೇಳಿ. ಯಾವುದೇ ಕಾರಣಕ್ಕೂ ಸ್ಟೇಜ್ ಮೇಲೆ ನಿಂತಾದ ಮೆಲು ಧ್ವನಿಯಿಂದ ಹಾಸ್ಯ ಪ್ರಾರಂಭಿಸಬೇಡಿ. ನಿಕಟ ಸ್ನೇಹಿತರ ನಡುವೆ ಪರೀಕ್ಷಿಸದೆ ಸಂಪೂರ್ಣವಾಗಿ ತಾಜಾ ಹಾಸ್ಯವನ್ನು ಹೇಳಬೇಡಿ. ವೇದಿಕೆಯಲ್ಲಿದ್ದಾಗ ಒತ್ತಡವನ್ನು ಉಂಟುಮಾಡಬೇಡಿ ಅಥವಾ ಚಿಂತಿಸಬೇಡಿ ಅಥವಾ ಹಿಂಜರಿಯಬೇಡಿ.

PREV
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ