Omicron Threat: 'ಕೇಸ್‌ಗಳ ಸ್ಫೋಟ ನೋಡಿ ಶಾಲೆ ಬಂದ್‌, ಲಾಕ್‌ಡೌನ್‌ ಮಾಡಬೇಡಿ'

Kannadaprabha News   | Asianet News
Published : Jan 09, 2022, 04:14 AM ISTUpdated : Jan 09, 2022, 04:18 AM IST
Omicron Threat: 'ಕೇಸ್‌ಗಳ ಸ್ಫೋಟ ನೋಡಿ ಶಾಲೆ ಬಂದ್‌, ಲಾಕ್‌ಡೌನ್‌ ಮಾಡಬೇಡಿ'

ಸಾರಾಂಶ

*  ಶಾಲೆ, ಕಾಲೇಜು ಮುಚ್ಚುವುದು, ಲಾಕ್‌ಡೌನ್‌ ಇವೆಲ್ಲಾ ಗಾಬರಿಯ ಕ್ರಮ *  ಸೋಂಕು ಹರಡುತ್ತಿದ್ದರೂ ಆಸ್ಪತ್ರೆ ಸೇರುವವರ ಸಂಖ್ಯೆ ಕಡಿಮೆ ಇದೆ *  ಎಲ್ಲ ಸೋಂಕಿತರಿಗೆ ‘ಕಾಯಿಲೆ ಪೀಡಿತ’ ಎನ್ನಲಾಗದು  

ನವದೆಹಲಿ(ಜ.09):  ದೇಶದಲ್ಲಿ(India) ದಿನೇದಿನೇ ಕೋವಿಡ್‌(Covid19) ಸೋಂಕಿತರ ಸಂಖ್ಯೆ ಹಲವು ಪಟ್ಟು ಏರಿಕೆಯಾಗುತ್ತಿರುವ ಬಗ್ಗೆ ಶ್ರೀಸಾಮಾನ್ಯರು ಆತಂಕಕ್ಕೆ ಒಳಗಾಗಿರುವಾಗಲೇ, ಮೊದಲು ಆ ಸಂಖ್ಯೆ ನೋಡಿ ಗಾಬರಿಯಾಗುವುದನ್ನು ನಿಲ್ಲಿಸಿ. ಸಂಖ್ಯೆ ಆಧರಿಸಿ ನಿರ್ಬಂಧಗಳನ್ನು ಹೇರಬೇಡಿ ಎಂದು ರಾಷ್ಟ್ರೀಯ ಕೋವಿಡ್‌ ಸೂಪರ್‌ ಮಾಡೆಲ್‌ ಸಮಿತಿಯ ಮುಖ್ಯಸ್ಥ ಡಾ. ಎಂ. ವಿದ್ಯಾಸಾಗರ್‌(Dr M Vidyasagar) ಸಲಹೆ ಮಾಡಿದ್ದಾರೆ.

‘ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಹೋಗುತ್ತದೆ. ಏಕೆಂದರೆ, ಅದರ ವಿರುದ್ಧ ಹೋರಾಡುವ ಶಕ್ತಿ ನಮ್ಮಲ್ಲಿಲ್ಲ. ಆದರೆ ಈಗಿನದ್ದು (ಒಮಿಕ್ರೋನ್‌ ರೂಪಾಂತರಿ) ಗಂಭೀರ ಕಾಯಿಲೆಯಲ್ಲ. ಚಳಿಗಾಲದಲ್ಲಿ(Winter0 ಹೇಗೆ ಜನರು ಶೀತಕ್ಕೆ ತುತ್ತಾಗುತ್ತಾರೋ ಹಾಗೆಯೇ ಇದು. ಹೀಗಾಗಿ ಕೋವಿಡ್‌ ಸೋಂಕಿತರ ಸಂಖ್ಯೆಯನ್ನು ನೋಡಿ ಶಾಲೆಗಳನ್ನು ಹಾಗೂ ಕಚೇರಿಗಳನ್ನು ಮುಚ್ಚಿಸುವುದು ಅಥವಾ ಲಾಕ್‌ಡೌನ್‌(Lockdown) ಹೇರುವಂತಹ ನೀತಿ ನಿರೂಪಣೆಯ ಕ್ರಮಗಳನ್ನು ತೆಗೆದುಕೊಳ್ಳಬೇಡಿ. ಲಾಕ್‌ಡೌನ್‌ ಹೇರಿಕೆಯಿಂದ ಕೋವಿಡ್‌ ಹರಡುವಿಕೆ ನಿಲ್ಲುವುದಿಲ್ಲ. ಅದರ ಬದಲಿಗೆ ಇದು ಜನರಲ್ಲಿ ಗಾಬರಿ ಹಾಗೂ ಆತಂಕವನ್ನು ಸೃಷ್ಟಿಸುತ್ತದೆ’ ಎಂದು ಹೈದರಾಬಾದ್‌ ಐಐಟಿ ಪ್ರಾಧ್ಯಾಪಕರೂ ಆಗಿರುವ ಡಾ. ವಿದ್ಯಾಸಾಗರ್‌ ತಿಳಿಸಿದ್ದಾರೆ.

Covid Crisis : ಮತ್ತೆ ಶುರುವಾಗುತ್ತಾ ಮಕ್ಕಳಿಗೆ ಆನ್‌ಲೈನ್‌ ಕ್ಲಾಸ್‌

‘ಒಮಿಕ್ರೋನ್‌(Omicron)ಹಿನ್ನೆಲೆಯಲ್ಲಿ ಕೇಸು ಹೆಚ್ಚಾಗುತ್ತಿದೆ. ಆದರೆ ಆ ಸಂಖ್ಯೆಯನ್ನು ಗಮನಿಸಿ ತೀವ್ರತೆಯನ್ನು ಅಳೆಯಲಾಗದು. ಈ ವೈರಾಣು ಭಾರಿ ಪ್ರಮಾಣದಲ್ಲಿ ರೂಪಾಂತರಗೊಂಡಿದೆ. ಲಸಿಕೆಯಿಂದ(Vaccine) ದೊರೆತಿರುವ ಹಾಗೂ ಸೋಂಕಿನಿಂದ ಸಿಕ್ಕಿರುವ ಸ್ವಾಭಾವಿಕ ರೋಗನಿರೋಧಕ ಶಕ್ತಿಯನ್ನು ಭೇದಿಸುತ್ತಿದೆ. ಪರಿಸ್ಥಿತಿ ಹೀಗಿರುವಾಗ ನಿತ್ಯ ಸೋಂಕು ಹೆಚ್ಚಾಗಿಯೇ ಇರುತ್ತದೆ. ಒಬ್ಬ ವ್ಯಕ್ತಿ ಸೋಂಕಿನಿಂದ ಪಾಸಿಟಿವ್‌ ಆಗಿದ್ದಾನೆ ಎಂದಾಕ್ಷಣ ಆತ ಗಂಭೀರ ಕಾಯಿಲೆಗೆ ತುತ್ತಾಗುವುದಿಲ್ಲ. ವೈರಸ್‌ ಸೋಂಕಿತನಾಗುತ್ತಾನೆಯೇ ವಿನಃ ಕಾಯಿಲೆಪೀಡಿತ ಅಲ್ಲ’ ಎಂದಿದ್ದಾರೆ.

ಆಸ್ಪತ್ರೆ ವಾಸ ಕಡಿಮೆ:

‘ಒಮಿಕ್ರೋನ್‌ ಆರಂಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ(South Africa) ಶೇ.12ರಷ್ಟು ಮಂದಿ ಆಸ್ಪತ್ರೆಗೆ ಸೇರುತ್ತಿದ್ದರು. ಆದರೆ ಈಗ ಭಾರತದಲ್ಲಿ ಈ ಸಂಖ್ಯೆ ಶೇ.3.5ರಷ್ಟಿದ್ದರೆ, ಬ್ರಿಟನ್‌ನಲ್ಲಿ(Britain) ಶೇ.1ರಷ್ಟಿದೆ. ಭಾರತದಲ್ಲಿ ಶೇ.1.3ರಷ್ಟು ಮಂದಿಗೆ ಮಾತ್ರ ಆಮ್ಲಜನಕದ ಅಗತ್ಯವಿದೆ. ಉದಾಹರಣೆಗೆ 1000 ಮಂದಿ ಸೋಂಕಿತರಾದರೆ, 35 ಮಂದಿ ಆಸ್ಪತ್ರೆಗೆ ಸೇರುತ್ತಿದ್ದಾರೆ. ಆ ಪೈಕಿ 13 ಮಂದಿಗಷ್ಟೇ ಆಮ್ಲಜನಕ ಬೇಕಿದೆ. ಅದೂ ಅಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಅವಧಿಯೂ ಕಡಿಮೆಯಾಗಿದೆ. ಡೆಲ್ಟಾಅಲೆ ಇದ್ದಾಗ 10 ದಿನ ಆಸ್ಪತ್ರೆಯಲ್ಲಿರಬೇಕಾಗಿತ್ತು. ಆದರೆ ಈಗ 3ರಿಂದ 5 ದಿನಕ್ಕೆ ಸೋಂಕಿತರು ಡಿಸ್ಚಾರ್ಜ್‌ ಆಗುತ್ತಿದ್ದಾರೆ. ಹೀಗಾಗಿ ಕಠಿಣ ಕ್ರಮಗಳನ್ನು ಈಗಲೇ ಕೈಗೊಳ್ಳುವುದು ಅವಧಿಪೂರ್ವವಾಗುತ್ತದೆ ಡಾ. ವಿದ್ಯಾಸಾಗರ್‌ ಎಂದು ಹೇಳಿದ್ದಾರೆ.

karnataka Schools Named Ambedkar: ರಾಜ್ಯದ ಶಾಲೆಗಳಿಗೆ ಡಾ. ಬಿಆರ್ ಅಂಬೇಡ್ಕರ್ ಹೆಸರು

ಕೊರೋನಾ ಕೇಸ್‌ ಏರಿಕೆಯಾದರೆ 1-2 ವಾರದಲ್ಲಿ ಶಾಲೆ ಬಂದ್‌?

ರಾಜ್ಯದಲ್ಲಿ(Karnataka) ಕೆಲ ವಾರಗಳಿಂದ ಕೋವಿಡ್‌ 19 ಮತ್ತು ಒಮಿಕ್ರೋನ್‌ (Omicron) ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದ್ದು ಇದೇ ವೇಗದಲ್ಲಿ ಮುಂದುವರೆದರೆ ಒಂದೆರಡು ವಾರದಲ್ಲಿ ಶಾಲೆಗಳ (School) ಬಂದ್‌ ಮಾಡುವ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಉನ್ನತ ಮೂಲಗಳ ಪ್ರಕಾರ, ಶಾಲೆಗಳ ಬಂದ್‌ ನಿರ್ಧಾರ ಕೈಗೊಂಡರೂ ಒಮ್ಮೆಲೆ ರಾಜ್ಯಾದ್ಯಂತ ಶಾಲೆಗಳನ್ನು ಬಂದ್‌ ಮಾಡುವ ಸಾಧ್ಯತೆ ಬಹಳ ಕಡಿಮೆ. ಯಾವ್ಯಾವ ತಾಲೂಕುಗಳಲ್ಲಿ ಕೋವಿಡ್‌ ಪ್ರಕರಣಗಳು ವರದಿಯಾಗಿವೆ ಹಾಗೂ ಹೆಚ್ಚಾಗುತ್ತಿವೆಯೋ ಅಂತಹ ತಾಲೂಕು ವ್ಯಾಪ್ತಿಯ ಶಾಲೆಗಳನ್ನು ಮೊದಲು ಬಂದ್‌ ಮಾಡಲಾಗುತ್ತದೆ.

ಮುಂದಿನ ಹಂತದಲ್ಲಿ ಸೋಂಕು ವ್ಯಾಪಿಸುತ್ತಾ ಹೋಗುವ ಇತರೆ ತಾಲೂಕುಗಳಲ್ಲಿ ಶಾಲೆ ಬಂದ್‌ ಮಾಡುತ್ತಾ ಹೋಗುವ ಚಿಂತನೆ ಸರ್ಕಾರದಲ್ಲಿದೆ. ಯಾವುದೇ ಪ್ರಕರಣಗಳು ವರದಿಯಾಗದ ತಾಲೂಕುಗಳಲ್ಲಿ ಶಾಲೆಗಳನ್ನು ಯಥಾವತ್ತಾಗಿ ನಡೆಸಲು ಕೂಡ ಲೆಕ್ಕಾಚಾರ ನಡೆಸಿದೆ. ಈ ಮಧ್ಯೆ, ಸರ್ಕಾರವೇನಾದರೂ ಏಕಾಏಕಿ ಲಾಕ್‌ಡೌನ್‌ ನಿರ್ಧಾರಕ್ಕೆ ಬಂದರೆ ಇಡೀ ರಾಜ್ಯದಲ್ಲಿ ಶಾಲೆಗಳು ತಂತಾನೆ ಬಂದ್‌ ಆಗಲಿವೆ.
 

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ