ಡಿಪ್ಲೊಮಾ PUCಗೆ ತತ್ಸಮಾನ: ಉದ್ಯೋಗ ನೇಮಕಾತಿಗೂ ಅನ್ವಯ

By Suvarna News  |  First Published Sep 30, 2021, 6:12 PM IST

* ಡಿಪ್ಲೋಮಾ ವಿದ್ಯಾರ್ಹತೆ' 'PUC ವಿದ್ಯಾರ್ಹತೆಗೆ ತತ್ಸಮಾನ
* ಮೂರು ವರ್ಷಗಳ ಡಿಪ್ಲೊಮಾ ಶಿಕ್ಷಣವನ್ನು ಪಿಯುಸಿಗೆ ಸಮ ಎಂದು ಘೋಷಿಸಿದ ರಾಜ್ಯ ಸರ್ಕಾರ
* ಉದ್ಯೋಗ ನೇಮಕಾತಿಗೂ ಇದು ಅನ್ವಯ 


ಬೆಂಗಳೂರು, (ಸೆ.30): ಮೂರು ವರ್ಷಗಳ ಡಿಪ್ಲೊಮಾ(Diploma) ಕೋರ್ಸ್ ಅನ್ನು ಪಿಯುಸಿ (PUC) ವಿದ್ಯಾರ್ಹತೆಗೆ ತತ್ಸಮಾನವೆಂದು ರಾಜ್ಯ ಸರ್ಕಾರ ಘೋಷಿಸಿದೆ. 

ಈ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಇಂದು (ಸೆ.30)ಆದೇಶ ಹೊರಡಿಸಿದ್ದು. ನೇರ ನೇಮಕಾತಿ ಅಥವಾ ಅನುಕಂಪದ ಆಧಾರದ ಮೇಲೆ ನೇಮಕಾತಿ ‌ಹೊಂದಲು ಮತ್ತು ಉನ್ನತ ಶಿಕ್ಷಣ ಪಡೆಯಲು ತಾಂತ್ರಿಕ ಶಿಕ್ಷಣ ಇಲಾಖೆಯ ಮೂರು ವರ್ಷಗಳ ಡಿಪ್ಲೊಮಾ ಶಿಕ್ಷಣವನ್ನು ಪಿಯುಸಿಗೆ ಸಮ ಎಂದು ಘೋಷಿಸಲಾಗಿದೆ. 

Tap to resize

Latest Videos

undefined

ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಚಿವರಿಂದ ಡಬಲ್ ಗುಡ್ ನ್ಯೂಸ್

ಈ‌ ವಿಷಯದಲ್ಲಿ‌ ಗೊಂದಲ ಇದ್ದ ಕಾರಣ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ (Dr CN Ashwath narayan) ಅವರು ಹಲವು ಸಭೆಗಳನ್ನು‌ ಮಾಡಿದ್ದರು. ಅವರ ಸಲಹೆ‌ ಮೇರೆಗೆ ಈ ತೀರ್ಮಾನ ಮಾಡಲಾಗಿದೆ. 

2015ಕ್ಕಿಂತ ಹಿಂದಿನ‌ ವರ್ಷ ಗಳಲ್ಲಿ ಡಿಪ್ಲೊಮಾ ಉತ್ತೀರ್ಣರಾದ ವಿದ್ಯಾರ್ಥಿಗಳು ಕೆಪಿಎಸ್ ಸಿ‌ ನಡೆಸುವ ಇಲಾಖಾ‌ ಪರೀಕ್ಷೆಗಳ‌ ಜತೆಗೆ ಕನ್ನಡ ಭಾಷಾ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದನ್ನು ಕಡ್ಡಾಯ‌ ಮಾಡಲಾಗಿದೆ. 

click me!