ಇದು ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ನಡೆದ ಘಟನೆ. ಶಿಕ್ಷಕರಲ್ಲಿ ಹೊಂದಾಣಿಕೆ ಕೊರತೆಯಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ ಎಂದು ಶಾಲೆಗೆ ಬೀಗ ಜಡಿದಿದ್ದ ಬಿಳೆಬಾಳ ಗ್ರಾಮಸ್ಥರು ಬಿಇಒ ಸಂಧಾನಯಶಸ್ವಿಯಾಗಿ ಶಾಲೆ ಓಪನ್ ಮಾಡಿದ್ದು, ಪ್ರತಿಭಟನೆ ಹಿಂದಕ್ಕೆ ಪಡೆದಿದ್ದಾರೆ.
ಕುಂದಗೋಳ (ಡಿ.8): ಶಿಕ್ಷಕರಲ್ಲಿ ಹೊಂದಾಣಿಕೆ ಕೊರತೆಯಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ ಎಂದು ಶಾಲೆಗೆ ಬೀಗ ಜಡಿದಿದ್ದ ಬಿಳೆಬಾಳ ಗ್ರಾಮಸ್ಥರು, ಬುಧವಾರ ಬಿಇಒ ನೀಡಿದ ಭರವಸೆ ಮೇರೆಗೆ ಪ್ರತಿಭಟನೆ ಹಿಂಪಡೆದರು. ಬಳಿಕ ಶಾಲೆಯ ಬೀಗ ತೆರೆದರು. ಶಿಕ್ಷಕರಲ್ಲಿ ಹೊಂದಾಣಿಕೆ ಕೊರತೆಯಿದೆ. ಇದರಿಂದ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದ್ದ ಗ್ರಾಮಸ್ಥರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೀಗ ಜಡಿದು ಮಂಗಳವಾರ ಪ್ರತಿಭಟನೆ ನಡೆಸಿದ್ದರು. ಬುಧವಾರ ಕೂಡ ಬೀಗ ತೆರೆಯದೇ ಪ್ರತಿಭಟನೆ ಮುಂದುವರಿಸಿದ್ದರು. ಈ ನಡುವೆ ಬುಧವಾರ ಬಿಸಿಯೂಟ ವಾಹನ ತಡೆದಿದ್ದರು.
ಶಿಕ್ಷಕರಲ್ಲಿ ಒಬ್ಬರಿಗೊಬ್ಬರಿಗೆ ಆಗುತ್ತಿಲ್ಲ. ಕೆಲವರು ಸರಿಯಾಗಿ ಪಾಠವನ್ನೇ ಮಾಡುವುದಿಲ್ಲ. ಶಿಕ್ಷಕರು, ಮುಖ್ಯಶಿಕ್ಷಕರ ನಡುವೆ ಹೊಂದಾಣಿಕೆಯೇ ಇಲ್ಲ. ಇದರಿಂದ ಮಕ್ಕಳ ಕಲಿಕೆಯ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಕೂಡಲೇ ಇಲ್ಲಿನ ವ್ಯವಸ್ಥೆ ಸರಿಪಡಿಸಬೇಕು. ಅಲ್ಲಿವರೆಗೂ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಬಿಇಒ ವಿದ್ಯಾ ಕುಂದರಗಿ, ವಾರದೊಳಗೆ ಶಾಲೆಯಲ್ಲಿನ ಎಲ್ಲ ಸಮಸ್ಯೆ ಬಗೆಹರಿಸಿಕೊಂಡು ಹೋಗದಿದ್ದರೆ ಶಿಕ್ಷಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಬಳಿಕ ಗ್ರಾಮಸ್ಥರೊಂದಿಗೆ ಮಾತನಾಡಿದ ಬಿಇಒ, ವಾರದೊಳಗೆ ಎಲ್ಲ ಸಮಸ್ಯೆ ನಿವಾರಣಗೆ ಆಗದಿದ್ದರೆ ಮುಂದಿನ ಕ್ರಮಕೈಗೊಳ್ಳಲಾಗುವುದು. ಅಲ್ಲಿವರೆಗೂ ಪ್ರತಿಭಟನೆ ಹಿಂದಕ್ಕೆ ಪಡೆಯುವಂತೆ ಮನವೊಲಿಸಿದರು. ಇದರಿಂದ ಶಾಂತರಾದ ಗ್ರಾಮಸ್ಥರು, ಪ್ರತಿಭಟನೆ ಹಿಂಪಡೆದು ಶಾಲೆಯ ಬೀಗ ತೆರವುಗೊಳಿಸಿದರು. ನೀವು ನೀಡಿದ ಭರವಸೆ ಈಡೇರದಿದ್ದರೆ ಮತ್ತೆ ಬೀಗ ಜಡಿಯಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ಗ್ರಾಮಸ್ಥರು ನೀಡಿದರು.
ಈ ವೇಳೆ ಎಸ್‌ಡಿಎಂಸಿ ಅಧ್ಯಕ್ಷ ಗಂಗಪ್ಪ ಸಂಶಿ, ಗ್ರಾಮಸ್ಥರಾದ ಶಂಕರ ಚಲವಾದಿ, ಮಲ್ಲಪ್ಪ ತಡಸದ, ಹನೀಫ್ ಕಿಲ್ಲೆದಾರ, ನಿಂಗಪ್ಪ ತಿರಕಪ್ಪನವರ, ಮುಸ್ತಾಕ ಕಿಲ್ಲೆದಾರ, ನಳಿನಗೌಡ ಪಾಟೀಲ ಪಾಲ್ಗೊಂಡಿದ್ದರು.
ಸರ್ಕಾರಿ ಬಿಇ ಕಾಲೇಜುಗಳಿಗೆ ಐಐಟಿ ರೀತಿ ಆಡಳಿತ ಮಂಡಳಿ: ಸಚಿವ ಅಶ್ವತ್ಥ್
ಖಗೋಳವಿಜ್ಞಾನ-ಬಾಹ್ಯಾಕಾಶ ಪ್ರಯೋಗಾಲಯ ಉದ್ಘಾಟನೆ
ಹುಬ್ಬಳ್ಳಿ: ರಾಜ್ಯದಲ್ಲಿಯೇ ಮೊದಲ ಬಾರಿಗೆ ಇಲ್ಲಿನ ದೇಶಪಾಂಡೆ ನಗರದ ಶಾರದಾ ಹೊಟೇಲ್ ಹಿಂಭಾಗದಲ್ಲಿನ ಬಿಎಂ ಪ್ಲಾಜಾ ಕಟ್ಟಡದ 3ನೇ ಮಹಡಿಯಲ್ಲಿ ಹಿಮಾಲಯನ್ ಸ್ಪೇಸ್ ಸೆಂಟರ್ ವತಿಯಿಂದ ಖಗೋಳವಿಜ್ಞಾನ ಮತ್ತು ಬಾಹ್ಯಾಕಾಶ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಡಿ. 10ರಂದು ಪ್ರಯೋಗಾಲಯದ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದು ಸೆಂಟರ್‌ನ ಸಹಸಂಸ್ಥಾಪಕಿ ಶ್ರೀದೇವಿ ರೂಗಿ ಹೇಳಿದರು.
KARTET: ಮುಂದಿನ ವಾರಾಂತ್ಯದಲ್ಲಿ ಟಿಇಟಿ ಫಲಿತಾಂಶ ಪ್ರಕಟ : ಬಿ.ಸಿ. ನಾಗೇಶ್
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಮಾಲಯನ್ ಸ್ಪೇಸ್ ಸೆಂಟರ್ ಇಸ್ರೋದಿಂದ ಮಾನ್ಯತೆ ಪಡೆದ ಖಾಸಗಿ ಬಾಹ್ಯಾಕಾಶ ಶಿಕ್ಷಣ ಸಂಸ್ಥೆಯಾಗಿದೆ. ಪ್ರಯೋಗಾಲಯವನ್ನು ಅಂದು ಬೆಳಗ್ಗೆ 11ಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಉದ್ಘಾಟಿಸುವರು. ಇಸ್ರೋದ ಮಾಜಿ ಅಧ್ಯಕ್ಷ ರಂಗರಾಜನ್, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಸೆಂಟರ್‌ನ ಸಹಸಂಸ್ಥಾಪಕ ವೀರೇಶ ಪಾಟೀಲ, ಸದಸ್ಯರಾದ ಎಚ್.ಎಸ್. ರೂಗಿ, ಕೀರ್ತಿ, ಅಬ್ದುಲ್ ಇದ್ದರು.