ಸಿಬಿಎಸ್‌ಇ, ಐಸಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟವಾಗುವುದು ತಡವಾಗುತ್ತಿರುವ ಹಿನ್ನೆಲೆಯಲ್ಲಿ ಕೆಇಎ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ನಡೆಸಿದ್ದ 2022ನೇ ಸಾಲಿನ ಕೆ-ಸಿಇಟಿ ಫಲಿತಾಂಶ ಈಗಾಗಲೇ ಘೋಷಿಸಿರುವಂತೆ ಜು.17ಕ್ಕೆ ಪ್ರಕಟವಾಗುವ ಸಾಧ್ಯತೆ ಕಡಿಮೆ ಇದೆ.
ಬೆಂಗಳೂರು (ಜು.14): ಕೇಂದ್ರೀಯ ಪಠ್ಯಕ್ರಮದ ಸಿಬಿಎಸ್‌ಇ, ಐಸಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟವಾಗುವುದು ತಡವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ನಡೆಸಿದ್ದ 2022ನೇ ಸಾಲಿನ ಕೆ-ಸಿಇಟಿ ಫಲಿತಾಂಶ ಈಗಾಗಲೇ ಘೋಷಿಸಿರುವಂತೆ ಜು.17ಕ್ಕೆ ಪ್ರಕಟವಾಗುವ ಸಾಧ್ಯತೆ ಕಡಿಮೆ ಇದೆ. ಜು.17ರೊಳಗೆ ರಾಜ್ಯದ ದ್ವಿತೀಯ ಪಿಯುಸಿ ಫಲಿತಾಂಶದ ಜೊತೆಗೆ ಸಿಬಿಎಸ್‌ಇ, ಐಸಿಎಸ್‌ಇ 12ನೇ ತರಗತಿ ಫಲಿತಾಂಶವೂ ಪ್ರಕಟವಾಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ರಾಜ್ಯದ ಫಲಿತಾಂಶ ಮಾತ್ರ ಪ್ರಕಟವಾಗಿದ್ದು, ಕೇಂದ್ರೀ¿å ಪಠ್ಯಕ್ರಮದ ಮಂಡಳಿಗಳು ಇನ್ನೂ ಫಲಿತಾಂಶ ಪ್ರಕಟಿಸಿಲ್ಲ. ಹಾಗಾಗಿ ಆ ಫಲಿತಾಂಶಕ್ಕೆ ಕಾಯುತ್ತಿದ್ದೇವೆ ಎನ್ನುತ್ತಾರೆ ಪ್ರಾಧಿಕಾರದ ಅಧಿಕಾರಿಗಳು.
ರಾರಯಂಕ್ ಪಟ್ಟಿ ತಯಾರಿಸಲು ಕೆ-ಸಿಇಟಿ ಫಲಿತಾಂಶದ ಜೊತೆಗೆ ದ್ವಿತೀಯ ಪಿಯುಸಿಯ ಪಿಸಿಎಂ ವಿಷಯಗಳಿಂದ ಶೇ.50ರಷ್ಟುಅಂಕಗಳನ್ನು ಪರಿಗಣಿಸುತ್ತೇವೆ. ಕೇಂದ್ರೀಯ ಪಠ್ಯಕ್ರಮದ ಮಂಡಳಿಗೂ 12ನೇ ತರಗತಿ ಫಲಿತಾಂಶ ಪ್ರಕಟಿಸಿದ್ದರೆ ರಾರಯಂಕ್ ಪಟ್ಟಿಸಿದ್ಧಪಡಿಸಲು ಅನುಕೂಲವಾಗುತ್ತಿತ್ತು. ಈಗ ಅದು ತಡವಾಗುತ್ತಿದೆ. ಇನ್ನು ಒಂದೆರಡು ದಿನದಲ್ಲಿ ಫಲಿತಾಂಶ ಬಂದರೂ ರಾರಯಂಕ್ ಪಟ್ಟಿಸಿದ್ಧತೆಗೆ ಸಮಯಾವಕಾಶ ಬೇಕಾಗುತ್ತದೆ. ಹಾಗಾಗಿ ಜು.17ರಂದು ಫಲಿತಾಂಶ ನೀಡುವ ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ.
ಕಲಿಕೆಗೆ ಬೆಳಕು ನೀಡಿದ ಸೂರ್ಯ: ವಸತಿ ಶಾಲೆಯಲ್ಲಿ ಸೋಲಾರ್‌ನಿಂದ ಸ್ಮಾರ್ಟ್ ಕ್ಲಾಸ್
ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಗಳು ಮೇ 24ಕ್ಕೆ ಮತ್ತು 12ನೇ ತರಗತಿ ಪರೀಕ್ಷೆ ಜೂ.15ಕ್ಕೆ ಕೊನೆಗೊಂಡಿತ್ತು. ಇನ್ನು ಐಎಸ್‌ಸಿಇ 10ನೇ ತರಗತಿ ಮೇ 20ಕ್ಕೆ ಮತ್ತು 12ನೇ ತರಗತಿ ಪರೀಕ್ಷೆ ಜೂ.13ಕ್ಕೆ ಕೊನೆಗೊಂಡಿತ್ತು. ಈ ವರ್ಷ ಶೈಕ್ಷಣಿಕ ವರ್ಷವನ್ನು ಎರಡು ವಿಭಾಗ ಮಾಡಿ ಪರೀಕ್ಷೆ ನಡೆಸಲಾಗಿತ್ತು. ಕೆಸಿಇಟಿಗೆ ಈ ಬಾರಿ 2,16,525 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ರಾಜ್ಯಾದ್ಯಂತ 486 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು.
1-12 ಕ್ಲಾಸಲ್ಲಿ ಕನ್ನಡ ಕಲಿಕೆ ಕಡ್ಡಾಯಕ್ಕೆ ಶಿಫಾರಸು
ಪಿಯು ಪ್ರವೇಶ ಅವಧಿ ಜು.30ರವರೆಗೆ ವಿಸ್ತರಣೆ: ಪ್ರಥಮ ಪಿಯುಸಿ ದಾಖಲಾತಿ ದಿನಾಂಕವನ್ನು ಜುಲೈ 30ರವರೆಗೆ ವಿಸ್ತರಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಸಿಬಿಎಸ್‌ಇ ಹಾಗೂ ಐಸಿಎಸ್‌ಸಿ ಬೋರ್ಡ್‌ಗಳಲ್ಲಿ 10ನೇ ತರಗತಿ ಫಲಿತಾಂಶ ಪ್ರಕಟಣೆಯು ತಡವಾಗುತ್ತಿರುವುದು ಹಾಗೂ ಹಲವು ಪಾಲಕರು, ವಿದ್ಯಾರ್ಥಿಗಳು ಪ್ರಥಮ ಪಿಯುಸಿ ದಾಖಲಾತಿ ದಿನಾಂಕವನ್ನು ವಿಸ್ತರಿಸಿ ಎಂದು ಮನವಿ ಮಾಡಿರುವ ಹಿನ್ನೆಲೆಯಲ್ಲಿ ಇಲಾಖೆಯು ದಂಡ ಶುಲ್ಕ ರಹಿತವಾಗಿ ಪ್ರಥಮ ಪಿಯುಸಿ ದಾಖಲಾತಿ ದಿನಾಂಕವನ್ನು ವಿಸ್ತರಿಸಿದೆ.