ಶೈಕ್ಷಣಿಕ ವೇಳಾಪಟ್ಟಿ ಬದಲು, ಶಾಲೆ ಆರಂಭದ ದಿನಾಂಕ ಘೋಷಿಸಿದ ಇಲಾಖೆ

By Suvarna News  |  First Published May 31, 2021, 8:37 PM IST

* ಕೊರೋನಾ ಲಾಕ್ ಮುಂದುವರಿಕೆ ಕಾರಣ ಶೈಕ್ಷಣಿಕ ವರ್ಷ ಪರಿಷ್ಕರಣೆ
* ಜೂನ್  15  ರಿಂದ ತರಗತಿ ಆರಂಭಕ್ಕೆ ಚಿಂತನೆ
* ಜೂನ್ ಒಂದರಿಂದ ತರಗತಿ ಆರಂಭ ಎಂದು  ಹೇಳಲಾಗಿತ್ತು


ಬೆಂಗಳೂರು(ಮೇ 31)  ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣದ ಹಾದಿಗೆ ಮರಳಿದೆ. ಈ ನಡುವೆ ಸರ್ಕಾರ ಶೈಕ್ಷಣಿಕ ವರ್ಷದ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿದೆ. 2021-22 ನೇ ಸಾಲಿನ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿದೆ.

ಜೂನ್ 15 ರಿಂದ 1  ರಿಂದ 7 ತರಗತಿಗಳು  ಆರಂಭ ಮಾಡುವುದಾಗಿ ಸರ್ಕಾರ ಹೇಳಿತ್ತು ಆದರೆ ಜೂನ್ 1 ರಿಂದಲೇ  8, 9 ಮತ್ತು ಹತ್ತನೇ  ತರಗತಿಗಳನ್ನ ಪ್ರಾರಂಭಿಸುವುದಾಗಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಈಗ  ತಿದ್ದುಪಡಿ ಮಾಡಿದೆ.  ಇದೀಗ ಈ ತರಗತಿಗಳ ರಜೆ ವಿಸ್ತರಣೆ ಮಾಡಿ ಆದೇಶ ನೀಡಿದೆ.

Tap to resize

Latest Videos

undefined

ವಿದ್ಯಾರ್ಥಿಸ್ನೇಹಿ ದೀಕ್ಷಾ ಆಪ್ ನಲ್ಲಿ ಏನೇನು ಲಭ್ಯ? 

ಜೂನ್ 15 ರಿಂದ 2021-22 ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ. ಪ್ರೌಢ ಶಾಲೆಗಳಿಗೆ ಮೇ 31 ರವರೆಗೂ ರಜೆ ನೀಡಲಾಗಿದ್ದು ಅದನ್ನು ವಿಸ್ತರಿಸಲಾಗಿದೆ.  ಕೊವಿಡ್ ಹಿನ್ನಲೆಯಲ್ಲಿ ಮತ್ತೆ ಶೈಕ್ಷಣಿಕ ವರ್ಷ ಪರಿಷ್ಕರಿಸಲಾಗಿದೆ.

ಪ್ರೌಢ ಶಾಲಾ ಶಿಕ್ಷಕರು ರಜೆಯ ಅವಧಿಯಲ್ಲಿ SSLC ವಿದ್ಯಾರ್ಥಿಗಳ ಪರೀಕ್ಷಾ ಸಿದ್ದತೆ ಬಗ್ಗೆ ಗಮನ ಹರಿಸಬೇಕು. ವಿದ್ಯಾರ್ಥಿಗಳ ಜೊತೆ ನಿರಂತರ ದೂರವಾಣಿ ಸಂಪರ್ಕದಲ್ಲಿರಬೇಕು. ವಿದ್ಯಾರ್ಥಿಗಳಿಗೆ ಕಲಿಕೆಗೆ ಪ್ರೇರಪಿಸಬೇಕು  ಎಂದು ತಿಳಿಸಲಾಗಿದೆ.

click me!