ಕನ್ನಡ ಅನುದಾನಿತ ಶಾಲೆ ಶಿಕ್ಷಕರ ನೇಮಕಕ್ಕೆ ಆಗ್ರಹ

By Kannadaprabha News  |  First Published Dec 15, 2022, 10:55 AM IST

ಕಟಪಾಡಿಯಲ್ಲಿ ಕಾಪು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಅನುದಾನಿತ ಶಾಲೆ ಶಿಕ್ಷಕರ ನೇಮಕಕ್ಕೆ  ನಿರ್ಣಯ ಮಂಡಿಸಲಾಗಿದೆ.


ಉಡುಪಿ(ಡಿ.15): ಸರ್ಕಾರ ಕೂಡಲೇ ಅನುದಾನಿತ ಕನ್ನಡ ಶಾಲೆಗಳಿಗೆ ಶಿಕ್ಷಕರನ್ನು ಅಥವಾ ಅತಿಥಿ ಶಿಕ್ಷಕರನ್ನು ನೇಮಿಸಬೇಕು ಎಂದು ಕಾಪು ತಾಲೂಕು ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿಯ ಗೌರವಾಧ್ಯಕ್ಷ, ಎಸ್‌ವಿಎಸ್‌ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ. ಸತ್ಯೇಂದ್ರ ಪೈ ಹೇಳಿದರು. ಅವರು ಕಟಪಾಡಿಯ ಎಸ್‌ವಿಎಸ್‌ ಪ.ಪೂ. ಕಾಲೇಜಿನಲ್ಲಿ ಕಾಪು ತಾಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಈ ಹಕ್ಕೋತ್ತಾಯ ನಿರ್ಣಯವನ್ನು ಮಂಡಿಸಿದರು. ಇದನ್ನು ಸಭೆಯಲ್ಲಿದ್ದ ಎಲ್ಲರೂ ಎದ್ದುನಿಂತು ಅಂಗೀಕರಿಸಿ ಈ ಬಗ್ಗೆ ಜನಪ್ರತಿನಿಧಿಗಳು, ಇಲಾಖೆ, ಸರ್ಕಾರಕ್ಕೆ ಹಕ್ಕೊತ್ತಾಯ ಮಾಡುವ ಬಗ್ಗೆ ನಿರ್ಧರಿಸಲಾಯಿತು.

ಅನುದಾನಿತ ಶಾಲೆಗಳಲ್ಲಿ ಸಾಕಷ್ಟುವಿದ್ಯಾರ್ಥಿಗಳಿದ್ದರೂ ಶಿಕ್ಷಕರಿಲ್ಲದೆ ಸರ್ಕಾರಗಳ ನಿರಂತರ ನಿರ್ಲಕ್ಷ ್ಯ ಧೋರಣೆಯಿಂದ ಸಂಕಷ್ಟದ ಸ್ಥಿತಿಯಲ್ಲಿವೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಅನುಪಾತಕ್ಕೆ ಅನುಗುಣವಾಗಿ ಶಿಕ್ಷಕರನ್ನು ನೇಮಿಸುವ ಸರ್ಕಾರ, ದುರ್ಬಲ ವರ್ಗದ ವಿದ್ಯಾರ್ಥಿಗಳೇ ಕಲಿಯುತ್ತಿರುವ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳನ್ನು ಅವಗಣನೆ ಮಾಡುತ್ತಿರುವುದು ಕನ್ನಡಕ್ಕೆ ಮಾಡುವ ಅನ್ಯಾಯವೇ ಆಗಿದೆ ಎಂದವರು ಹೇಳಿದರು.

Tap to resize

Latest Videos

ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದ ಸರ್ವಾಧ್ಯಕ್ಷೆ ಕ್ಯಾಥರಿನ್‌ ರೊಡ್ರಿಗಸ್‌ ವೇದಿಕೆಯಲ್ಲಿದ್ದರು. ಸಮ್ಮೇಳನದ ಅಂಗವಾಗಿ ದಿನಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳು, ವಿಚಾರಗೋಷ್ಠಿ, ವಿದ್ಯಾರ್ಥಿ ಕವಿಗೋಷ್ಠಿ, ಸಾಧಕರಿಗೆ ಸನ್ಮಾನ ನಡೆದವು. ಕಾಪು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಸ್ಟೀವನ್‌ ಕ್ವಾಡ್ರಸ್‌ ಸಮಾರೋಪ ಭಾಷಣ ಮಾಡಿದರು. ಅದಾನಿ ಯುಪಿಸಿಎಲ್‌ ಸಂಸ್ಥೆಯ ಅಧ್ಯಕ್ಷ ಡಾ. ಕಿಶೋರ್‌ ಆಳ್ವ ಸಾಧಕರನ್ನು ಸನ್ಮಾನಿಸಿದರು. ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಮತ್ತಿತರ ಗಣ್ಯರು ಶುಭ ಹಾರೈಸಿದರು. ಅನಂತ ಮೂಡಿತ್ತಾಯ, ಕೆ. ರಾಮರಾಯ ಪಾಟ್ಕರ್‌ ಕಾರ್ಯಕ್ರಮ ನಿರೂಪಿಸಿದರು. ಅಶ್ವಿನ್‌ ಲಾರೆ®್ಸ… ಮೂಡುಬೆಳ್ಳೆ ಸ್ವಾಗತಿಸಿದರು. ಕೃಷ್ಣಕುಮಾರ್‌ ರಾವ್‌ ಮಟ್ಟು ವಂದಿಸಿದರು. 

ಮಧ್ಯ ಸರ್ಕಾರಿ ಶಾಲೆಗೆ 2 ಕೋಟಿ ರು.ಗಳಲ್ಲಿ ಹೆಚ್ಚುವರಿ ಕೊಠಡಿ, ಆಟದ ಮೈದಾನ ಯೋಜನೆ
ಮಂಗಳೂರು: ರಾಜ್ಯಕ್ಕೆ ಮಾದರಿ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಸುರತ್ಕಲ್‌ ಸಮೀಪದ ಮಧ್ಯ ಸರ್ಕಾರಿ ಪ್ರಾಥಮಿಕ ಶಾಲೆಗೆ ಸರ್ಕಾರದಿಂದ ಆಟದ ಮೈದಾನ ನಿರ್ಮಿಸಲು 2 ಎಕರೆ ಜಾಗ ಮಂಜೂರಾತಿಗೊಂಡಿದ್ದು ಈ ಜಾಗದಲ್ಲಿ ಮಧ್ಯ ಶಾಲಾ ಟ್ರಸ್ಟ್‌ ಗೌರವಾಧ್ಯಕ್ಷ ಕರುಣಾಕರ ಎಂ. ಶೆಟ್ಟಿಇವರ ನೇತೃತ್ವದಲ್ಲಿ ಸುಮಾರು 2 ಕೋಟಿ ರು. ಅಂದಾಜು ವೆಚ್ಚದಲ್ಲಿ ಶಾಲೆಗೆ ಹೆಚ್ಚುವರಿ ಕೊಠಡಿ ನಿರ್ಮಾಣ ಹಾಗೂ ಸುಸಜ್ಜಿತ ಆಟದ ಮೈದಾನ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ವಿದ್ಯಾನಿಧಿ ಎಜುಕೇಷನ್‌ ಟ್ರಸ್ಟ್‌ ಅಧ್ಯಕ್ಷ ಪುಷ್ಪರಾಜ್‌ ಶೆಟ್ಟಿತಿಳಿಸಿದರು.

ಸುರತ್ಕಲ್‌ನಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2015-16ರ ಸಾಲಿನಲ್ಲಿ 75 ಮಕ್ಕಳನ್ನು ಹೊಂದಿದ್ದ ಶಾಲೆಯು ಸುವರ್ಣ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ ಟ್ರಸ್ಟ್‌ನ ಗೌರವಾಧ್ಯಕ್ಷರಾದ ಕರುಣಾಕರ ಎಂ.ಶೆಟ್ಟಿಮಧ್ಯಗುತ್ತು ಮತ್ತು ಮೋಹನ್‌ ಚೌಟ ಮಧ್ಯ ಇವರ ಮುತುವರ್ಜಿಯಿಂದ ಮುಂಬೈಯ ಉದ್ಯಮಿಗಳು, ಜನಪ್ರತಿನಿಧಿಗಳ ಹಾಗೂ ದಾನಿಗಳ ನೆರವಿನಿಂದ ಶಾಲೆಯ ಚಿತ್ರಣವೇ ಬದಲಾಗಿದೆ ಎಂದರು.

KARTET: ಟಿಇಟಿ ಪರೀಕ್ಷಾ ಫಲಿತಾಂಶ ಪ್ರಕಟ: ಆನ್‌ಲೈನ್‌ನಲ್ಲೇ ಅರ್ಹತಾ ಅಂಕಪಟ್ಟಿ ಲಭ್ಯ

ವಿದ್ಯಾನಿಧಿ ಎಜುಕೇಶನ್‌ ಟ್ರಸ್ಟ್‌ ಗೌರವಾಧ್ಯಕ್ಷ ಕರುಣಾಕರ ಶೆಟ್ಟಿಮಧ್ಯಗುತ್ತು ಮಾತನಾಡಿ, ಮಧ್ಯ ಗ್ರಾಮದ ಅಭಿವೃದ್ಧಿಗೂ ವಿವಿಧ ಯೋಜನೆ ರೂಪಿಸಲಾಗಿದೆ. ಮುಂದಿನ ವರ್ಷ ಶಾಲೆಯ ವಿದ್ಯಾರ್ಥಿಗಳ ಕಲಿಕೆಗಾಗಿ ಹೆಚ್ಚುವರಿ ಕಂಪ್ಯೂಟರ್‌ ಒದಗಿಸಲಾಗುವುದು ಎಂದರು.

ಡಿಗ್ರಿ, ಪೀಜಿ: ಕನ್ನಡ, ಇಂಗ್ಲಿಷ್‌ ಬೆರೆಸಿ ಪರೀಕ್ಷೆ ಬರೆಯಲು ಅಸ್ತು!

ವಿದ್ಯಾನಿಧಿ ಟ್ರಸ್ಟ್‌ ಉಪಾಧ್ಯಕ್ಷ ಕೃಷ್ಣಮೂರ್ತಿ ಭಟ್‌, ಕೋಶಾಧಿಕಾರಿ ಪ್ರಕಾಶ್‌ ಶೆಟ್ಟಿ, ಸದಸ್ಯ ವಿಠಲ ಶೆಟ್ಟಿಎಲ್ಲದಡಿ, ವಜ್ರಾಕ್ಷಿ ಪಿ. ಶೆಟ್ಟಿ, ಹರಿಪ್ರಸಾದ್‌ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಭಗವಾನ್‌, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗೀಶ್‌ ದೇವಾಡಿಗ ಇದ್ದರು.

click me!