ವಿದ್ಯಾರ್ಥಿಗೆ ಲಂಚದ ಬೇಡಿಕೆ ಇಟ್ಟ ಆರೋಪ ಹಿನ್ನೆಲೆ ಕರ್ನಾಟಕ ರಾಜ್ಯ ಕಾನೂನು ವಿವಿಯ ಚೇಂಬರ್‌ಗೆ ನುಗ್ಗಿದ ಎಬಿವಿಪಿ ಕಾರ್ಯಕರ್ತರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿ (ನ.7) ವಿದ್ಯಾರ್ಥಿಗೆ ಲಂಚದ ಬೇಡಿಕೆ ಇಟ್ಟ ಆರೋಪ ಹಿನ್ನೆಲೆ ಕರ್ನಾಟಕ ರಾಜ್ಯ ಕಾನೂನು ವಿವಿಯ ಚೇಂಬರ್‌ಗೆ ನುಗ್ಗಿದ ಎಬಿವಿಪಿ ಕಾರ್ಯಕರ್ತರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಕೆಎಸ್‌ಎಲ್‌ಯು ಸಿಬ್ಬಂದಿ ನಯೀಮ್ ಎಂಬಾತ ವಿದ್ಯಾರ್ಥಿಗೆ 6 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪ. ನಯೀಂ ಚೇಂಬರ್ ಗೆ ನುಗ್ಗಿದ ಎಬಿವಿಪಿ ಕಾರ್ಯಕರ್ತರು. ಲಂಚದ ಬೇಡಿಕೆಯಿಟ್ಟ ಆಡಿಯೋ ಸಂಭಾಷಣೆ ಕೇಳಿಸಿ ನಯೀಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾರ್ಯಕರ್ತರು.
undefined
ದೆಹಲಿ ಯೂನಿವರ್ಸಿಟಿ ವಿದ್ಯಾರ್ಥಿ ಚುನಾವಣೆಯಲ್ಲಿ ಎಬಿವಿಪಿ ಜಯಭೇರಿ, 4ರಲ್ಲಿ 3 ಸ್ಥಾನ ಗೆಲುವು
ಕಚೇರಿಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಎಸೆದು ಪ್ರತಿಭಟನೆ ನಡೆಸಲಾಯಿತು. ಸೂಕ್ತ ಕ್ರಮ ಕೈಗೊಳ್ಳುವಂತೆ ಕುಲಪತಿ ಬಸವರಾಜು ಅವರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು. ಕುಲಸಚಿವರಿಂದ ಸೂಕ್ತ ಕ್ರಮದ ಭರವಸೆ ಸಿಕ್ಕ ನಂತರ ಪ್ರತಿಭಟನೆ ವಾಪಸ್ ಪಡೆದ ಎಬಿವಿಪಿ ಕಾರ್ಯಕರ್ತರು.
ಕಾನೂನು ವಿವಿ ಯುವ ಜನೋತ್ಸವಕ್ಕೆ ಚೇತನ್ ಅಹಿಂಸಾ ಅತಿಥಿ, ABVP ಕಿಡಿಕಿಡಿ
ತುಮಕೂರು ವಿದ್ಯಾರ್ಥಿಗೆ ವರ್ಗಾವಣೆಗೆ ಅನುಮತಿ ನೀಡಲು ಹಣದ ಬೇಡಿಕೆ ಇಟ್ಟಿದ್ದ ಸಿಬ್ಬಂದಿ ನಯೀಂ. ಹಣಕ್ಕೆ ಬೇಡಿಕೆಯಿಟ್ಟ ಸಂಭಾಷಣೆ ರೆಕಾರ್ಡ್ ಮಾಡಿಕೊಂಡಿದ್ದ ವಿದ್ಯಾರ್ಥಿ. ಎಬಿವಿಪಿ ಗಮನಕ್ಕೆ ತಂದ ವಿದ್ಯಾರ್ಥಿ. ಇದೀಗ ಲಂಚದ ಆರೋಪ ಹೊತ್ತಿರುವ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುಂತೆ ಮನವಿ ನೀಡಿರುವ ಕಾರ್ಯಕರ್ತರು. ಒಂದು ವೇಳೆ ಯಾವುದೇ ಕ್ರಮ ತೆಗೆದುಕಕೊಳ್ಳದಿದ್ದಲ್ಲಿ ಹೋರಾಟ ಮುಂದುವರಿಯುತ್ತದೆ ಎಂದು ಎಚ್ಚರಿಸಿರುವ ಎಬಿವಿಪಿ ಕಾರ್ಯಕರ್ತರು.