ಸರ್ಕಾರಿ ಶಾಲೆಗಳಲ್ಲಿ ಎರಡಂಕಿ ದಾಟದ ಮಕ್ಕಳ ಸಂಖ್ಯೆ: ವರ್ಷದಿಂದ ವರ್ಷಕ್ಕೆ ಇಳಿಕೆ..!

By Kannadaprabha News  |  First Published Sep 17, 2022, 10:41 AM IST

ಚಿಕ್ಕಬಳ್ಳಾಪುರ ಜಿಲ್ಲೆಯ 190 ಶಾಲೆಗಳಲ್ಲಿ ಎರಡಂಕಿ ದಾಟದ ಮಕ್ಕಳ ಸಂಖ್ಯೆ, ವರ್ಷದಿಂದ ವರ್ಷಕ್ಕೆ ಇಳಿಕೆ


ಕಾಗತಿ ನಾಗರಾಜಪ್ಪ

ಚಿಕ್ಕಬಳ್ಳಾಪುರ(ಸೆ.17):  ಅಗತ್ಯ ಮೂಲ ಸೌಕರ್ಯ, ಶಿಕ್ಷಕರ ಕೊರತೆಯಿಂದ ಸೊರಗುತ್ತಿರುವ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಕುಸಿಯುತ್ತಿದ್ದು 2022-23ನೇ ಸಾಲಿನಲ್ಲಿ ಬರೋಬ್ಬರಿ 190 ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಎರಡಂಕಿ ದಾಟದಿರುವುದು ಕಂಡು ಬಂದಿದೆ. ಹೌದು, ಜಿಲ್ಲೆಯಲ್ಲಿ 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ದಾಖಲಾತಿ ಪೂರ್ಣಗೊಂಡಿದ್ದು ಆ ಪೈಕಿ ಜಿಲ್ಲೆಯಲ್ಲಿನ ಸರ್ಕಾರಿ ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳಲ್ಲಿನ ಒಟ್ಟು 190 ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 10 ರೊಳಗೆ ದಾಖಲಾಗಿರುವ ವಿವರಗಳು ಕನ್ನಡಪ್ರಭಗೆ ಲಭ್ಯವಾಗಿದೆ.

Tap to resize

Latest Videos

ಪ್ರಾಥಮಿಕ ಶಾಲೆಗಳಲ್ಲಿ ದಾಖಲಾತಿ ಕುಸಿತ

ಮೊದಲೇ ಜಿಲ್ಲೆಯಲ್ಲಿ ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಗಣನೀಯ ಪ್ರಮಾಣದಲ್ಲಿ ಮಕ್ಕಳ ಸಂಖ್ಯೆ ಕುಸಿಯುತ್ತಿರುವ ಬೆನ್ನಲೇ ಜಿಲ್ಲೆಯಲ್ಲಿ ಮಕ್ಕಳ ಸಂಖ್ಯೆ ಎರಡಂಕಿ ದಾಟದ ಶಾಲೆಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ಕಂಡು ಬಂದಿರುವುದು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ. ಜಿಲ್ಲೆಯಲ್ಲಿ 1500 ಕ್ಕೂ ಹೆಚ್ಚು ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿದ್ದರೆ 111 ಸರ್ಕಾರಿ ಪ್ರೌಢ ಶಾಲೆಗಳು ಇವೆ. ಆ ಪೈಕಿ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ತುಸು ಸಮಾಧಾನ ಇದ್ದರೂ ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿನ ಮಕ್ಕಳ ದಾಖಲಾತಿ ಪ್ರಮಾಣ ತೀವ್ರ ಕಳವಳ ಮೂಡಿಸುವ ರೀತಿಯಲ್ಲಿ ಮಕ್ಕಳು ದಾಖಲಾಗುತ್ತಿರುವುದು ಕಂಡು ಬಂದಿದೆ.

ವಿಷ್ಣುಗುಪ್ತ ವಿವಿಯಲ್ಲಿ ಅಹಿಚ್ಛತ್ರ ಕ್ಯಾಂಪಸ್‌ ಶೀಘ್ರ: ರಾಘವೇಶ್ವರ ಶ್ರೀ

ಚಿಂತಾಮಣಿ ಪ್ರಥಮ:

ಇನ್ನೂ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಎರಡಂಕಿ ದಾಟದ ಹೆಚ್ಚು ಶಾಲೆಗಳ ಪೈಕಿ ಜಿಲ್ಲೆಯ ಚಿಂತಾಮಣಿ ತಾಲೂಕು ಮೊದಲ ಸ್ಥಾನದಲ್ಲಿದ್ದರೆ ನಂತರ ಸ್ಥಾನದಲ್ಲಿ ಸಮನವಾಗಿ ಶಿಡ್ಲಘಟ್ಟಹಾಗೂ ಬಾಗೇಪಲ್ಲಿ, ಬಳಿಕ ಗೌರಿಬಿದನೂರು ತಾಲೂಕು ಇದೆ. ಕೊನೆ ಸ್ಥಾನದಲ್ಲಿ ಚಿಕ್ಕಬಳ್ಳಾಪುರ ಹಾಗೂ ಗುಡಿಬಂಡೆ ತಾಲೂಕುಗಳಿವೆ.

ಎರಡಂಕಿ ದಾಟದ ಶಾಲೆಗಳು

ಜಿಲ್ಲೆಯಲ್ಲಿ ಎರಡಂಕಿ ಮಕ್ಕಳ ಸಂಖ್ಯೆ ದಾಟದ ಶಾಲೆಗಳ ಪೈಕಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಸಂಖ್ಯೆ 190 ಇದ್ದು ಆ ಪೈಕಿ 3 ಶಾಲೆಗಳಲ್ಲಿ ತಲಾ 1 ಮಗು ಇದ್ದರೆ, 5 ಶಾಲೆಗಳಲ್ಲಿ ತಲಾ 2 ಮಕ್ಕಳು ಇದ್ದಾರೆ. ಅದೇ ರೀತಿ 11 ಶಾಲೆಗಳಲ್ಲಿ ತಲಾ 3 ಮಕ್ಕಳು ಇದ್ದಾರೆ. 16 ಶಾಲೆಗಳಲ್ಲಿ ತಲಾ 4 ಮಕ್ಕಳು, 32 ಶಾಲೆಗಳಲ್ಲಿ ತಲಾ 5 ಮಕ್ಕಳು. 29 ಶಾಲೆಗಳಲ್ಲಿ ತಲಾ 6 ವಿದ್ಯಾರ್ಥಿಗಳು, 28 ಶಾಲೆಗಳಲ್ಲಿ ತಲಾ 7 ವಿದ್ಯಾರ್ಥಿಗಳು,. 32 ಶಾಲೆಗಳಲ್ಲಿ ತಲಾ 8 ಮಕ್ಕಳು ಹಾಗೂ 34 ಶಾಲೆಗಳಲ್ಲಿ ತಲಾ 9 ಮಕ್ಕಳು ಮಾತ್ರ 2022-23ನೇ ಸಾಲಿಗೆ ದಾಖಲಾಗಿರುವ ವಿವರಗಳು ಪತ್ರಿಕೆಗೆ ಲಭ್ಯವಾಗಿವೆ.
 

click me!