ಪಿಯು ಪರೀಕ್ಷೆ ಮುಗಿಯದ ಗೊಂದಲ, ಒಂದು ನಿರ್ಧಾರಕ್ಕೆ ಬನ್ನಿ

By Suvarna NewsFirst Published May 2, 2021, 10:00 PM IST
Highlights

ಕೊರೊನಾ ಸೋಂಕು ಹೆಚ್ಚಳವಾಗುತ್ತಲೆ ಇದೆ/ ದ್ವಿತೀಯ ಪಿಯು ಪರೀಕ್ಷೆ ನಿಗದಿತ ದಿನಾಂಕದಿಂದಲೇ ಆರಂಭವಾಗುತ್ತಾ? ಇಲ್ವಾ ?/ ಗೊಂದಲದಲ್ಲಿ ವಿದ್ಯಾರ್ಥಿಗಳು , ಪೋಷಕರು ಹಾಗು ಶಿಕ್ಷಣ ಸಂಸ್ಥೆಗಳು/ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಎರಡನೇ ಅಲೆ ಹೆಚ್ಚಳ

ಬೆಂಗಳೂರು(ಮೇ 02)  ದ್ವಿತೀಯ ಪಿಯು ಪರೀಕ್ಷೆ ನಿಗದಿತ ದಿನಾಂಕದಿಂದಲೇ ಆರಂಭವಾಗುತ್ತಾ? ಇಲ್ವಾ ? ಎನ್ನುವ ಗೊಂದಲ ಶುರುವಾಗಿದೆ.  ಗೊಂದಲದಲ್ಲಿ ವಿದ್ಯಾರ್ಥಿಗಳು , ಪೊಷಕರು ಹಾಗು ಶಿಕ್ಷಣ ಸಂಸ್ಥೆಗಳು ಇವೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಎರಡನೇ ಅಲೆ ಹೆಚ್ಚಳವಾಗುತ್ತಿದೆ.  ಈಗಾಗಲೇ ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆ ಮುಂದೂಡಲಾಗಿದೆ. ಮೇ 24 ರಿಂದ ಜೂನ್ 16 ರವರೆಗೆ  ದ್ವಿತೀಯ ಪಿಯುಸಿ ಪರೀಕ್ಷೆ ನಿಗದಿಯಾಗಿದೆ. ಆದ್ರೆ ಒಂದಡೆ ಕೊರೊನಾ ನಿರಂತರವಾಗಿ ಹೆಚ್ಚಳವಾಗುತ್ತಿದೆ.  ಸದ್ಯದ ಮಟ್ಟಿಗೆ ಸರ್ಕಾರ ಯಾವುದೇ ಸ್ಪಷ್ಟ ನಿಲುವು ತೆಗೆದುಕೊಂಡಿಲ್ಲ.

ಸರ್ಕಾರಿ ಉದ್ಯೋಗ ಬೇಕು ಎನ್ನುವರಿಗೆ ಫ್ರೀ ಕೋಚಿಂಗ್ ಕೊಡ್ತಾರೆ

ಹೀಗಾಗಿ ವಿಧ್ಯಾರ್ಥಿ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಗೊಂದಲ ಉಂಟಾಗಿದೆ. ಪಿಯು ಪರೀಕ್ಷೆಯ ವಿಚಾರದಲ್ಲಿ ಶಿಕ್ಷಣ ಇಲಾಖೆ ಸ್ಪಷ್ಟ ನಿಲುವಿಗೆ ಬರುವಂತೆ ಒತ್ತಾಯ ಮಾಡಲಾಗಿದೆ. ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಅಧ್ಯಕ್ಷ ಲೊಕೇಶ್ ತಾಳಿಕಟ್ಟೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. 

"

 

click me!