ಕೋವಿಡ್‌ ಕಾರ್ಯ : ಶಿಕ್ಷಕರಿಗೆ ಗಳಿಕೆ ರಜೆ

By Kannadaprabha NewsFirst Published Oct 14, 2020, 7:15 AM IST
Highlights

ಕೊರೋನಾ ಕಾರ್ಯದಲ್ಲಿ ನಿರತರಾಗಿರುವ ಶಿಕ್ಷಕರಿಗೆ ಗಳಿಕೆ ರಜೆ ವಿಚಾರವೀಗ ಚರ್ಚೆಗೆ ಬಂದಿದೆ.

ಬೆಂಗಳೂರು (ಅ.14): ಕೋವಿಡ್‌ ನಿಯಂತ್ರಣ ಕಾರ್ಯಕ್ಕೆ ನಿಯೋಜನೆಗೊಂಡಿರುವ ಶಿಕ್ಷಕರಿಗೆ ‘ಮಧ್ಯಂತರ ರಜೆ’ಯನ್ನು ನೀಡಲಾಗದ ಪಕ್ಷದಲ್ಲಿ ಆ ರಜೆ ದಿನಗಳಿಗೆ ಪರ್ಯಾಯವಾಗಿ ಗಳಿಕೆ ರಜೆ ಮಂಜೂರು ಮಾಡಿಕೊಡಬೇಕೆಂದು ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘ ಸರ್ಕಾರವನ್ನು ಒತ್ತಾಯಿಸಿದೆ.

ಆರಂಭದಿಂದಲೂ ಕೋವಿಡ್‌ ಕಾರ್ಯದಲ್ಲಿ ತೊಡಗಿರುವ ಶಿಕ್ಷಕರಿಗೆ ಭಾನುವಾರ ರಜೆ ಹಾಗೂ ಇತರೆ ಸಾರ್ವತ್ರಿಕ ರಜೆಗಳೂ ಸಿಗುತ್ತಿಲ್ಲ. ಕಳೆದ ಕೆಲ ತಿಂಗಳಿಂದ ರಜೆ ಇಲ್ಲದೆ ಅಂತಹ ಶಿಕ್ಷಕರು ಒತ್ತಡದಲ್ಲಿ ಸಿಲುಕಿದ್ದಾರೆ. 

ಕೊರೋನಾ ನಿಯಂತ್ರಣದಲ್ಲಿ ಆರೋಗ್ಯ ಸೇತು ಆ್ಯಪ್ ಪ್ರಮಖ ಪಾತ್ರ; WHO ಮೆಚ್ಚುಗೆ!

ಹಾಗಾಗಿ ಅವರಿಗೂ ಅ.12ರಿಂದ 30ರ ವರೆಗಿನ ಮಧ್ಯಂತರ ರಜೆ ನೀಡಬೇಕು. ಕೋವಿಡ್‌ ಕಾರ್ಯದ ಹಿನ್ನೆಲೆಯಲ್ಲಿ ನೀಡಲಾಗದಿದ್ದಲ್ಲಿ ಮಧ್ಯಂತರ ರಜೆ ದಿನಗಳನ್ನು ಗಳಿಕೆ ರಜೆಯಾಗಿ ಮಂಜೂರು ಮಾಡಿ ಬೇರೆ ದಿನಗಳಲ್ಲಿ ಅವರು ರಜೆ ಪಡೆಯಲು ಅವಕಾಶ ಮಾಡಿಕೊಡಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಇದಕ್ಕೆ ಸಮ್ಮತಿ ನೀಡಬೇಕು ಎಂದು ಸಂಘದ ಅಧ್ಯಕ್ಷ ಎಚ್‌.ಕೆ.ಮಂಜುನಾಥ್‌ ಮನವಿ ಮಾಡಿದ್ದಾರೆ.

click me!