ಬಾಗಲಕೋಟೆ: ಕಲಾದಗಿಯಲ್ಲಿ ಆಧುನಿಕ ಪದವಿ ಕಾಲೇಜು ನಿರ್ಮಾಣ, ಸಚಿವ ನಿರಾಣಿ

By Kannadaprabha NewsFirst Published Feb 26, 2023, 8:30 PM IST
Highlights

ಬೀಳಗಿ ಕ್ಷೇತ್ರದಲ್ಲಿ ನೀರಾವರಿ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಮತಕ್ಷೇತ್ರದ ಶಾಲೆಗಳನ್ನು ಬಾಗಿಲು ಮುಚ್ಚದ ಶಾಲೆಗಳನ್ನಾಗಿ ಮಾಡಿ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಸ್ಮಾರ್ಟ್‌ ಕ್ಲಾಸ್‌ಗಳಿಗೆ .3 ಕೋಟಿ ವೆಚ್ಚ ಮಾಡಿ ಶಿಕ್ಷಣ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ: ಸಚಿವ ಮುರುಗೇಶ ನಿರಾಣಿ 

ಬಾಗಲಕೋಟೆ(ಫೆ.26): ಬ್ರಿಟಿಷ ಕಾಲದಲ್ಲಿ ಜಿಲ್ಲಾ ಕೇಂದ್ರವಾಗಿದ್ದ ಕಲಾದಗಿ ಅಂದಿನ ಬ್ರಿಟಿಷರು ನಿರ್ಮಿಸಿದ ಪರಿವೀಕ್ಷಣಾ ಮಂದಿರ (ಐಬಿ) ಆವರಣ ಅಳತೆ ಮೀರಿದ್ದಾಗಿದ್ದು, ಆ ಆವರಣದಲ್ಲಿ ಉತ್ತಮ ಗುಣಮಟ್ಟದ ಆಧುನಿಕ ತಂತ್ರಜ್ಞಾನದ ಪದವಿ ಮಹಾವಿದ್ಯಾಲಯ ನಿರ್ಮಿಸಲಾಗುತ್ತಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು.

ಕಲಾದಗಿ ಗ್ರಾಮದಲ್ಲಿ ಹಮ್ಮಿಕೊಂಡ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಲಮಟ್ಟಿ ಹಿನ್ನೀರಿನಿಂದ ಮುಳುಗಡೆಗೊಂಡು ಸಂಕಷ್ಟದಲ್ಲಿದ್ದ ಕಲಾದಗಿ ಗ್ರಾಮದ ಜನರ ಅನುಕೂಲಕ್ಕಾಗಿ ಕಲಾದಗಿ-ಕಾತರಕಿ ಮಧ್ಯ .28 ಕೋಟಿ ವೆಚ್ಚದಲ್ಲಿ ಬ್ರಿಡ್ಜ್‌ ಕಂ ಬ್ಯಾರೇಜ್‌ ಹಾಗೂ ಸಂಶಿ ಗ್ರಾಮಕ್ಕೆ .5 ಕೋಟಿ ವೆಚ್ಚದಲ್ಲಿ ಬ್ಯಾರೇಜ್‌ ನಿರ್ಮಿಸಲಾಗುತ್ತಿದೆ. ಕಲಾದಗಿ ಪುನರ್ವಸತಿಗಾಗಿ ಈಗಾಗಲೇ 400 ಎಕರೆ ಭೂಮಿ ಗುರುತಿಸಲಾಗಿದ್ದು, ಅದರಲ್ಲಿ 250 ಎಕರೆ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.

SC ST Quota ಹೆಚ್ಚಳ, ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ

ಬೀಳಗಿ ಕ್ಷೇತ್ರದಲ್ಲಿ ನೀರಾವರಿ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಮತಕ್ಷೇತ್ರದ ಶಾಲೆಗಳನ್ನು ಬಾಗಿಲು ಮುಚ್ಚದ ಶಾಲೆಗಳನ್ನಾಗಿ ಮಾಡಿ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಸ್ಮಾರ್ಟ್‌ ಕ್ಲಾಸ್‌ಗಳಿಗೆ .3 ಕೋಟಿ ವೆಚ್ಚ ಮಾಡಿ ಶಿಕ್ಷಣ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಈಗಾಗಲೇ ಟಾಪ್‌ 10ನಲ್ಲಿ ಬೀಳಗಿ ವಿದ್ಯಾರ್ಥಿಗಳು ಹೆಸರು ಮಾಡಿದ್ದಾರೆ. ಈ ವರ್ಷ ವಿದ್ಯಾರ್ಥಿಗಳ ರಾರ‍ಯಂಕ್‌ ಸಂಖ್ಯೆ ಹೆಚ್ಚಲಿದೆ ಎಂದರು.

ಜಿಪಂಗೆ ವಿದ್ಯುತ್‌ ಸ್ಟೇಷನ್‌:

ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ .320 ಕೋಟಿ ವೆಚ್ಚದಲ್ಲಿ 10 ಕೆ.ವಿ ಸಾಮರ್ಥ್ಯದ ವಿದ್ಯುತ್‌ ಸ್ಟೇಷನ್‌ ಸ್ಥಾಪಿಸಲಾಗುತ್ತಿದೆ. ಪ್ರತಿ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ .20 ಕೋಟಿಗಳಂತೆ ವಿದ್ಯುತ್‌ ಸ್ಟೇಷನ್‌Üಗಳನ್ನು ಸ್ಥಾಪಿಸಲಾಗಿದೆ. ಕಾಡರಕೊಪ್ಪ ಗ್ರಾಮದಲ್ಲಿರುವ ವಿದ್ಯುತ್‌ ಸ್ಟೇಷನ್‌ ಎರಡು-ಮೂರು ದಿನಗಳಲ್ಲಿ ಉದ್ಘಾಟನೆಗೊಳ್ಳಲಿದೆ. ರೈತರಿಗೆ ಗುಣಮಟ್ಟದ ವಿದ್ಯುತ್‌ ಕೊಡುವುದರ ಜೊತೆಗೆ ಟಿಸಿ ಸುಡುವ ಹಾಗೂ ಮೋಟಾರ್‌ ಸುಡುವ ಸಮಸ್ಯೆಗಳು ಬಂದೊದಗಲಾರವು ಎಂದರು.

ಹೆರಕಲ್‌ ಏತ ನೀರಾವರಿ ಯೋಜನೆ ಅಭಿವೃದ್ಧಿಗಾಗಿ .100 ಕೋಟಿ ಖರ್ಚು ಮಾಡುತ್ತಿರುವುದರಿಂದ ಆಲಮಟ್ಟಿ ಜಲಾಶಯದ ನೀರಿನ ಮಟ್ಟಹೆಚ್ಚಾದರೂ ತೊಂದರೆಯಾಗದಂತೆ ಕ್ರಮವಹಿಸಲಾಗಿದೆ. .40 ಕೋಟಿ ವೆಚ್ಚದಲ್ಲಿ ಕೆ.ಆರ್‌.ಎಸ್‌ ಮಾದರಿಯಲ್ಲಿ ಉದ್ಯಾನವನ ನಿರ್ಮಾಣ, ಚಿಕ್ಕ ಸಂಗಮದಲ್ಲಿ ಪಕ್ಷಿದಾಮಕ್ಕೆ .25 ಕೋಟಿ ಹಾಗೂ ಆಲಮಟ್ಟಿಹಿನ್ನೀರಿನಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶಿಸುವ ಹೆರಕಲ್‌ನಿಂದ ಆಲಮಟ್ಟಿವರೆಗೆ ಗೋವಾ ಮಾದರಿಯ ಜಲ ಪ್ರವಾಸಕ್ಕೆ .15 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದರು.

1ನೇ ಕ್ಲಾಸ್‌ ಪ್ರವೇಶಕ್ಕೆ 6 ವರ್ಷ: ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚನೆ

ನನ್ನ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ

ಇತ್ತೀಚೆಗೆ ಕಲಾದಗಿ ಗ್ರಾಮದಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕರು ಸಚಿವ ನಿರಾಣಿ ವಿರುದ್ಧ ಮಾತನಾಡಿರುವುದಕ್ಕೆ ಸರ್ಕಾರಿ ಕಾರ್ಯಕ್ರಮವಾದ ಹಳ್ಳಿ ನಡೆ ಕಾರ್ಯಕ್ರಮದಲ್ಲಿಯೇ ವಿರೋಧಿಗಳಿಗೆ ಭರ್ಜರಿ ಎಚ್ಚರಿಕೆ ನೀಡಿದ ಸಚಿವ ಮುರಗೇಶ ನಿರಾಣಿ ನನ್ನ ತಂಟೆಗೆ ಬಂದರೆ ನಾನು ಸುಮ್ಮನಿರುವುದಿಲ್ಲ ಎಂದು ಗುಡುಗಿದರು.

ಸರಿಯಾಗಿ ತಮ್ಮ ಒಡೆತನದ ಸಕ್ಕರೆ ಕಾರ್ಖಾನೆಯಿಂದ ನಾನು ನೀಡಿದಷ್ಟು ಬಿಲ್‌ ಅನ್ನು ನೀಡುವುದಿಲ್ಲ. ಆದರೆ, ಅವರ ನಾಯಕರಿಗೆ ಚೀಟಿಕೊಟ್ಟು ಮಾತನಾಡಲು ಹಚ್ಚುತ್ತಾರೆ. ಇದಕ್ಕೆಲ್ಲ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಯಾವ ರೈತನ ಹೆಸರಿನಲ್ಲಿಯೂ ಸಾಲ ಮಾಡಿ ಕಾರ್ಖಾನೆ ಕಟ್ಟಿಲ್ಲ. 21 ಕಾರ್ಖಾನೆಗಳನ್ನು ಕಟ್ಟಿ72 ಸಾವಿರ ಜನರಿಗೆ ಉದ್ಯೋಗ ನೀಡಿದ್ದೇನೆ. ನನ್ನ ತಂಟೆಗೆ ಬರಬೇಡಿ. ಚುನಾವಣೆ ಎದುರಿಸೋಣ. ಜನ ಯಾರಿಗೆ ಆಶೀರ್ವಾದ ಮಾಡುತ್ತಾರೆ ಮಾಡಲಿ ಎಂದು ಸವಾಲು ಹಾಕಿದರು.

click me!