* ಭಜರಂಗದಳದಿಂದ ಶಾಲೆಯಲ್ಲಿ ಶಸ್ತ್ರಾಸ್ತ್ರ ತರಬೇತಿ
* ವಿದ್ಯಾರ್ಥಿಗಳಿಗೆ ಪೆನ್, ಪುಸ್ತಕ ಕೊಡುವ ಬದಲು ರೈಫಲ್ ಟ್ರೈನಿಂಗ್
* ವಿಪಕ್ಷ ಉಪನಾಯಕ ಯು.ಟಿ.ಖಾದರ್ ಆಕ್ರೋಶ
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು, (ಮೇ.17): ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪೆನ್, ಪುಸ್ತಕ ಕೊಡುವ ಬದಲು ರೈಫಲ್ ಟ್ರೈನಿಂಗ್ ಮಾಡಲಾಗಿದೆ. ಶಾಸಕರೇ ಮುಂದೆ ನಿಂತು ಮಾಡಿರೋದು ಸರ್ಕಾರದ ತಾಲಿಬಾನ್ ಸಂಸ್ಕೃತಿ ತೋರಿಸ್ತಿದೆ. ಸರ್ಕಾರ ಗೂಂಡಾಗಿರಿ ಮಾಡಲು ಹೊರಗುತ್ತಿಗೆ ಕೊಟ್ಟಂತಿದೆ ಎಂದು ಮಂಗಳೂರಿನಲ್ಲಿ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಡಗಿನ ಶಾಲೆಯಲ್ಲಿ ಬಜರಂಗದಳದ ಶಸ್ತ್ರಾಸ್ತ್ರ ತರಬೇತಿ ಬಗ್ಗೆ ಮಾತನಾಡಿದ ಅವರು, ಎನ್ ಸಿಸಿಯಂಥ ಸಂಸ್ಥೆಗಳು ಅಧಿಕೃತ, ಅವರು ದೇಶ ಸೇವೆಗಾಗಿ ತರಬೇತಿ ಕೊಡ್ತಾರೆ. ಆದ್ರೆ ಕೂಡಗಿನಲ್ಲಿ ಮಾಡಿದವರು ಯಾರು ಅನ್ನೋದು ಗೊತ್ತಿದೆ. ಇವರ ಉದ್ದೇಶ ಏನು? ಅನುಮತಿ ಯಾರು ಕೊಟ್ಟಿದ್ದು ಎಂಬುದರ ತನಿಖೆ ಆಗಲಿ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಒಂದೇ ಒಂದು ಹೈಸ್ಕೂಲ್ ಪ್ರಾರಂಭಿಸಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಥಮಿಕ ಬಿಡಿ ಅಂಗನವಾಡಿ ಕೂಡ ಆರಂಭಿಸಿಲ್ಲ ಎಂದು ಕಿಡಿಕಾರಿದರು.
ವಿದ್ಯಾಸಂಸ್ಥೆಗಳಲ್ಲಿ ಶಸ್ತ್ರಾಸ್ತ್ರ ತರಬೇತಿಗೆ ಅವಕಾಶ ಕೊಟ್ಟಿರೋದು ಸರ್ಕಾರದ ನಿರ್ಲಕ್ಷ್ಯ. ಗೃಹ ಸಚಿವರು ಮತ್ತು ಶಿಕ್ಷಣ ಸಚಿವರು ಈ ಬಗ್ಗೆ ಜನರಿಗೆ ಉತ್ತರಿಸಲಿ.ಈ ವಿಚಾರದಲ್ಲಿ ಮುಖ್ಯಮಂತ್ರಿ ಕೂಡ ಮೌನವಾಗಿರೋದು ಸರಿಯಲ್ಲ. ಮಕ್ಕಳ ಕೈಗೆ ಪುಸ್ತಕ, ಪೆನ್ ಕೊಡುವ ಬದಲು ಆಯುಧ ಕೊಡ್ತಾರಾ? ಗನ್ ಹಿಡಿದುಕೊಂಡು ಸುತ್ತಾಡಲಿಕ್ಕೆ ಇದೇನು ಉತ್ತರ ಪ್ರದೇಶವಾ? ಕಾಂಗ್ರೆಸ್ ಸೇವಾದಳ ಅಥವಾ ಯೂತ್ ಕಾಂಗ್ರೆಸ್ ಮಾಡಿದ್ರೆ ಏನಾಗ್ತಿತ್ತು? ದೇಶದ ಭವಿಷ್ಯ ಮಕ್ಕಳು, ಮಕ್ಕಳಲ್ಲಿ ದ್ವೇಷದ ವಾತಾವರಣ ಬೇಡ. ಹೀಗಾಗಿ ದ್ವೇಷ ಹುಟ್ಟುವ ವಿಚಾರಗಳು ಮಕ್ಕಳಲ್ಲಿ ಬೇಡ ಎಂದರು.
Kodagu ರಾಷ್ಟ್ರಮಟ್ಟದ ಸುದ್ದಿಯಾಯ್ತು ಭಜರಂಗದಳದಿಂದ ಶಾಲೆಯಲ್ಲಿ ಶಸ್ತ್ರಾಸ್ತ್ರ ತರಬೇತಿ
ಮಳಲಿ ಮಸೀದಿ ವಿವಾದವನ್ನು ಡಿಸಿ ತೀರ್ಮಾನಿಸಲಿ
ಮಂಗಳೂರಿನ ಮಳಲಿ ಮಸೀದಿ ವಿಚಾರದಲ್ಲಿ ವಿಎಚ್ ಪಿ ಅಷ್ಟಮಂಗಳ ಪ್ರಶ್ನೆ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿಕೆ ನೀಡಿದ್ದಾರೆ. ಕೆಲವರಿಗೆ ಕೆಲವು ಸಂಶಯ ಬರುತ್ತದೆ, ಆದರೆ ಇದೊಂದು ಜಾಗದ ವಿವಾದ. ದಾಖಲೆ ಜಿಲ್ಲಾಧಿಕಾರಿ ಬಳಿ ಇದೆ, ಎರಡೂ ಕಡೆಯವರು ಡಿಸಿಗೆ ಕೊಟ್ಟಿದ್ದಾರೆ. 400-500 ವರ್ಷದಿಂದ ಇಲ್ಲಿ ಮಸೀದಿ ಇರೋದು ಊರಿನವರಿಗೆ ಗೊತ್ತಿದೆ. ಅದು ಮಸೀದಿ ಅನ್ನೋದು ಊರಿನವರಿಗೆ ಗೊತ್ತಿದೆ, ಆದರೆ ಹೊರಗಿನವರಿಗೆ ಅದರಲ್ಲಿ ಸಂಶಯ. ಸಂಶಯ ಬಂದಾಗ ಅವರು ಡಿಸಿಗೆ ಈ ಬಗ್ಗೆ ಅರ್ಜಿ ಕೊಟ್ಟಿದ್ದಾರೆ. ಈಗ ಡಿಸಿ ಅದರ ದಾಖಲೆ ನೋಡಿ ನಿರ್ಧಾರ ಮಾಡಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಕಾರ್ಯಪ್ರವೃತ್ತರಾಗಿ ದಾಖಲೆ ನೋಡಿ ತೀರ್ಪು ಕೊಡಲಿ. ಅಸಮಾಧಾನ ಇದ್ದವರು ಬೇಕಾದ್ರೆ ಕೋರ್ಟ್ ಗೆ ಹೋಗಲಿ. ನಾಳೆ ನಿಮ್ಮ ಮನೆಯಲ್ಲಿ ನೋಡಿದ್ರೂ ಅಡಿಯಲ್ಲಿ ಹೆಣ ಸಿಗಬಹುದು. ಹಾಗಂತ ಅದು ತೀರಿ ಹೋದವನ ಜಾಗ ಅನ್ನೋದಕ್ಕೆ ಆಗುತ್ತಾ? ಹೀಗಾಗಿ ಡಿಸಿ ತಕ್ಷಣ ಈ ವಿಚಾರದಲ್ಲಿ ನ್ಯಾಯ ಕೊಡಬೇಕು. ಆದರೆ ಡಿಸಿ ಯಾಕೆ ತಡ ಮಾಡ್ತಿದಾರೆ ಗೊತ್ತಾಗ್ತಿಲ್ಲ? ಅವರಿಗೆ ಯಾರ ಒತ್ತಡ ಇದೆ. ಐಎಎಸ್ ಅಧಿಕಾರಿ ಕೊಡೋದು ಅವರಿಗೆ ಮ್ಯಾಜಿಸ್ಟ್ರೇಟ್ ಪವರ್ ಇರೋದು ಜಿಲ್ಲೆಯನ್ನ ನಿಭಾಯಿಸೋಕೆ. ದಾಖಲೆ ನೋಡಿ ಜಿಲ್ಲಾಧಿಕಾರಿ ತೀರ್ಮಾನ ಕೊಡಲಿ ಎಂದು ತಿಳಿಸಿದರು.
500 ವರ್ಷದ ಧಾರ್ಮಿಕ ಕೇಂದ್ರಕ್ಕೆ ಯಾರೋ ಒಬ್ಬರು ಕೊಡ್ತಾರೆ. ಆದರೆ ಡಿಸಿ ತೀರ್ಮಾನಿಸಲಿ, ಜಿಲ್ಲಾಧಿಕಾರಿ ತಕ್ಷಣ ಗೊಂದಲ ಮಾಡದೇ ಬಗೆಹರಿಸಲಿ. ದಾಖಲೆಯಲ್ಲಿ ಏನಿದೆ ಅದರ ಕುರಿತು ಅವರು ಆದೇಶ ಕೊಡಲಿ. ಇಡೀ ಪ್ರಕರಣದಲ್ಲಿ ಜಿಲ್ಲಾಧಿಕಾರಿ ನಿರ್ಧಾರ ಕೇಂದ್ರ ಬಿಂದು ಎಂದಿದ್ದಾರೆ.