ಚಿತ್ರಗಳು ಬರೀ ಮಾತಾಡುವುದಿಲ್ಲ, ಸತ್ಯವನ್ನೂ ಬೆತ್ತಲೆ ಮಾಡುತ್ತವೆ: ಶೆಟ್ಟರ್‌ಗೆ ಹರಿಪ್ರಸಾದ್ ಟಾಂಗ್

By Suvarna News  |  First Published May 23, 2022, 2:33 PM IST

*ಶಾಲಾ ಪಠ್ಯ ಪರಿಷ್ಕರಣೆ ಜಟಾಪಟಿ
* ಜಗದೀಶ್ ಶೆಟ್ಟರ್ ಹೇಳಿಕೆಗೆ ಹರಿಪ್ರಸಾದ್ ತಿರುಗೇಟು
* ಚಿತ್ರಗಳು ಬರೀ ಮಾತಾಡುವುದಿಲ್ಲ, ಸತ್ಯವನ್ನೂ ಬೆತ್ತಲೆ ಮಾಡುತ್ತವೆ ಎಂದು ಟಾಂಗ್


ಬೆಂಗಳೂರು, (ಮೇ. 23): ಕರ್ನಾಟಕದಲ್ಲಿ ಶಾಲಾ ಪಠ್ಯ ಪರಿಷ್ಕರಣೆಗೆ ಸಂಬಂಧಿಸಿದಂತೆ ಭಾರೀ ಪರ-ವಿರೊಧದ ಚರ್ಚೆಗಳು ನಡೆಯುತ್ತಿವೆ. ಪಠ್ಯ ಪರಿಷ್ಕರಣೆ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರ ನೇತೃತ್ವದ ತಂಡ ಕೆಲವೊಂದಿಷ್ಟು ಪಠ್ಯವನ್ನು ತೆಗೆದು ಹೊಸ ಪಠ್ಯ ಸೇರ್ಪಡೆ ಮಾಡಿದೆ. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಇದರ ಮಧ್ಯೆ ಟಿಪ್ಪು ಒಬ್ಬ ನರಭಕ್ಷಕ' ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೀಡಿರುವ ಹೇಳಿಕೆಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.

Tap to resize

Latest Videos

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಟಿಪ್ಪುವಿನ ಪೋಷಾಕು ಧರಿಸಿ ಪೋಸು ನೀಡಿದ್ದನ್ನು ಜಗದೀಶ್ ಶೆಟ್ಟರ್ ಮರೆತಿರಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಆರ್‌ಎಸ್‌ಎಸ್‌ ಕಾರ್ಯಕರ್ತ ಪಠ್ಯಪುಸ್ತಕ ತಯಾರಿ ಅಧ್ಯಕ್ಷರಾಗಿರೋದು ದುರಂತ: ವಿಶ್ವನಾಥ್‌

ಚಿತ್ರಗಳು ಬರೀ ಮಾತಾಡುವುದಿಲ್ಲ ಶೆಟ್ಟರ್ ಅವರೇ, ಸತ್ಯವನ್ನ ಬೆತ್ತಲೆ ಕೂಡ ಮಾಡುತ್ತೆ. ಕೋಮುವಾದದ ಕನ್ನಡಕ ಕಳಚಿಟ್ಟು ಓದುವುದಾದರೇ ತಾವೇ ಸಿಎಂ ಆಗಿದ್ದಾಗ ಪ್ರಕಟಿಸಿರುವ ಪುಸ್ತಕ ಕಳಿಸಿ‌ಕೊಡಬೇಕಾ? ಎಂದು ಪ್ರಶ್ನಿಸಿದ್ದಲ್ಲದೆ, ಜಗದೀಶ್ ಶೆಟ್ಟರ್ ಟಿಪ್ಪುವಿನ ವೇಷ ಧರಿಸಿದ್ದ ಫೋಟೋವನ್ನು ಕೂಡಾ ಟ್ವೀಟ್ ಮಾಡುವ ಮೂಲಕ ಟಾಂಗ್ ಕೊಟ್ಟಿದ್ದಾರೆ.

"ಟಿಪ್ಪು ಒಬ್ಬ ನರಭಕ್ಷಕ"ಎಂದು ಹೇಳಿಕೆ ನೀಡಿದ್ದಾರೆ.ಹಾಗಾದ್ರೆ ಟಿಪ್ಪುವಿನ ಪೋಷಾಕು ಧರಿಸಿ ಪೋಸು ನೀಡಿದ್ದನ್ನ ಮರೆತಿರಬೇಕು.ಚಿತ್ರಗಳು ಬರೀ ಮಾತಾಡುವುದಿಲ್ಲ ಶೆಟ್ಟರ್ ಅವರೇ,ಸತ್ಯವನ್ನ ಬೆತ್ತಲೆ ಕೂಡ ಮಾಡುತ್ತೆ.

ಕೋಮುವಾದದ ಕನ್ನಡಕ ಕಳಚಿಟ್ಟು ಓದುವುದಾದರೇ ತಾವೇ ಸಿಎಂ ಆಗಿದ್ದಾಗ ಪ್ರಕಟಿಸಿರುವ ಪುಸ್ತಕ ಕಳಿಸಿ‌ಕೊಡಬೇಕಾ? pic.twitter.com/SAgksvbyqX

— Hariprasad.B.K. (@HariprasadBK2)

ಅದರಲ್ಲೂ ಟಿಪ್ಪು ಸುಲ್ತಾನ್, ಸಮಾಜ ಸುಧಾರಕ ನಾರಾಯಣ ಗುರು ಭಗತ್ ಸಿಂಗ್ ಸೇರಿದಂತೆ ಇತರೆ ನಾಯಕರ ಪಠ್ಯವನ್ನು ತೆದುಹಾಕಿದ್ದು, ಆರ್‌ಎಸ್‌ಎಸ್‌ ಸಂಸ್ಥಾಪಕ ಹೆಗಡೆವಾರ್, ಚಕ್ರವರ್ತಿ ಸೂಲಿಬೆಲೆ, ಬನ್ನಂಜೆ ಗೋವಿಂದ್ ರಾಜ್ ಅವರ ವಿಚಾರಧಾರೆಗಳನ್ನ ಶಾಲಾ ಪಠ್ಯದಲ್ಲಿ ಸೇರಿಸಲಾಗಿದೆ.ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಬ್ರಾಹ್ಮಣ್ಯ ಪಠ್ಯ ಬೇಡ ಎನ್ನುವ ಟ್ವಿಟ್ಟರ್ ಅಭಿಯಾನ ಶುರುವಾಗಿದೆ.

ಪ್ರಾಥಮಿಕ, ಪ್ರೌಢ ಶಾಲೆಯ ಪಠ್ಯ ಪುಸ್ತಕ ಪರಿಷ್ಕರಣೆ  ವಿವಾದ ಬಳಿಕಯೂ,   ಶಿಕ್ಷಣ ಇಲಾಖೆಯಿಂದ ಸದ್ದಿಲ್ಲದೇ ದ್ವಿತೀಯ ಪಿಯು ಇತಿಹಾಸ ಪಠ್ಯಪುಸ್ತಕ ಪರಿಷ್ಕರಣೆಗೆ ತಯಾರಿ ನಡೆಸಿದೆ ಎನ್ನಲಾಗಿದೆ. ಅಲ್ಲದೇ ಈ ಪಠ್ಯಪುಸ್ತಕ ಪರಿಷ್ಕರಣೆ ಹೊಣೆಗಾರಿಕೆಯನ್ನು ಕೂಡ ರೋಹಿತ್ ಚಕ್ರತೀರ್ಥ ವಹಿಸುವಂತೆ ಸ್ವತಹ ಶಿಕ್ಷಣ ಸಚಿವರೇ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗೆ ಪತ್ರಬರೆದು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಈಗಾಗಲೇ ಪ್ರಾಥಮಿಕ, ಪ್ರೌಢ ಶಾಲೆಯಗಳ ಪಠ್ಯಪುಸ್ತಕ ಪರಿಷ್ಕರಣೆಯೇ ವಿವಾದಕ್ಕೆ ಸಿಲುಕಿದೆ. ಅದರಲ್ಲಿ ಶಿಕ್ಷಣ ತಜ್ಞ ಅಲ್ಲದಂತ, ಪಠ್ಯಪುಸ್ತಕರ ರಚನೆಯ ಗಂಧ ಗಾಳಿಗೊತ್ತಿಲ್ಲದಂತ ಒಬ್ಬ ಟ್ರೋಲರ್‌  ರೋಹಿತ್ ಚಕ್ರತೀರ್ಥನನ್ನು ಪಠ್ಯಪುಸ್ತಕರ ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ್ದರ ಬಗ್ಗೆ ಅನೇಕ ಸಂಘಟನೆಗಳು, ಪ್ರಗತಿಪರರು, ಸಾಹಿತಿಗಳು ಮತ್ತು ಶಿಕ್ಷಣ ತಜ್ಞರು  ತೀವ್ರ ವಿರೋಧ  ವ್ಯಕ್ತಪಡಿಸಿದ್ದಾರೆ. ಜೊತೆಗೆ ಪರಿಷ್ಕರಣೆ ಪಠ್ಯಗಳಲ್ಲಿನ ಒಂದೊಂದೇ ತಪ್ಪುಗಳನ್ನು ದಿನಕ್ಕೊಂದು ಹೊರಬರುತ್ತಿದ್ದು RejectBrahminTextBooks #RejectRSSTextBooks ಎಂಬ ಹ್ಯಾಶ್ ಟ್ಯಾಗ್ ನಡಿ ನಾಡಿನ ಜನತೆ ಸ್ವಯಂ ಪ್ರೇರಿತವಾಗಿ ಟ್ವೀಟರ್  ಅಭಿಯಾನ ನಡೆಸಿದ್ದು, 25 ಸಾವಿರಕ್ಕು ಹೆಚ್ಚು ಟ್ವೀಟ್‌‌ ಮತ್ತು ರಿ ಟ್ವೀಟ್‌ ಆಗಿದ್ದು, ದೇಶದಲ್ಲಿಯೇ ಮೊದಲ ಟ್ರೆಂಡ್‌ ಕ್ರಿಯೇಟ್‌ ಆಗಿದೆ.

click me!