ಕೇಂದ್ರದಿಂದ ಮಹತ್ವದ ಸೂಚನೆ: ರಾಜ್ಯದಲ್ಲಿ ಶಾಲೆ-ಕಾಲೇಜು ಪ್ರಾರಂಭಕ್ಕೆ ಸುಳಿವು ಕೊಟ್ಟ ಡಿಸಿಎಂ

Published : Oct 16, 2020, 07:50 PM ISTUpdated : Oct 16, 2020, 07:56 PM IST
ಕೇಂದ್ರದಿಂದ ಮಹತ್ವದ ಸೂಚನೆ: ರಾಜ್ಯದಲ್ಲಿ ಶಾಲೆ-ಕಾಲೇಜು ಪ್ರಾರಂಭಕ್ಕೆ ಸುಳಿವು ಕೊಟ್ಟ ಡಿಸಿಎಂ

ಸಾರಾಂಶ

ರಾಜ್ಯದಲ್ಲಿ ಹಂತ-ಹಂತವಾಗಿ ಶಾಲಾ-ಕಾಲೇಜು ಆರಂಭಕ್ಕೆ ಸಿದ್ಧತೆಗಳು ನಡೆದಿವೆ. ಇನ್ನು ಈ ಬಗ್ಗೆ ಉಪಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ ಅವರು ಸುಳಿವು ನೀಡಿದ್ದಾರೆ.

ಬೆಂಗಳೂರು, (ಅ.16):  ಈಗಾಗಲೇ ಕೇಂದ್ರ ಸರ್ಕಾರ ಶಾಲೆ ತೆರೆಯಲು ಅವಕಾಶ ಕಲ್ಪಿಸಿದೆ. ಕೇಂದ್ರದ ಅನುಮತಿ ಬೆನ್ನಲ್ಲೇ ಯುಜಿಸಿಯಿಂದಲೂ ಸೂಚನೆ ದೊರೆತಿದ್ದು, ನವೆಂಬರ್‌ನಲ್ಲಿ ಕಾಲೇಜು ಆರಂಭಿಸುವ ಸೂಚನಗಳಿವೆ ಎಂದು ತಿಳಿಸಿದರು.

ಮೊದಲ ಹಂತದಲ್ಲಿ ಸಾಕಷ್ಟು ಮುನ್ನೆಚ್ಚರಿಕೆಯೊಂದಿಗೆ ಪದವಿ ಕಾಲೇಜುಗಳು ಆರಂಭಗೊಳ್ಳಲಿವೆ. 2ನೇ ಹಂತದಲ್ಲಿ 8ರಿಂದ 12ನೇ ತರಗತಿ ಆರಂಭ, 3ನೇ ಹಂತದಲ್ಲಿ 1-7ನೇ ಕ್ಲಾಸ್ ತೆರೆಯಲು ಅವಕಾಶ ಕಲ್ಪಿಸಲಾಗುಗುವುದು. ಆದ್ರೆ, ಕೊರೋನಾ ನಿಯಂತ್ರಣಕ್ಕೆ ಬಂದಷ್ಟೇ ಎಲ್‌ಕೆಜಿ, ಯುಕೆಜಿ ಆರಂಭ ಮಾಡುತ್ತೇವೆ ಎಂದು ಅಶ್ವತ್ಥ್ ನಾರಾಯಣ ಸ್ಪಷ್ಟಡಿಸಿದರು.

ಶಾಲೆ ತೆರೆಯಬೇಕೆ?  ನಾಯಕರು ಕೊಟ್ಟ ಅದ್ಭುತ ಸಲಹೆಗೆ ತಲೆಬಾಗಲೇಬೇಕು! 

ಸಿಎಂ ಜೊತೆ ಶಿಕ್ಷಣ ತಜ್ಞರು, ಆರೋಗ್ಯ ತಜ್ಞರ ಚರ್ಚೆ ನಡೆದಿವೆ. ಚರ್ಚೆ ನಂತರ ಶಾಲೆ ಆರಂಭಿಸುವ ಬಗ್ಗೆ ಅಂತಿಮ ನಿರ್ಧಾರವಾಗಲಿದೆ. ನವೆಂಬರ್ 1 ಅಥವಾ 2ನೇ ವಾರದಲ್ಲಿ ಆರಂಭವಾಗುವ  ಸೂಚನೆಯಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.

ಈ ಹಿಂದೆ ಅಕ್ಟೋಬರ್‌ನಲ್ಲಿ ಪ್ರಾರಂಭಿಸಲು ಸರ್ಕಾರ ಮುಂದಾಗಿತ್ತು. ಆದ್ರೆ, ಸಾರ್ವಜನಿಕರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಶಾಲೆ ಪ್ರಾರಂಭಿಸುವ ನಿರ್ಧಾರವನ್ನು ಸರ್ಕಾರ ಕೈಬಿಟ್ಟಿತ್ತು. ಇದೀಗ ಅಶ್ವತ್ಥ್ ನಾರಾಯಣ ಅವರ ಈ ಹೇಳಿಕೆ ಹಿನ್ನೆಲೆಯಲ್ಲಿ ಕೊರೋನಾ ಭೀತಿ ನಡುವೆಯೂ ಶಾಲಾ-ಕಾಲೇಜು ಆರಂಭ ಮತ್ತೆ ಮುನ್ನೆಲೆಗೆ ಬಂದಿದೆ. ಇದು ಯಾವ ಹಂತಕ್ಕೆ ಹೋಗುತ್ತದೆ ಎನ್ನುವುದನ್ನ ಕಾದುನೋಡಬೇಕಿದೆ.

PREV
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ