Haveri: ತೇನ್‌ಸಿಂಗ್‌ ಕತೆ ಹೇಳಿ ಮಕ್ಕಳಿಗೆ ದೃಢಸಂಕಲ್ಪದ ಪಾಠ ಮಾಡಿದ ಸಿಎಂ ಬೊಮ್ಮಾಯಿ

By Kannadaprabha NewsFirst Published Dec 18, 2022, 4:52 PM IST
Highlights

ಕಂದಾಯ ಸಚಿವರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ  ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದ  ಅಟಲ್‌ ಬಿಹಾರಿ ವಾಜಪೇಯಿ ಶಾಲೆ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೃಢ ಸಂಕಲ್ಪದ ಪಾಠ ಮಾಡಿದರು.

ಹಾವೇರಿ (ಡಿ.18): ಕಂದಾಯ ಸಚಿವರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ  ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದ  ಅಟಲ್‌ ಬಿಹಾರಿ ವಾಜಪೇಯಿ ಶಾಲೆ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೃಢ ಸಂಕಲ್ಪದ ಪಾಠ ಮಾಡಿದರು. ಮೌಂಟ್‌ ಎವರೆಸ್ವ್‌ ಮೊದಲು ಏರಿದ ತೇನಸಿಂಗ್‌ ಅವರ ಉದಾಹರಣೆಯೊಂದಿಗೆ ಮಕ್ಕಳಿಗೆ ಶ್ರದ್ಧೆಯಿಂದ ಕಲಿಯಲು ಕೆಲವು ಸಲಹೆ ನೀಡಿದರು. ಜೊತೆಗೆ ತಮ್ಮ ಶಾಲಾ ದಿನಗಳನ್ನು ಸ್ಮರಿಸಿಕೊಂಡರು. ಮಕ್ಕಳಲ್ಲಿ ಜ್ಞಾನ ಇದ್ದರೆ ಸಾಲದು. ಅದನ್ನು ಅಭಿವ್ಯಕ್ತಪಡಿಸಲು ವಿಶ್ವಾಸಬೇಕು ಎಂದ ಅವರು, ಯಾವುದೇ ಪ್ರಶ್ನೆಯನ್ನು ತಾರ್ಕಿಕವಾಗಿ ವಿಚಾರ ಮಾಡಿದಾಗ ಮಾತ್ರ ಅದಕ್ಕೆ ಉತ್ತರ ಸಿಗಲಿದೆ. ಕಂಠ ಪಾಠ ಮಾಡಿದರೆ ಅದು ಶಾಶ್ವತವಾಗಿ ತಮ್ಮ ಮನದಲ್ಲಿ ಉಳಿಯೋದಿಲ್ಲ. ಒಮ್ಮೆ ವಿದ್ಯಾರ್ಥಿಯಾದರೆ ಕೊನೆಯ ಉಸಿರು ಇರುವವರೆಗೂ ಅವರು ವಿದ್ಯಾರ್ಥಿಗಳೇ. ಶಾಲೆ ಕಾಲೇಜು ಮುಗಿದ ನಂತರವೂ ಪ್ರತಿ ನಿತ್ಯ ಜೀವನದ ಪರೀಕ್ಷೆ ಎದುರಿಸಬೇಕು ನಂತರ ಪಾಠ ಕಲಿಬೇಕು ಎಂದರು.

ನೀವೆಲ್ಲ ಅದೃಷ್ಟವಂತ ಮಕ್ಕಳು, ಮುಂದೆ ಏನಾಗಬೇಕೆಂದುಕೊಂಡಿದ್ದೀರಿ ಎಂದು ಪ್ರಶ್ನಿಸಿದರು. ಆಗ ಮಕ್ಕಳು ಡಾಕ್ಟರ್‌, ಎಂಜಿನಿಯರ್‌, ತಹಶೀಲ್ದಾರ, ಐಎಎಸ್‌ ಹೀಗೆ ವಿವಿಧ ವಿಚಾರ ಪ್ರಕಟಿಸಿದರು. ಕಂಠಪಾಠ ಮಾಡದೇ ಪರೀಕ್ಷೆ ಬರೆಯಲು ಸಾಧ್ಯವಾದರೆ ಅದು ಸಕ್ಸಸ್‌ ಎಂದರು. ಮಕ್ಕಳಿಗೆ ಗಣಿತದ ಪಾಠವನ್ನೂ ಹೇಳಿದರು. ಪಠ್ಯದ ಜೊತೆ ಗಮನ ಕೊಡಿ ನೀವು ಯಶ ಕಾಣುತ್ತೀರಿ. ಉನ್ನತ ಗುರಿ ಹೊಂದಿ ಅದನ್ನು ಈಡೇರಿಸಲು ಕಷ್ಟಪಟ್ಟು ಸಾಧನೆ ಮಾಡಿ ಆಗ ಯಶ ಸಿಗಲಿದೆ. ಯಾವುದಕ್ಕೂ ಶ್ರಮ ಅಗತ್ಯ ಶಾರ್ಚ್‌ಕಟ್‌ನಿಂದ ಲಾಭವಿಲ್ಲ ಎಂದರು.

ಗಟ್ಟಿಮನಸ್ಸಿನಿಂದ ಅಂದುಕೊಂಡು ಶ್ರದ್ಧೆಯಿಂದ ಓದಿದರೆ ಯಶಸ್ವಿ ಆಗತ್ತೀರಿ. ಎಂದಿಗೂ ನಾನು ಬಾರೀ ಬುದ್ಧಿವಂತ ಅಂದುಕೊಳ್ಳಬೇಡಿ ಎಂದರು. ನಂತರ ಕಂದಾಯ ಸಚಿವ ಆರ್‌. ಅಶೋಕ್‌ ಅವರು ಮಕ್ಕಳೊಂದಿಗೆ ಹಾಡು ಅಂತ್ಯಾಕ್ಷರಿಯಲ್ಲಿ ಸಮಯ ಕಳೆದರು. ಆಗಲೇ ರಾತ್ರಿ 10.40 ಆಗಿತ್ತು.

ನಾನು ಓದಿದ್ದು ಸರ್ಕಾರಿ ಶಾಲೆ ಎಂದ ಅಶೋಕ: ನಾನು ಓದಿದ್ದು ಜಾಲಹಳ್ಳಿ ಸರ್ಕಾರಿ ಶಾಲೆ. ನಾನಲ್ಲ ವಿಜ್ಞಾನಿಗಳು, ಖ್ಯಾತನಾಮರು ಸರ್ಕಾರಿ ಶಾಲೆಗಳಲ್ಲಿ ಓದಿದ್ದಾರೆ. ಆದ್ದರಿಂದ ಮಕ್ಕಳು ಕಾನ್ವೆಂಟ್‌ ಅನ್ನುವಂತಿಲ್ಲ ಎಂದರು. 

8000 ಶಾಲಾ ಕೊಠಡಿ ನಿರ್ಮಾಣ: ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ 8 ಸಾವಿರ ಕೊಠಡಿಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ಹಿಂದಿನ ಯಾವ ಸರ್ಕಾರವೂ ಇದನ್ನು ಮಾಡಿಲ್ಲ. ಶಿಕ್ಷಣ ಮುಖ್ಯ ಎಂಬ ಅರಿವಿನಲ್ಲಿ ಈ ಯೋಜನೆ ಮಾಡುತ್ತಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹಾವೇರಿ ಪ್ರವಾಸದ ವೇಳೆ ಹೇಳಿದರು.

Udupi: ಮಂಗಳೂರು ವಿಶ್ವವಿದ್ಯಾನಿಲಯ ವಿರುದ್ದ ಸಿಡಿದೆದ್ದ ವಿದ್ಯಾರ್ಥಿ ಸಮೂಹ

ವಿದ್ಯಾರ್ಥಿಗಳ ಊಟ ಸವಿದ ಸಿಎಂ: ಉತ್ತರ ಕರ್ನಾಟಕ ಶೈಲಿಯ ಊಟ ಸವಿದ ಸಿಎಂ, ಸಚಿವ ಅಶೋಕ: ಶಿಗ್ಗಾಂವಿ ತಾಲೂಕಿನ ಬಾಡದಲ್ಲಿ ಶನಿವಾರ ನಡೆದ ಕಂದಾಯ ಸಚಿವರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್‌.ಅಶೋಕ ಅವರು ಅಟಲ್‌ ಬಿಹಾರಿ ವಾಜಪೇಯಿ ವಸತಿ ಶಾಲೆಯ 500 ವಿದ್ಯಾರ್ಥಿಗಳ ಜೊತೆ ಉತ್ತರ ಕರ್ನಾಟಕ ಶೈಲಿಯ ಊಟ ಸವಿದರು.

ಸಹಾಯಕ ಪ್ರಾಧ್ಯಾಪಕರ ಮಧ್ಯಂತರ ವರ್ಗಾವಣೆಗೆ ಸಿದ್ದರಾಮಯ್ಯ ಆಕ್ರೋಶ

ಕಡಕ್‌ ರೊಟ್ಟಿ, ಚಪಾತಿ, ಬಿಸಿ ರೊಟ್ಟಿ, ಮೊಳಕೆ ಒಡೆದ ಹೆಸರು ಕಾಳಿನ ಪಲ್ಯ, ಬದನಿಕಾಯಿ ಪಲ್ಯ, ಅನ್ನ, ಸಂಬಾರಿನ ಜೊತೆಗೆ ವಿಶೇಷ ಗೋಧಿ ಪಾಯಸ, ಭಜಿ ಸವಿದರು. ಬಳಿಕ ಬಾಳೆಹಣ್ಣು ಸವಿಯುತ್ತಾ ಮಕ್ಕಳೊಂದಿಗೆ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು. ಊಟಕ್ಕೂ ಮೊದಲು ಅನ್ನ ದೇವರಿಗೆ ಕೈಮುಗಿದ ಮುಖ್ಯಮಂತ್ರಿ ಹಾಗೂ ಇತರರು ಅನ್ನಪೂರ್ಣೆ, ಸದಾಪೂರ್ಣೆ, ಪ್ರಾರ್ಥನೆ ಮಾಡುವ ಮೂಲಕ ಊಟ ಪ್ರಾರಂಭಿಸಿದರು. ಅದಕ್ಕೂ ಮೊದಲು ಅಟಲ್‌ ಬಿಹಾರಿ ವಾಜಪೇಯಿ ವಸತಿ ಶಾಲೆ ಮಕ್ಕಳ ಜೊತೆ ಸಂವಾದ ನಡೆಸಿದರು.

click me!