ಫುಟ್‌ಪಾತ್‌ನಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಸಿವಿಲ್ ಎಂಜಿನಿಯರ್

By Suvarna NewsFirst Published Jun 29, 2022, 2:31 PM IST
Highlights

*ಸಿವಿಲ್ ಎಂಜಿನಿಯರ್ ನಿಕುಂಜ್ ತ್ರಿವೇದಿ ಅವರ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ
*ಹಿಂದುಳಿದ ವರ್ಗಗಳ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಎಂಜಿನಿಯರ್
*ನಿಕುಂಜ್ ತ್ರಿವೇದಿ ಅವರು ಮಕ್ಕಳಿಗೆ ಪಾಠವನ್ನೂ ಮಾಡುತ್ತಾರೆ
 

ಕೆಲವರು ಎಷ್ಟೇ ಎತ್ತರದ ಸ್ಥಾನಕ್ಕೇರಿದ್ರೂ ಸೇವಾ ಮನೋಭಾವ ಬಿಡಲ್ಲ. ಕಷ್ಟ ಪಟ್ಟು ಓದಿ ಬಂದ ಹಾದಿಯನ್ನ ಮರೆಯಲ್ಲ. ಇಂಜಿನಿಯರ್ (Engineer), ಡಾಕ್ಟರ್ (Doctor), ಪ್ರಾಧ್ಯಾಪಕ (Lecturer), ಐಎಎಸ್ (IAS), ಐಪಿಎಸ್ (IPS ಅಧಿಕಾರಿ - ಹೀಗೆ ನಾನಾ ಹುದ್ದೆಗಳನ್ನ ಅಲಂಕರಿಸಿದ್ರೂ ಸಮಾಜಕ್ಕೆ ಏನಾದ್ರೂ ಮಾಡಲು ಹಾತೊರೆಯುತ್ತಾರೆ. ಬಡವರು, ಹಿಂದುಳಿದ ವರ್ಗದವರು, ಕೂಲಿ ಕಾರ್ಮಿಕರ ಮಕ್ಕಳಿಗೆ ತಮ್ಮ ಕೈಯಿಂದಾದ ಸಹಾಯಹಸ್ತ ಚಾಚಲು ಸದಾ ಸಿದ್ಧರಿರ್ತಾರೆ.  ಇದೇ ರೀತಿಯಾಗಿ ಗುಜರಾತ್ ಮೂಲದ ಸಿವಿಲ್ ಇಂಜಿನಿಯರ್ ನಿಕುಂಜ್ ತ್ರಿವೇದಿ (Nikunj Trivedi) ಕೂಡ ಶ್ರಮಿಸುತ್ತಿದ್ದಾರೆ. ಅಂದಹಾಗೇ ಇವ್ರೇನು ಫೇಮಸ್, ಸೋಷಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್ (Social Media influencer) ಅಲ್ಲ. ಅವರಲ್ಲಿ ಹೆಚ್ಚಿನವರು ದಿನದ ಕೊನೆಯಲ್ಲಿ ತಮ್ಮ ಲಾಭಕ್ಕಾಗಿ ಏನು ಬೇಕಾದರೂ ಮಾಡಲು ರೆಡಿ ಇರ್ತಾರೆ. ಆದರೆ ಸಿವಿಲ್ ಇಂಜಿನಿಯರ್ ನಿಕುಂಜ್ ತ್ರಿವೇದಿ ಹಾಗಲ್ಲ.  ಸರಿಯಾದ ಶಿಕ್ಷಣದ ಪ್ರವೇಶವನ್ನು ಹೊಂದಿರದ ಮತ್ತು ವೇಗವಾಗಿ ಬದಲಾಗುತ್ತಿರುವ ಸಮಾಜವನ್ನು ಅರ್ಥಮಾಡಿಕೊಳ್ಳುವ ಸಾಧನಗಳ ಕೊರತೆಯಿರುವ ಮಕ್ಕಳ ಜೀವನದ ಮೇಲೆ ಪ್ರಭಾವ ಬೀರುವ ಆಸಕ್ತಿ ಹೊಂದಿದ್ದಾರೆ.  

ಇದನ್ನೂ ಓದಿ: ನೀವು ಆರ್ಟ್ಸ್ ಸ್ಟೂಡೆಂಟಾ? ಕೋರ್ಸುಗಳು ಹಲವು, ಆಯ್ಕೆ ನಿಮಗೆ ಬಿಟ್ಟಿದ್ದು!

ಸಿವಿಲ್ ಇಂಜಿನಿಯರ್ (Civil engineer) ನಿಕುಂಜ್ ತ್ರಿವೇದಿ ಅವರು ಬೋಧನಾ ಶುಲ್ಕವನ್ನು ಭರಿಸಲಾಗದ ಹಿಂದುಳಿದ ವರ್ಗದ ಮಕ್ಕಳಿಗೆ ಉಚಿತ ಶಿಕ್ಷಣ (Free Education) ವನ್ನು ನೀಡುತ್ತಿದ್ದಾರೆ. ಈ ಮೂಲಕ ಮಕ್ಕಳಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸುವ ಕೆಲ್ಸ ಮಾಡುತ್ತಿದ್ದಾರೆ.  ನಿಕುಂಜ್ ವಡೋದರಾದ ಫುಟ್‌ಪಾತ್‌ನಲ್ಲಿ ಖಾಸಗಿ (Private) ಮತ್ತು ಸರ್ಕಾರಿ ಶಾಲೆಗಳ (Government Schools) ಹಿಂದುಳಿದ ವಿದ್ಯಾರ್ಥಿಗಳಿಗೆ ನಿತ್ಯ ಪಾಠ ಹೇಳಿಕೊಡುತ್ತಿದ್ದಾರೆ. ಕೆಜಿಯಿಂದ 10ನೇ ತರಗತಿವರೆಗಿನ 95 ರಿಂದ 100 ಮಕ್ಕಳು ಇಲ್ಲಿಗೆ ಓದಲು ಬರುತ್ತಾರೆ. ಅವರಲ್ಲಿ ಕೆಲವರು ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಹೋಗುತ್ತಾರೆ. ಇನ್ನು ಕೆಲ ಮಕ್ಕಳ ಪೋಷಕರಿಗೆ ಬೋಧನೆಯ ಶುಲ್ಕವನ್ನು ಭರಿಸುವ ಶಕ್ತಿ ಇರುವುದಿಲ್ಲ. ಹೀಗಾಗಿ ನಾನು ಅವರಿಗೆ ಉಚಿತವಾಗಿ ಕಲಿಸುತ್ತೇನೆ ಅಂತಾರೆ ನಿಕುಂಜ್. 

"ನಾನು 5-10 ನೇ ತರಗತಿಯ ವಿದ್ಯಾರ್ಥಿಗಳಿಗೆ ಅವರ ಪಠ್ಯಕ್ರಮವನ್ನು ಕಲಿಸುತ್ತೇನೆ.  ವಿವಿಧ ವಿಷಯಗಳಲ್ಲಿನ ಮೂಲಭೂತ ಪರಿಕಲ್ಪನೆಗಳನ್ನು ತೆರವುಗೊಳಿಸುವುದರ ಜೊತೆಗೆ, ಅವರು ಗುಜರಾತಿ (Gujarati), ಇಂಗ್ಲಿಷ್ (English) ಮತ್ತು ಹಿಂದಿ (Hindi) ಯಲ್ಲಿ ಬರೆಯುವಂತೆ ಮಾಡುವ ಮೂಲಕ ಭಾಷೆಯ ಮೇಲೆ ಕೇಂದ್ರೀಕರಿಸುತ್ತಾರೆ. ಸಾರ್ವಜನಿಕರು ನಮಗೆ ಆರ್ಥಿಕವಾಗಿ ಸಹಾಯ ಮಾಡುತ್ತಾರೆ. ನಾನು ಕೂಡ 5-6 ವಿದ್ಯಾರ್ಥಿಗಳ ಶಾಲಾ ಶುಲ್ಕವನ್ನು ಪಾವತಿಸುತ್ತೇನೆ. ಮೊದಲು ತಮ್ಮ ಬಳಿ ಕಲಿತ ವಿದ್ಯಾರ್ಥಿಗಳು ಈಗ ಇತರರಿಗೆ ಕಲಿಸಲು ಸಹಾಯ ಮಾಡುತ್ತಿದ್ದಾರೆ" ಎಂದು ನಿಕುಂಜ್ ಹೇಳುತ್ತಾರೆ.  

ಇದನ್ನೂ ಓದಿ: ಪುಸ್ತಕ ಪ್ರಕಟಿಸಿ ಗಿನ್ನೆಸ್ ರೆಕಾರ್ಡ್ ಸೇರಿಸಿದ ಬ್ರಿಟನ್ 5ರ ಬಾಲೆ!

ವಡೋದರಾದ (Vadodara) ಬೀದಿಯಲ್ಲಿ ಬಡ ಮಕ್ಕಳಿಗಾಗಿ ಸಿವಿಲ್ ಇಂಜಿನಿಯರ್ ನಿಕುಂಜ್ ತ್ರಿವೇದಿ ಮನ ಮಿಡಿಯುತ್ತಿದೆ. ಯುವಕರಲ್ಲಿ ಶಿಕ್ಷಣದ ಮೌಲ್ಯದ ಅರಿವು ಮೂಡಿಸಲು, ನಿಕುಂಜ್ ಅವರು ಫುಟ್ಪಾತ್ನಲ್ಲಿ ಖಾಸಗಿ ಮತ್ತು ಸಾರ್ವಜನಿಕ ಶಾಲೆಗಳ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಖುದ್ದು ಸರ್ಕಾರಿ ಶಿಕ್ಷಕರು, ಪ್ರಾಧ್ಯಾಪಕರಿಗೆ ಮಕ್ಕಳಿಗೆ ಕಲಿಸಿಕೊಡಲು ಹಿಂದು ಮುಂದೆ ನೋಡುತ್ತಾರೆ. ತಮ್ಮ ಖಾತೆಗೆ ಸಂಬಳ ಬಂದ್ರೆ ಸಾಕು ಅನ್ನೋ ಮನಸ್ಥಿತಿಯಲ್ಲಿ ಇರುತ್ತಾರೆ. ಅಂಥದ್ರಲ್ಲಿ ತಾವು ಸಿವಿಲ್ ಇಂಜಿನಿಯರ್ ಆಗಿದ್ರೂ, ಬಡ ಮಕ್ಕಳ ಶಿಕ್ಷಣಕ್ಕಾಗಿ ಪರಿಶ್ರಮ ಪಡ್ತಿರೋ ನಿಕುಂಜ್ ಅವರಿಗೆ ಹ್ಯಾಟ್ಸಪ್ ಹೇಳಲೇಬೇಕು. ಅವರ ಪ್ರಯತ್ನದಿಂದ ಸಾಕಷ್ಟು ಹಿಂದುಳಿದ ವರ್ಗಗಳ ಮಕ್ಕಳ ಶಿಕ್ಷಣಕ್ಕೆನೆರವಾಗುತ್ತಿದೆ. ಆ ಕಾರಣಕ್ಕೆ ನಿಕುಂಜ್ ತ್ರಿವೇದಿ ಅವರಿಗೆ ಜನರೂ ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

click me!