• YouTube ಪಾಠಗಳಿಂದಲೇ CAR ಪರೀಕ್ಷೆ ಬರೆದು ಟಾಪರ್ ಆದ ಚಿರಾಗ್ ಗುಪ್ತಾ
• ಆನ್‌ಲೈನ್ ಕಲಿಕೆಯ ಮೂಲಕವೇ ಪರೀಕ್ಷೆಗೆ ಸಿದ್ಧರಾಗಿದ್ದ ಅಹ್ಮದಾಬಾದ್‌ನ ಈ ಅಭ್ಯರ್ಥಿ
• ಭೌತಶಾಸ್ತ್ರದಲ್ಲಿ ಆಸಕ್ತಿ ಇರುವ ಚಿರಾಗ್
ನವದೆಹಲಿ(ಜ.8): ದೇಶದಲ್ಲಿರುವ 20 ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (Indian Institute Of Management-IIT) ಸಂಸ್ಥೆಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬೇಕೆಂದರೆ ಕ್ಯಾಟ್ (Common Admission Test) ಎದುರಿಸಬೇಕು. ಅಭ್ಯರ್ಥಿಗಳು ಕ್ಯಾಟ್(CAT) ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್(IIT) ಗೆ ಪ್ರವೇಶ ನೀಡಲಾಗುತ್ತದೆ. ಕ್ಯಾಟ್ ಪರೀಕ್ಷೆಯನ್ನು ಪಾಸ್ ಮಾಡಲು ಅಭ್ಯರ್ಥಿಗಳು ವರ್ಷಗಟ್ಟಲೆ ತಯಾರಿ ನಡೆಸುತ್ತಾರೆ. ಕೋಚಿಂಗ್ ಕ್ಲಾಸ್ ಗಳಿಗೆ ಸೇರಿ ಪರೀಕ್ಷೆ ಎದುರಿಸಲು ಸಜ್ಜಾಗುತ್ತಾರೆ. ಪ್ರತಿ ವರ್ಷ ಸಾವಿರಾರು ಅಭ್ಯರ್ಥಿಗಳು ಕ್ಯಾಟ್ ಪರೀಕ್ಷೆಗಾಗಿ ಹಲವು ರೀತಿಯಲ್ಲಿ ತಯಾರಿ ನಡೆಸುತ್ತಾರೆ.ಕೆಲವರು ಈ ಪರೀಕ್ಷೆ ಎದುರಿಸುವಲ್ಲಿ ಯಶಸ್ವಿಯಾಗುತ್ತಾರೆ. ಆದ್ರೆ ಈ ಸಲ ಅಭ್ಯರ್ಥಿಯೊಬ್ಬರು, ಯಾವುದೇ ಪುಸ್ತಕಗಳನ್ನು ಓದದೆ ಕೇವಲ ಯೂಟ್ಯೂಬ್ ಪಾಠಗಳಿಂದಲೇ CAT 2021 ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಸಾಂಪ್ರದಾಯಿಕ ಮಾರ್ಗಕ್ಕಿಂತ ಭಿನ್ನವಾಗಿ ಪರೀಕ್ಷೆ ಎದುರಿಸಿ ಗೆದ್ದಿದ್ದಾರೆ.
CAT 2021 ಗಾಗಿ ಅಹಮದಾಬಾದ್ (Ahmedabad) ಮೂಲದ, 21 ವರ್ಷದ ಚಿರಾಗ್ ಗುಪ್ತಾ (Chirag Gupta) ಅವರ ತಯಾರಿ ತಂತ್ರವೇ ವಿಭಿನ್ನವಾಗಿತ್ತು. ಈ ವರ್ಷದ ಕ್ಯಾಟ್ ಪರೀಕ್ಷೆಯಲ್ಲಿ ಸಾಧನೆಗೈದ 9 ಮಂದಿ ಪೈಕಿ ಇವರು ಒಬ್ಬರು. ಯಾವುದೇ ಕೈಬರಹದ ಟಿಪ್ಪಣಿಗಳು ಅಥವಾ ಪುಸ್ತಕಗಳನ್ನು ಚಿರಾಗ್ ಅವಲಂಬಿಸಿರಲಿಲ್ಲ. ಬದಲಾಗಿ, ಅವರು ಸಂಪೂರ್ಣವಾಗಿ ಆನ್‌ಲೈನ್ ಕಲಿಕೆ ಅದರಲ್ಲೂ ಯುಟ್ಯೂಬ್ ಮೂಲಕ ಪರೀಕ್ಷೆಗೆ ಸಿದ್ಧರಾಗಿದ್ದರು. ಚಿರಾಗ್ ಗುಪ್ತಾ ಅವರು ಪ್ರಸ್ತುತ ಪುಣೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ ಅಂಡ್ ರಿಸರ್ಚ್ (IISER) ನಲ್ಲಿ BS-MS ಕಾರ್ಯಕ್ರಮದ ಅಂತಿಮ ವರ್ಷದಲ್ಲಿದ್ದಾರೆ.
undefined
"ಆರಂಭದಲ್ಲಿ, ನಾನು ಭೌತಶಾಸ್ತ್ರದ ಸಂಶೋಧನೆಯಲ್ಲಿ ಆಸಕ್ತಿ ಹೊಂದಿದ್ದೆ. ಆದರೆ ನೀರಿನ ಬಡತನದ ಕುರಿತಾದ ಒಂದು ಸೆಮಿಸ್ಟರ್ ಯೋಜನೆಯು ನನ್ನನ್ನು ಸೆಳೆಯಿತು. ನಾನು ನೀರಿನ ಬಿಕ್ಕಟ್ಟಿನ ಬಗ್ಗೆ ವ್ಯಾಪಕವಾಗಿ ಓದಿದ್ದೇನೆ. ಹೀಗಾಗಿ ಅಗತ್ಯವಿರುವ ವಿಷಯದ ಬಗ್ಗೆ ಸಂಶೋಧನೆಗೆ ನನ್ನ ಸಮಯವನ್ನು ವಿನಿಯೋಗಿಸಲು ನಿರ್ಧರಿಸಿದೆ, ” ಎಂದು ಚಿರಾಗ್ ತಿಳಿಸಿದ್ದಾರೆ.
DigiLocker : ಡಿಜಿಲಾಕರ್‌ನಲ್ಲಿರುವ ಸರ್ಟಿಫಿಕೇಟ್‌ಗಳು ಮಾನ್ಯ, ಯುಜಿಸಿ ಕಟ್ಟಪ್ಪಣೆ
"ನಾನು 2017 ರಲ್ಲಿ JEE ಅಡ್ವಾನ್ಸ್‌ಡ್‌ಗೆ ಹಾಜರಾಗಿದ್ದೆ. ಅದರಲ್ಲಿ 5064 ರ್ಯಾಂಕ್ ಗಳಿಸಿದ್ದೆ. IIT ಖರಗ್‌ಪುರ ಮತ್ತು BITS ಪಿಲಾನಿಗೆ ಸೇರಲು ಅರ್ಹತೆ ಹೊಂದಿದ್ದರೂ, ಸಂಶೋಧನಾ ಪರಿಸರ ವ್ಯವಸ್ಥೆಯಿಂದಾಗಿ IISER ನಲ್ಲಿ ಡ್ಯುಯಲ್-ಡಿಗ್ರಿಯನ್ನು ಮುಂದುವರಿಸಲು ನಾನು ಆಯ್ಕೆ ಮಾಡಿಕೊಂಡಿದ್ದೇನೆ" ಎಂದು ಅವರು ತಿಳಿಸಿದ್ದಾರೆ.
ಅಂದಹಾಗೆ ಚಿರಾಗ್ 1 ರಿಂದ 10 ನೇ ತರಗತಿಯವರೆಗೆ ಶಾಹಿಬಾಗ್‌ನ ಕೇಂದ್ರೀಯ ವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು. ನಂತರ 11 ಮತ್ತು 12 ನೇ ತರಗತಿಗಳನ್ನು ನ್ಯೂ ಟುಲಿಪ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಓದಿದರು.. "ಶಾಲಾ ಶಿಕ್ಷಣದ ಅತ್ಯಂತ ನಿರ್ಣಾಯಕ ವರ್ಷಗಳಲ್ಲಿ ನಾನು ಶಾಲೆಗಳನ್ನು ಬದಲಾಯಿಸಲು ನಿರ್ಧರಿಸಿದೆ. ಏಕೆಂದರೆ ನನ್ನ ಶಾಲೆಯು ನನ್ನ ಮನೆಯಿಂದ ಬಹಳ ದೂರದಲ್ಲಿತ್ತು. JEE ಸಿದ್ಧತೆಗಳೊಂದಿಗೆ, ಪ್ರಯಾಣದಲ್ಲಿ ನನ್ನ ಸಮಯವನ್ನು ವ್ಯರ್ಥ ಮಾಡಲು ನಾನು ಬಯಸಲಿಲ್ಲ. 83.8% ಅಂಕಗಳೊಂದಿಗೆ 12 ನೇ ತರಗತಿಯಲ್ಲಿ ಸರಾಸರಿಗಿಂತ ಹೆಚ್ಚಿನ ವಿದ್ಯಾರ್ಥಿಯಾಗಿದ್ದರೂ, ಏಕಾಗ್ರತೆಯ ಪ್ರಯತ್ನದಿಂದಾಗಿ ನಾನು ಪ್ರಧಾನ ತಾಂತ್ರಿಕ ಸಂಸ್ಥೆಗಳಲ್ಲಿ ಪ್ರವೇಶಕ್ಕೆ ಅರ್ಹತೆ ಗಳಿಸಲು ಸಾಧ್ಯವಾಯಿತು,” ಅನ್ನೋದನ್ನ ಸ್ಮರಿಸುತ್ತಾರೆ ಚಿರಾಗ್.
NEET EXAM FREE COACHING: ನೀಟ್ ಆಕಾಂಕ್ಷಿ ಅಭ್ಯರ್ಥಿಗಳಿಗೆ ಉಚಿತ ತರಬೇತಿ ನೀಡುವ ಆ್ಯಪ್
ಚಿರಾಗ್ ಅವರ ತಂದೆ, ಧರ್ಮೇಂದ್ರ ಗುಪ್ತಾ, ಎಸ್‌ಬಿಐ ಲೈಫ್‌ನಲ್ಲಿ ಡೆಪ್ಯೂಟಿ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಾರೆ. ಮತ್ತು ಅವರ ತಾಯಿ ಅನಿತಾ ಗುಪ್ತಾ ಗೃಹಿಣಿಯಾಗಿದ್ದಾರೆ. ಚಿರಾಗ್ ಅವರು ಅಹಮದಾಬಾದ್‌ನಲ್ಲಿ ಬಾಲ್ಯ ಮತ್ತು ಹದಿಹರೆಯವನ್ನು ಕಳೆದಿದ್ದಾರೆ. ಮೂರು ವರ್ಷಗಳ ಹಿಂದೆ ಅವರ ಕುಟುಂಬ ಮುಂಬೈಗೆ ಸ್ಥಳಾಂತರಗೊಂಡಿದೆ.ಚಿರಾಗ್ ಅವರು ಮಾರ್ಚ್ 2021 ರಲ್ಲಿ ಮ್ಯಾನೇಜ್‌ಮೆಂಟ್ ಪ್ರವೇಶ ಪರೀಕ್ಷೆಗೆ ತಯಾರಿ ಪ್ರಾರಂಭಿಸಿದರು. ಆದ್ರೆ ಕೆಲವೇ ತಿಂಗಳುಗಳಲ್ಲಿ ಸತತ ಪ್ರಯತ್ನದಿಂದಾಗಿ ಶೇ.100ರಷ್ಟು ಸಾಧನೆಯನ್ನು ಮಾಡಿದ್ದಾರೆ.