ಯಾದಗಿರಿ: ಶಿಕ್ಷಕರಿಗಾಗಿ ಕಣ್ಣೀರು ಹಾಕಿದ ಮಕ್ಕಳು, ನಮ್ಮನ್ನು ಬಿಟ್ಟು ಹೋಗ್ಬೇಡಿ ಎಂದು ರೋಧ‌ನೆ..!

By Girish Goudar  |  First Published Jul 31, 2022, 6:05 PM IST

ಯಾದಗಿರಿ ಜಿಲ್ಲೆಯ ಎರಡು ಕಡೆ ವಿದ್ಯಾರ್ಥಿಗಳು ಕಣ್ಣೀರು ಹಾಕಿದ ಘಟನೆ ನಡೆದಿದೆ. 


ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಯಾದಗಿರಿ

ಯಾದಗಿರಿ(ಜು.31):  ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ, ತಸ್ಮೈ ಶ್ರೀ ಗುರುವೇ ನಮಃ ಎಂದು ಗುರುವಿಗೆ ದೇವರೆಂದು ಕರೆಯುತ್ತಾರೆ. ಶಿಕ್ಷಕರು ತಮ್ಮಲ್ಲಿರುವ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆದು ವಿದ್ಯಾರ್ಥಿಗಳಿಗೆ ಅಕ್ಷರ ಕಲಿಸಿದ ನೆಚ್ಚಿನ ಗುರುಗಳಿಗಾಗಿ ಶಾಲೆ ಮಕ್ಕಳು ಗಳ ಗಳನೇ ಕಣ್ಣೀರು ಹಾಕಿದ ಘಟನೆ ಯಾದಗಿರಿಯಲ್ಲಿ ನಡೆದಿದೆ. ಪ್ರತ್ಯೇಕ ಎರಡು ಶಾಲೆಯ ನೆಚ್ಚಿನ ಗುರುಗಳು ಶಾಲೆ ಬಿಟ್ಟು ಹೋಗುವದನ್ನು ಅರಗಿಸಿಕೊಳ್ಳಲು ಸಾಧ್ಯವಾಗದೇ ಶಾಲೆ ವಿದ್ಯಾರ್ಥಿಗಳು ಕಣ್ಣೀರಾದರು.

Latest Videos

undefined

ಶಿಕ್ಷಕರ ನಿವೃತ್ತಿ, ವಿದ್ಯಾರ್ಥಿಗಳ ಕಣ್ಣೀರು: ಇವತ್ತು ಯಾದಗಿರಿ ಜಿಲ್ಲೆಯ ಎರಡು ಕಡೆ ವಿದ್ಯಾರ್ಥಿಗಳು ಕಣ್ಣೀರು ಹಾಕಿದ ಘಟನೆ ನಡೆದಿದೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಶಿವಪುರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕ ನಾಗೇಶ್ವರ ಸಾಕಾ ಅವರಿಗಾಗಿ ಶಾಲೆಯ ವಿದ್ಯಾರ್ಥಿಗಳು ಕಣ್ಣೀರು ಹಾಕಿದರು. ಅದೇ ರೀತಿ ಸುರಪುರ ತಾಲೂಕಿನ ಜಾಲಿಬೆಂಚಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕನ್ನಡ ಶಿಕ್ಷಕ ಮಲ್ಲಿನಾಥ ರಾಚೋಟಿ ಅವರಿಗಾಗಿ ವಿದ್ಯಾರ್ಥಿಗಳು ರೋಧಿಸಿದ್ದಾರೆ.

 

6 ವರ್ಷ ತುಂಬಿದ್ದರೆ ಮಾತ್ರ 1ನೇ ಕ್ಲಾಸ್‌ಗೆ ಪ್ರವೇಶ..!

ದಯವಿಟ್ಟು ಶಾಲೆ ಬಿಟ್ಟು ಹೋಗಬೇಡಿ ಸರ್:  ಶಿವಪುರ ಗ್ರಾಮದ ಶಾಲೆಯ ಶಿಕ್ಷಕ ನಾಗೇಶ್ವರ ಸಾಕಾ ಅವರು ಕಳೆದ ನಾಲ್ಕು ವರ್ಷದಿಂದ ಹಿಂದಿ ವಿಷಯದ ಶಿಕ್ಷಕರಾಗಿ ಸೇವೆ ಸಲ್ಲಿಸಿ ಶಾಲೆಯ ಮಕ್ಕಳ ಪ್ರೀತಿಗೆ ಪಾತ್ರರಾಗಿದ್ದರು. ವಯೋ ನಿವೃತ್ತಿ ನಿಮಿತ್ಯ ಶಾಲೆಯಲ್ಲಿ ಶಿಕ್ಷಕ ನಾಗೇಶ್ವರ ಅವರಿಗೆ ಬಿಳ್ಕೋಡಿಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಸಮಾರಂಭಕ್ಕೂ ಮುನ್ನ ವಿದ್ಯಾರ್ಥಿಗಳು ಶಿಕ್ಷಕರನ್ನು ಸುತ್ತು ವರೆದು ನೃತ್ಯ ಮಾಡಿದ್ದಾರೆ.

ಸಮಾರಂಭದ ನಂತರ ಶಿಕ್ಷಕ ನಾಗೇಶ್ವರ ಅವರು ಶಾಲೆ ಬಿಟ್ಟು ತೆರಳುವಾಗ ಶಾಲೆ ಮಕ್ಕಳು ಶಿಕ್ಷಕರನ್ನು ಸುತ್ತುವರೆದು ತಬ್ಬಿಕೊಂಡು ಸರ್ ದಯವಿಟ್ಟು ಶಾಲೆ ಬಿಟ್ಟು ಹೋಗಬೇಡಿ ಸರ್. ನೀವು ಇಲ್ಲಿ ಇದ್ದು ನಮಗೆ ಪಾಠ ಮಾಡಬೇಕೆಂದು ವಿದ್ಯಾರ್ಥಿಗಳು ಕಣ್ಣೀರು ಹಾಕಿದರು. ವಿದ್ಯಾರ್ಥಿಗಳು ಈ ದೃಶ್ಯ ಕರುಳು ಚುರ್ ಎನ್ನುವಂತಿತ್ತು.

ಶಿಕ್ಷಕರಿಗೆ ಗ್ರಾಮಸ್ಥರಿಂದ ಭವ್ಯ ಮೆರವಣಿಗೆ: ನಂತರ ಶಿಕ್ಷಕ ನಾಗೇಶ್ವರ ಅವರು ನೀವು ಚೆನ್ನಾಗಿ ಓದಿ ಉನ್ನತ ಗುರಿ ಸಾಧಿಸಬೇಕು ನೀವು ಕಣ್ಣೀರು ಹಾಕಬಾರದು ಎಂದು ಬುದ್ದಿ ಮಾತು ಹೇಳಿದ್ದಾರೆ. ಅದೇ ರೀತಿ ಸುರಪುರ ತಾಲೂಕಿನ  ಜಾಲಿಬೆಂಚಿ ಗ್ರಾಮದ ಶಾಲೆಯ ಶಿಕ್ಷಕ ಮಲ್ಲಿನಾಥ ರಾಚೋಟಿ ಅವರು ಶಾಲೆಯಲ್ಲಿ 18 ವರ್ಷ 8 ತಿಂಗಳ ಕನ್ನಡ ಭಾಷೆಯ ಶಿಕ್ಷಕರಾಗಿ ಸೇವೆ ಮಾಡಿದ್ದಾರೆ.

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಪಡಸಾವಳಿ ಗ್ರಾಮದ ನಿವಾಸಿಯಾದ ಶಿಕ್ಷಕ ಮಲ್ಲಿನಾಥ ಅವರು ಜಾಲಿಬೆಂಚಿ ಶಾಲೆಯಲ್ಲಿ ಸೇವೆ ಸಲ್ಲಿಸಿ ಅನೇಕ ಶಾಲೆಯ ಮಕ್ಕಳಿಗೆ ಜ್ಞಾನ ದಾನ ಮಾಡಿದ್ದಾರೆ. ಕರ್ತವ್ಯದ ಜೊತೆ ಅನೇಕ ಮಕ್ಕಳ ಓದಿಗೆ ಸಹಾಯ ಮಾಡಿದ್ದಾರೆ. ಮಲ್ಲಿನಾಥ ಅವರು ನಿವೃತ್ತಯಾದ ನಂತರ ಹಮ್ಮಿಕೊಂಡ ಬಿಳ್ಕೋಡಿಗೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ನೃತ್ಯ ಮಾಡಿದರು. ನಂತರ ಶಾಲೆ ಬಿಟ್ಟು ಹೋಗುವಾಗ ವಿದ್ಯಾರ್ಥಿಗಳು ಕಣ್ಣೀರು ಹಾಕಿದರು. ನಂತರ ಗ್ರಾಮಸ್ಥರು ಸೇರಿ ನಿವೃತ್ತರಾದ ಶಿಕ್ಷಕ ಮಲ್ಲಿನಾಥ ಅವರಿಗೆ ತೆರೆದ ವಾಹನದಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.

ನಿಮ್ಮನ್ನು ಬಿಟ್ಟು ಹೋಗಲು ನಮಗೆ ದುಃಖ ಆಗಿದೆ:  ಈ ಬಗ್ಗೆ ಶಿಕ್ಷಕ ಮಲ್ಲಿನಾಥ ರಾಚೋಟಿ ಅವರು ಮಾತನಾಡಿ, ನಾನು ಜಾಲಿಬೆಂಚಿ ಸರಕಾರಿ ಶಾಲೆಯಲ್ಲಿ 18 ವರ್ಷ 8 ತಿಂಗಳ ಸೇವೆ ಮಾಡಿದ್ದೆನೆ. ಮಕ್ಕಳ ಹಾಗೂ ಗ್ರಾಮಸ್ಥರ ಪ್ರಿತಿಗೆ ಖುಷಿಯಾಗುತ್ತದೆ. ಮಕ್ಕಳನ್ನು ಬಿಟ್ಟು ಹೋಗುವದು ನನಗೆ ದುಃಖ ತಂದಿದೆ ಎಂದರು.

click me!