ಮಧ್ಯಪ್ರದೇಶ: ಗಣಿತದ ಸಮಸ್ಯೆ ಬಿಡಿಸುವಲ್ಲಿ ವಿದ್ಯಾರ್ಥಿನಿ ತಪ್ಪು ಮಾಡಿದಳು ಎಂದು ಶಿಕ್ಷಕರೊಬ್ಬರು ಒಂಭತ್ತು ವರ್ಷದ ಬಾಲಕಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಶಿಕ್ಷಕ ವಿದ್ಯಾರ್ಥಿನಿಗೆ ಥಳಿಸುತ್ತಿರುವ ವಿಡಿಯೋವನ್ನು ಯಾರೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.
ಮಧ್ಯಪ್ರದೇಶ: ಗಣಿತದ ಸಮಸ್ಯೆ ಬಿಡಿಸುವಲ್ಲಿ ವಿದ್ಯಾರ್ಥಿನಿ ತಪ್ಪು ಮಾಡಿದಳು ಎಂದು ಶಿಕ್ಷಕರೊಬ್ಬರು ಒಂಭತ್ತು ವರ್ಷದ ಬಾಲಕಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಶಿಕ್ಷಕ ವಿದ್ಯಾರ್ಥಿನಿಗೆ ಥಳಿಸುತ್ತಿರುವ ವಿಡಿಯೋವನ್ನು ಯಾರೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಅದು ವೈರಲ್ ಆಗುತ್ತಿದ್ದಂತೆ ಶಿಕ್ಷಣಾಧಿಕಾರಿಗಳು ವಿದ್ಯಾರ್ಥಿನಿಗೆ ಥಳಿಸಿದ ಶಿಕ್ಷಕನನ್ನು ಅಮಾತುಗೊಳಿಸಿದ್ದಾರೆ. ಅಲ್ಲದೇ ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಮಧ್ಯಪ್ರದೇಶದ ರತ್ಲಮ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ.
57 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಶಿಕ್ಷಕ ಜಿನೇಂದ್ರ ಮೊಗ್ರಾ ಐದಾರು ಸಲ ವಿದ್ಯಾರ್ಥಿನಿಗೆ ಸರಿಯಾಗಿ ಬಾರಿಸಿದ್ದಾರೆ. ಮೂರನೇ ತರಗತಿಯ ವಿದ್ಯಾರ್ಥಿನಿಯನ್ನು ಶಿಕ್ಷಕ ಕಪ್ಪು ಹಲಗೆ ಮೇಲೆ ಲೆಕ್ಕದ ಸಮಸ್ಯೆಯನ್ನು ಬಿಡಿಸುವಂತೆ ಕರೆದಿದ್ದಾರೆ. ಆದರೆ ವಿದ್ಯಾರ್ಥಿನಿಗೆ ಲೆಕ್ಕದ ಸಮಸ್ಯೆ ಬಿಡಿಸಲು ಸಾಧ್ಯವಾಗಿಲ್ಲ. ಇದರಿಂದ ಸಿಟ್ಟಿಗೆದ್ದ ಶಿಕ್ಷಕ ಆಕೆಗೆ ಸರಿಯಾಗಿ ಬಾರಿಸಿದ್ದಾರೆ.
रतलाम में मामटखेड़ा सरकारी स्कूल में गिनती और अक्षर नहीं पढ़ पाने की वजह से शिक्षक ने छात्रा को बेरहमी से चांटे जड़ दिया,जिला शिक्षा अधिकारी ने उन्हें निलंबित कर दिया है. pic.twitter.com/9M3LuZGuIV
— Anurag Dwary (@Anurag_Dwary)35ರವರೆಗೆ ಸಂಖ್ಯೆ ಎಣಿಸಿದ ಆಕೆ ನಂತರ ತಡವರಿಸಿದ್ದಾಳೆ ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ಶಿಕ್ಷಕ ಆಕೆಗೆ ಬಾರಿಸಿದ್ದಾರೆ. ಅಲ್ಲದೇ ಆಕೆಗೆ ಬೈದಿದ್ದಾರೆ. ಕ್ಲಾಸಿನಲ್ಲಿ ಒಟ್ಟು ಹದಿನೈದು ಜನ ವಿದ್ಯಾರ್ಥಿಗಳಿದ್ದು, ಎಲ್ಲರೂ ನೆಲದ ಮೇಲೆ ಕುಳಿತು ಪಠ್ಯ ಕೇಳುತ್ತಿದ್ದಾರೆ. ಈ ಘಟನೆ ರತ್ಲಮ್ ಜಿಲ್ಲೆಯ ಪಿಪ್ಲೊಡ ವಿಭಾಗದ ಮಮತ್ ಖೇಡ್ ಗ್ರಾಮದಲ್ಲಿ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ನಡೆದಿದೆ. ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಜಿಲ್ಲಾ ಶಿಕ್ಷಣಾಧಿಕಾರಿ ಕೆ.ಸಿ ಶರ್ಮಾ ವಿಭಾಗೀಯ ತನಿಖೆಗೆ ಆದೇಶಿಸಿದ್ದಾರೆ. ಜೊತೆಗೆ ಶಿಕ್ಷಕನ ಅಮಾನತುಗೊಳಿಸಿದ್ದಾರೆ.
ಫುಲ್ ಟೈಟಾಗಿ ತೂರಾಡುತ್ತಾ ಶಾಲೆಗೆ ಬಂದ ಶಿಕ್ಷಕಿ, ಹೊಸ ಅವತಾರಕ್ಕೆ ದಂಗಾದ ಅಧಿಕಾರಿಗಳು!
ಮಕ್ಕಳಿಗೆ ಕಲಿಸುವ ರೀತಿ ಇದಲ್ಲ, ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಕಲಿಸಲು ಉತ್ತಮವಾದ ಮಾರ್ಗಗಳಿವೆ. ಶಿಕ್ಷಕ ಕೂಡ ತಪ್ಪಾಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಶಿಕ್ಷಣಾಧಿಕಾರಿ ತಿಳಿಸಿದ್ದಾರೆ. ಅದೊಂದು ಕಾಲವಿತ್ತು. ಈಗಿನಂತೆ ಪ್ರತಿಯೊಬ್ಬರ ಕೈಗಳಲ್ಲಿ ಮೊಬೈಲ್ ಫೋನ್‌ಗಳಿರಲಿಲ್ಲ.
ವಿದ್ಯಾರ್ಥಿನಿಯರಿಂದ ಶೌಚಾಲಯ ಸ್ವಚ್ಛತೆ ಮಾಡಿಸಿದ ಟೀಚರ್: ಪ್ರಶ್ನೆ ಮಾಡಿದ್ದಕ್ಕೆ ಅಡುಗೆ ಸಹಾಯಕಿಗೆ ಕಿರುಕುಳ!
ಮಕ್ಕಳಿಗೆ ಕಲಿಸುವ ರೀತಿ ಇದಲ್ಲ, ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಕಲಿಸಲು ಉತ್ತಮವಾದ ಮಾರ್ಗಗಳಿವೆ. ಶಿಕ್ಷಕ ಕೂಡ ತಪ್ಪಾಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.
ಅದೊಂದು ಕಾಲವಿತ್ತು. ಈಗಿನಂತೆ ಪ್ರತಿಯೊಬ್ಬರ ಕೈಗಳಲ್ಲಿ ಮೊಬೈಲ್ ಫೋನ್‌ಗಳಿರಲಿಲ್ಲ. ಶಾಲೆಗಳಲ್ಲಿ ಶಿಕ್ಷಕರು ಹೊಡೆದರೆ ಅದು ಮನೆಯವರೆಗೆ ಬಂದು ತಲುಪುತ್ತಿರಲಿಲ್ಲ. ಒಂದು ವೇಳೆ ಪೋಷಕರಿಗೆ ಬಂದು ಹೇಳಿದರೆ ಮಕ್ಕಳಿಗೆಯೇ ಪೋಷಕರು ಬೈದು ಸುಮ್ಮನಾಗುತ್ತಿದ್ದರು. ಜೊತೆಗೆ ಶಾಲೆಗೆ ಬಂದರೆ ಇನ್ನೆರಡು ಬಾರಿಸಿ ಎಂದು ಶಿಕ್ಷಕರಿಗೆ ಹೇಳುತ್ತಿದ್ದ ಪೋಷಕರಿದ್ದರು. ಮಕ್ಕಳು ಕೂಡ ಪೋಷಕರು ಹಾಗೂ ಶಿಕ್ಷಕರಿಗೆ ಹೆದರಿ ಶಾಲೆಯಲ್ಲಿ ಚೆನ್ನಾಗಿ ಓದುತ್ತಿದ್ದರು. ಆದರೆ ಈಗ ಶಿಕ್ಷಕರು ಮಕ್ಕಳನ್ನು ಮುಟ್ಟುವಂತಿಲ್ಲ, ಹೊಡೆಯುವಂತಿಲ್ಲ, ಬೈಯುವಂತಿಲ್ಲ. ಶಿಕ್ಷಕರು ಬೈದಿದ್ದು ಗೊತ್ತಾಗುತ್ತಿದ್ದಂತೆ ಪೋಷಕರು ಶಾಲೆಗೆ ಬಂದು ನಮ್ಮ ಮಕ್ಕಳಿಗೆ ಏಕೆ ಹೊಡೆದಿರಿ ನಿಮಗ್ಯಾರು ನಮ್ಮ ಮಕ್ಕಳಿಗೆ ಹೊಡೆಯಲು ಹೇಳಿದ್ದು, ಎಂದು ಜಗಳವಾಡುತ್ತಾರೆ. ಇತ್ತೀಚೆಗೆ ಇಂತಹ ಹಲವು ನಿದರ್ಶನಗಳನ್ನು ನಾವು ನೋಡಿದ್ದೇವೆ.