ಎಜುಟೆಕ್ ಸಂಸ್ಥೆಯಾದ ಬೈಜೂಸ್ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರ ನಂಬರ್‌ಗಳನ್ನು ಖರೀದಿಸಿ ತಮ್ಮ ಸಂಸ್ಥೆಯ ಕೋರ್ಸುಗಳನ್ನು ಪಡೆಯದಿದ್ದರೆ ಮಕ್ಕಳ ಭವಿಷ್ಯವು ಹಾಳಾಗುವುದು ಎಂದು ಬೆದರಿಸುತ್ತದೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹೇಳಿದೆ.
ನವದೆಹಲಿ: ಎಜುಟೆಕ್ ಸಂಸ್ಥೆಯಾದ ಬೈಜೂಸ್ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರ ನಂಬರ್‌ಗಳನ್ನು ಖರೀದಿಸಿ ತಮ್ಮ ಸಂಸ್ಥೆಯ ಕೋರ್ಸುಗಳನ್ನು ಪಡೆಯದಿದ್ದರೆ ಮಕ್ಕಳ ಭವಿಷ್ಯವು ಹಾಳಾಗುವುದು ಎಂದು ಬೆದರಿಸುತ್ತದೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹೇಳಿದೆ. ಈ ಸಂಬಂಧ ಸ್ಪಷ್ಟನೆ ನೀಡಲು ಬೈಜೂಸ್ ಮಾಲೀಕ ಬೈಜು ರವೀಂದ್ರನ್‌ಗೆ ಡಿ.23ಕ್ಕೆ ಬರುವಂತೆ ನೋಟಿಸ್ ಜಾರಿ ಮಾಡಿದೆ. ಆದರೆ, ಇದು ಸುಳ್ಳು ಆರೋಪ. ಬೆದರಿಕೆ ಹಾಕಿಲ್ಲ. ಬೈಜೂಸ್ (Byjus App) ಆ್ಯಪ್ ಡೌನ್‌ಲೋಡ್ ಮಾಡಿಕೊಂಡವರನ್ನು ಮಾತ್ರ ಕಂಪನಿ ಸಂಪರ್ಕಿಸುತ್ತದೆ ಎಂದು ಬೈಜೂಸ್ ಹೇಳಿದೆ. ‘ಪಾಲಕರಿಗೆ(Parents) ಕೋರ್ಸುಗಳನ್ನು ಪಡೆಯಲು ಒತ್ತಾಯಿಸುವುದಲ್ಲದೇ ಬೈಜೂಸ್ ಕೋರ್ಸು ಪಡೆದ ಬಳಿಕವೂ ಮಧ್ಯದಲ್ಲೇ ಅದನ್ನು ಬಿಡಲು ಪ್ರಯತ್ನಿಸಿದರೆ ಪಾವತಿಸಿದ ಹಣವನ್ನು ಹಿಂದಿರುಗಿಸುವುದಿಲ್ಲ. ಪಾಲಕರು ನೀಡಿದ ದೂರುಗಳ ಬಗ್ಗೆಯೂ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಎಂದು ಆಯೋಗ ಆರೋಪಿಸಿದೆ. ಕೋರ್ಸುಗಳ ಮಾರಾಟಕ್ಕಾಗಿ ಅಕ್ರಮ ವಿಧಾನಗಳನ್ನು ಬಳಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರ ಬೈಜೂಸ್ ಸಿಇಒ (Byjus CEO) ರವೀಂದ್ರನ್ (Ravindran) ಅವರಿಗೆ ಆಯೋಗ ಸಮನ್ಸ್ ಜಾರಿ ಮಾಡಿದೆ.
2,500 ಉದ್ಯೋಗಿಗಳನ್ನು ವಜಾ ಮಾಡಿದ Byju's: ಭಾವನಾತ್ಮಕ ಪತ್ರ ಬರೆದ ಸಂಸ್ಥೆಯ ಸ್ಥಾಪಕ