ವಿವಾದದ ಮಧ್ಯೆಯೇ ವಿದ್ಯಾರ್ಥಿಗಳ ಕೈ ಸೇರಿದ ಪಠ್ಯಪುಸ್ತಕ, ಗೊಂದಲದಲ್ಲಿ ಮಕ್ಕಳು

By Suvarna News  |  First Published Jun 25, 2022, 8:07 PM IST

* ಕಾಫಿನಾಡಿನಲ್ಲಿ ಶೇಕಾಡ 75 ರಷ್ಟು ಮರುಪರಿಷ್ಕರಣೆ ಪಠ್ಯ ವಿತರಣೆ
* ವಿದ್ಯಾರ್ಥಿಗಳ ಬ್ಯಾಗನಲ್ಲಿ ಹೊಸ ಪಠ್ಯ ಪುಸ್ತಕದ ಜೊತೆಗೆ ಹಳೆ ಪುಸಕ್ತ
* ಯಾವುದು ಕಲಿಯಬೇಕೆಂಬ ಗೊಂದಲದಲ್ಲಿ ಮಕ್ಕಳು


ಚಿಕ್ಕಮಗಳೂರು, (ಜೂನ್.25) :  ರಾಜ್ಯದಲ್ಲಿ ಇದೀಗ ಶಾಲಾ ಪಠ್ಯಪುಸ್ತಕದ ವಿವಾದ ದನದಿಂದ ದಿನಕ್ಕೆ ತಾರಕಕ್ಕೇರುತ್ತಿದ್ದು,ಗಂಟೆಗೊಂದು  ಆರೋಪ-ಪ್ರತ್ಯಾರೋಪಗಳು ಹೊರಬರುತ್ತಿವೆ.ಮತ್ತೊಂದೆಡೆ ಪುಸ್ತಕಗಳು ವಿದ್ಯಾರ್ಥಿಗಳ ಕೈಸೇರಿಲ್ಲ ಎನ್ನುವ ದೂರುಗಳು ಕೇಳಿಬಂದಿವೆ. ಆದ್ರೆ, ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ  6 ಲಕ್ಷ ಮರುಪರಿಷ್ಕರಣೆ ಪಠ್ಯಪುಸ್ತಕಗಳು ವಿತರಣೆಯಾಗಿದ್ದು, 40 ಸಾವಿರ ಪಠ್ಯಪುಸ್ತಕಗಳು ಬರಬೇಕಾಗಿದೆ. 

ವಿವಾದದ ನಡುವೆ ವಿದ್ಯಾರ್ಥಿಗಳ ಕೈ ಸೇರಿದ ಪಠ್ಯಪುಸ್ತಕ
ಶಾಲಾ ಪಠ್ಯಪುಸ್ತಕ ಮರುಪರಿಷ್ಕರಣೆ ದಿನಕ್ಕೊಂದು ಹೇಳಿಕೆಗಳು ಸಾಹಿತ್ಯವಲಯದಿಂದ ಕೇಳಿಬರುತ್ತಿರುವಾಗಲೇ ಮರುಪರಿಸ್ಕರಣೆಗೊಂಡಿರುವ 5,29,815 ಪಠ್ಯಗಳು ವಿದ್ಯಾರ್ಥಿಗಳ ಕೈಸೇರಿದ್ದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ. 75.50 ರಷ್ಟು ವಿತರಣೆಯಾದಂತಾಗಿದೆ. ಜಿಲ್ಲೆಯಲ್ಲಿ ಒಟ್ಟು 6ಲಕ್ಷ ಪಠ್ಯ  ಪುಸ್ತಕ ವಿತರಣೆಯಾಗಿದ್ದು ಜಿಲ್ಲೆಗೆ 40 ಸಾವಿರ ಬಾಕಿ ಪಠ್ಯಪುಸ್ತಕಗಳು ಬರಬೇಕಿದೆ.ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಕೆಲವು ಶಾಲೆಗಳಿಗೆ ಭೇಟಿ ನೀಡಿ ರಿಯಾಲಿಟಿ ಚೆಕ್ ನಡೆಸಿತ್ತು.

Tap to resize

Latest Videos

ರಿಯಾಲಿಟಿ ಚೆಕ್ ನಲ್ಲಿ ವಿದ್ಯಾರ್ಥಿಗಳ ಶಾಲಾಬ್ಯಾಗ್ನಲ್ಲಿ ಹಳೇಯ ಮತ್ತು  ಹೊಸ ಪಠ್ಯಪುಸ್ತಕಗಳು ಇರುವುದು ಕಂಡು ಬಂತು. ಇದರಲ್ಲಿ ಯಾವುದಕ್ಕೂ ಕಲಿಯಬೇಕೆಂಬ ಗೊಂದಲ ಸಹಜವಾಗಿಯೇ ಮಕ್ಕಳಲ್ಲಿ ಮೂಡಿದ್ದು, ಶಾಲಾ ಶಿಕ್ಷಕರು ಗೊಂದಲಕ್ಕೆ ತೆರೆ ಎಳೆಯಬೇಕಿದೆ.

ಪಠ್ಯ ಪರಿಷ್ಕರಣೆ ನೆಪದಲ್ಲಿ ಕನಕದಾಸರ ಪಠ್ಯಕ್ಕೆ ಕತ್ತರಿ: ಈಶ್ವರಾನಂದಪುರಿ ಶ್ರೀ ಅಸಮಾಧಾನ

ಜಿಲ್ಲೆಗೆ 40 ಸಾವಿರ ಪಠ್ಯಪುಸ್ತಕ ಬಾಕಿ 
ಚಿಕ್ಕಮಗಳೂರು ಜಿಲ್ಲೆಗೆ ಇನ್ನೂ 40ಸಾವಿರ ಪಠ್ಯಪುಸ್ತಕಗಳು ಬರಬೇಕಿದೆ. 8ನೇ ತರಗತಿಯ ಇಂಗ್ಲಿಷ್, ಕನ್ನಡ,  7ನೇ ತರಗತಿಯ ಕನ್ನಡ, 6ನೇ ತರಗತಿಯ ಕನ್ನಡ, 4ನೇ ತರಗತಿಯ ಕನ್ನಡ ಪಠ್ಯಪುಸ್ತಕಗಳು ಸಾಕಷ್ಟು ಬರಬೇಕಿದೆ. ಉರ್ದು ಮತ್ತು ತಮಿಳು ಭಾಷೆಯ ಪಠ್ಯಪುಸ್ತಕಗಳು ಸಮರ್ಪಕವಾಗಿ ವಿತರಣೆಯಾಗಿಲ್ಲ. ಕೆಲ ಶಾಲೆಗಳಲ್ಲಿ ಕನ್ನಡ ,ಇತಿಹಾಸದ ಪುಸ್ತಕ ವಿತರಣೆ ಬಾಕಿಯಾಗಿದ್ದು ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಕರು ಪಠ್ಯಭೋಧನೆಯನ್ನು ಇನ್ನು ಆರಂಭಮಾಡಿಲ್ಲ, ವಿದ್ಯಾರ್ಥಿಗಳಿಗೆ ಹಳೇ ಪಠ್ಯ ಪುಸ್ತಕವಾದ್ರೂ ಓಕೆ, ಹೊಸ ಪುಸ್ತಕವಾದ್ರೂ ಓಕೆ ಎನ್ನುವ ಮನಸ್ಥಿತಿ ವಿದ್ಯಾರ್ಥಿಗಳಲ್ಲಿ ಇದೆ. 

ಒಟ್ಟಾರೆ  ಪಠ್ಯಮರುಪರಿಷ್ಕರಣೆಯ ಪರವಿರೋಧ ಹೇಳಿಕೆ ಬರುತ್ತಿರುವ ನಡುವೆಯೇ ಈಗಾಗಲೇ ಜಿಲ್ಲೆಯಲ್ಲಿ ಶೇ.75.50 ರಷ್ಟು ಪುಸ್ತಕಗಳು ವಿದ್ಯಾರ್ಥಿಗಳ ಕೈಸೇರಿದಂತಾಗಿದ್ದು,ವಿವಾದ ಉಂಟಾಗಿರುವ ಪಠ್ಯ ಕೈಬಿಡಲು ಸರ್ಕಾರ ಸೂಚಿಸುತ್ತದೆಯೋ ಅಥವಾ ಸಂಪೂರ್ಣವಾಗಿ ಮರುಪರಿಷ್ಕರಣೆಗೊಂಡಿರುವ ಪಠ್ಯವನ್ನು ಬೋಧಿಸಲಾಗುತ್ತದೆಯೋ ಕಾದುನೋಡಬೇಕು.

click me!