ನಾನು 1ರಿಂದ 4ನೇ ತರಗತಿಯನ್ನು ಓದಿಲ್ಲ. ನೇರವಾಗಿ 5ನೇ ಕ್ಲಾಸಿಗೆ ಶಾಲೆಗೆ ದಾಖಲಾಗಿ ಶಿಕ್ಷಣ ಪಡೆದು ಲಾಯರ್ ಆಗಿ, ಈಗ ಮುಖ್ಯಮಂತ್ರಿ ಆಗಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು (ಜೂ.19): ನಾನು ಚಿಕ್ಕವನಿದ್ದಾಗ ನಮ್ಮಪ್ಪ ನನ್ನನ್ನು ಓದಲು ಶಾಲೆಗೆ ಕಳಿಸದೇ ವೀರಮಕ್ಕಳ ಕುಣಿತ ಅಭ್ಯಾಸಕ್ಕೆ ಕಳಿಸುತ್ತಿದ್ದರು. ಉಳಿದ ಸಮಯದಲ್ಲಿ ಎಮ್ಮೆ ಕಾಯುತ್ತಿದ್ದೆನು. ಆಗ ನಮ್ಮೂರಿನ ಶಾಲೆಗೆ ಬಂದ ರಾಜಪ್ಪ ಮೇಷ್ಟ್ರು ನನ್ನ ವಯಸ್ಸು ಹೆಚ್ಚಾಗಿದ್ದರಿಂದ ಸೀದಾ 5ನೇ ತರಿಗತಿಗೆ ದಾಖಲಿಸಿಕೊಂಡರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ಓದಿ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳುವ ಕುರಿತು ಸಭೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನೆಗೆ ಶಿಕ್ಷಣ ಸಿಕ್ಕಿದ್ದಕ್ಕೆ ಮುಖ್ಯಮಂತ್ರಿಯಾದೆ. ನನಗೆ ಶಿಕ್ಷಣ ಸಿಕ್ಕಿಲ್ಲ ಅಂದಿದ್ದರೆ ನಾನು ಮುಖ್ಯಮಂತ್ರಿ ಆಗ್ತಿರಲಿಲ್ಲ. ನಮ್ಮಪ್ಪ ನನೆಗೆ ವೀರಮಕ್ಕಳ ಕುಣಿತ ಕಲಿಸಲು ಹಾಕಿದ್ದರು. ಆದರೆ, ಆದನ್ನ ಕಲಿಸುವವರು ನಂಗೆ ಒಂದಿಷ್ಟು ವಿದ್ಯೆ ಹೇಳಿಕೊಟ್ಟರು. ವೀರ ಮಕ್ಕಳ ಕುಣಿತದಲ್ಲಿದ್ದಾಗಲೇ ಮರಳಿನಲ್ಲಿ ಬರೆಯುತ್ತಿದ್ದೆನು. ಒಂದಿಷ್ಟು ದಿವಸ ಎಮ್ಮೆ ಸಹ ಕಾಯುತ್ತಿದ್ದೆ. ನಮ್ಮೂರಿಗೆ ಬಂದ ರಾಜಪ್ಪ ಮೇಷ್ಟ್ರರಿಂದ ನಾನು ಶಾಲೆಗೆ ಸೇರಿದೆ. ಒಂದೇ ಸಾರಿ ನನಗೆ 5 ನೇ ಕ್ಲಾಸ್ ಸೇರಿಸಿಬಿಟ್ಟಿರು. ನಾನು 1 ರಿಂದ 4 ನೇ ಕ್ಲಾಸ್ ತನಕ ಶಾಲೆಗೆ ಹೋಗಿ ಕಲೆತೇ ಇಲ್ಲ. ರಾಜಪ್ಪ ಮೇಷ್ಟ್ರು ನಮ್ಮೂರಿಗೆ ಬರಲಿಲ್ಲ ಅಂದ್ರೆ ನಾನು ಶಾಲೆಗೂ ಹೋಗ್ತಿರಲಿಲ್ಲ..ಲಾಯರ್ ಸಹ ಒದುತಿರಲಿಲ್ಲ ಮುಖ್ಯಮಂತ್ರಿ ಸಹ ಆಗುತ್ತಿರಲಿಲ್ಲ ಎಂದು ಹೇಳಿದರು.
undefined
ಸಿಎಂ ಸಿದ್ದರಾಮಯ್ಯ ನುಂಗಣ್ಣನಂತೆ ಎಲ್ಲವನ್ನೂ ನುಂಗುತ್ತಿದ್ದಾರೆ: ಅಶೋಕ್ ವಾಗ್ದಾಳಿ
ನಾನು ಮಹದೇವಪ್ಪ ಇಬ್ಬರು ಮಾತನಾಡಿಕೊಂಡು ಸರ್ಕಾರಿ ಶಾಲೆಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಬೇಕು ಎಂದು ನಿರ್ಧಾರ ಮಾಡಿದ್ದೆವು. ಈ ಮೂಲಕ ವಿದ್ಯಾರ್ಥಿಗಳಿಗೆ ಉತ್ತೇಜನ ಕೊಡಬೇಕು ಅಂತ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 1994 -95 ರಲ್ಲಿ ನಾನು ಹಣಕಾಸು ಮಂತ್ರಿಯಾಗಿದ್ದಾಗ ರೆಸಿಡೆನ್ಸಿಯಲ್ ಶಾಲೆಗಳು ಆರಂಭವಾಗಿದೆ. ನನಗೆ ಪ್ರೇರಣೆಯಾಗಿದ್ದು ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್)ನವರು ನಮಗೆ ಸಾರಿಯಿ ಅಂಗಡಿ ಬೇಡ ರೆಸಿಡೆನ್ಸಿಯಲ್ ಶಾಲೆ ಬೇಕು ಎಂದು ಒತ್ತಾಯಿಸಿದ್ದರು. ಅವರಿಂದ ಪ್ರೇರಿಪತನಾಗಿ ಬಜೆಟ್ ಬಂಡಿಸುವ ಸಮಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ರೆಸಿಡೆನ್ಸಿಯಲ್ ಶಾಲೆ ತೆರಬೇಕು ಎಂದು ಘೋಷಣೆ ಮಾಡಿದೆ ಎಂದರು.
ನಾನು ಹಣಕಾಸು ಸಚಿವನಾಗಿದ್ದರಿಂದ ನಾನು ಈ ಯೋಜನೆಯನ್ನ ಜಾರಿಗೆ ತಂದೆ. ಇವತ್ತು ಸಮಾಜ ಕಲ್ಯಾಣಯಲ್ಲಿ 833 ರೆಸಿಡೆನ್ಸಿಯಲ್ ಶಾಲೆಗಳು ಇವೆ. ಇನ್ನು ಅಲ್ಪಸಂಖ್ಯಾತ ಎಲ್ಲಾ ಸೇರಿ ಒಟ್ಟು 946 ರೆಸಿಡೆನ್ಸಿಯಲ್ ಶಾಲೆಗಳು ರಾಜ್ಯದಲ್ಲಿದೆ. ಈಗ ಬಜೆಟ್ ಮಂಡಿಸುವ ಸಮಯಲ್ಲಿ ಹೊಬಳಿಗೊಂದು ರೆಸಿಡೆನ್ಸಿಯಲ್ ಶಾಲೆಗಳು ಇವೆಯ ಎಂದು ಅಧಿಕಾರಿಗಳನ್ನ ಕೇಳಿದೆ. ಎಲ್ಲಾ ಹೊಬಳಿಯಲ್ಲೂ ಇರಬೇಕು ಎಂದು ಈ ಬಾರಿ 20 ರೆಸಿಡೆನ್ಸಿಯಲ್ ಶಾಲೆ ತೆರೆಯಲು ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ಹೊಬಳಿಯಲ್ಲೂ ರೆಸಿಡೆನ್ಸಿಯಲ್ ಶಾಲೆಗಳು ಇರಲೇಬೇಕು ಅದನ್ನ ನಾವು ಮಾಡ್ತೀವಿ ಎಂದು ಹೇಳಿದರು.
ರಾಜ್ಯದಲ್ಲಿರುವ ಪ್ರತಿಯೊಬ್ಬ ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಹುಟ್ಟುತ್ತಲೇ ಯಾರೂ ದಡ್ಡರಲ್ಲ. ಕೆಳ ಹಂತದ ವರ್ಗದವರಿಗೆ ಮೊದಲು ಶಿಕ್ಷಣ ಸಿಗುತ್ತಿರಲಿಲ್ಲ. ಅಂಬೇಡ್ಕರ್ ಸಂವಿಧಾನ ಕೊಟ್ಟಮೇಲೆ ಎಲ್ಲರಿಗೂ ಶಿಕ್ಷಣ ಕಡ್ಡಾಯವಾಯ್ತು. ನಮ್ಮ ಜಾತಿ ವ್ಯವಸ್ಥೆಯಲ್ಲಿ ಶೂದ್ರ ಮಕ್ಕಳಿಗೆ ಒದುವ ವ್ಯವಸ್ಥೆ ಇರಲಿಲ್ಲ. ಇದಕ್ಕೆ ಜಾತಿ ವ್ಯವಸ್ಥೆ ಕಾರಣ. ಒದೋರಿಗೆ ಯಾರಿಗೆ ಅವಕಾಶ ಸಿಗ್ತು ಅವರು ಆರ್ಥಿಕವಾಗಿ ಸದೃಢವಾದರು. ಶಿಕ್ಷಣ ಸಿಗದವರು ಆರ್ಥಿಕವಾಗಿ ಹಿಂದುಳಿದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಾಗೇಂದ್ರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಲಾಬಿ: ವಾಲ್ಮೀಕಿ ಸಮುದಾಯದ ನಾಯಕರಿಗೆ ನೀಡುವಂತೆ ಆಗ್ರಹ!
ನಾವು ಸಹಿಷ್ಣುತೆ ಬೆಳೆಸಿಕೊಳ್ಳಬೇಕು. ಬೇರೆ ಧರ್ಮ ಸಹಿಸಿಕೊಳ್ಳೋ ಶಕ್ತಿ ಇಲ್ಲದೆ ಹೋದರೆ ನೀವು ಬಹುತ್ವತೆ ಬೆಳೆಸಿಕೊಳ್ಳೋದು ಹೇಗೆ? ಕೆಲವರು ಸಂವಿಧಾನ ಓದಿಕೊಳ್ಳೋದಿಲ್ಲ. ಹೀಗಾಗಿ ಸಂವಿಧಾನ ಪೀಠಿಕೆ ಓದೋ ಕೆಲಸ ಮಾಡಿಸುತ್ತಿದ್ದೇವೆ. ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವ, ಸಹಿಷ್ಣುತೆ ನಾವು ತಿಳಿದುಕೊಳ್ಳಬೇಕು. ಸಮ ಸಮಾಜ ನಿರ್ಮಾಣ ಆಗಬೇಕು ಅಂತ ಬಾಯಲ್ಲಿ ಹೇಳಬಾರದು. ಅದಕ್ಕೆ ಏನು ಮಾಡಬೇಕು ಅಂತ ಅದನ್ನ ಮಾಡಬೇಕು. ಜಾತ್ಯಾತೀತ ರಾಷ್ಟ್ರ ಆಗಬೇಕು ಅಂತ ಕೇವಲ ಭಾಷಣ ಮಾಡಿದ್ರೆ ಸಾಲದು. ಅದಕ್ಕೆ ಪೂರಕವಾದ ಕೆಲಸ ಮಾಡಬೇಕು. ವೈಚಾರಿಕತೆ, ವೈಜ್ಞಾನಿಕತೆ ಬೆಳೆಸಿಕೊಂಡರೆ ಮಾತ್ರ ಉತ್ತಮ ಪ್ರಜೆ ಆಗೋಕೆ ಸಾಧ್ಯ ಎಂದು ಹೇಳಿದರು.
ವಸತಿ ಶಾಲೆಯಲ್ಲಿ ಓದುತ್ತಿರೋ ಮಕ್ಕಳ ಪೈಕಿ 400 ಜನ ಮಾತ್ರ ಎಂಜಿನಿಯರ್ ಆಗ್ತಿದ್ದಾರೆ. 30 ಜನ ಮಾತ್ರ ಡಾಕ್ಟರ್ ಆಗ್ತಿದ್ದಾರೆ. ಇದನ್ನ ಜಾಸ್ತಿ ಮಾಡಬೇಕು. ವೇದಿಕೆ ಮೇಲೆ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಗೆ ಸೂಚನೆ ನೀಡಲಾಗಿದೆ. 400 ಜನ ಎಂಜಿನಿಯರ್ ಆಗ್ತಿರೋದು ಕನಿಷ್ಠ 1 ಸಾವಿರ ಜನ ಎಂಜಿನಿಯರ್ ಆಗಬೇಕು. 30 ಜನ ಡಾಕ್ಟರ್ ಆಗ್ತಿರೋರು ಕನಿಷ್ಟ 100 ಜನ ಡಾಕ್ಟರ್ ಆಗೋ ರೀತಿ ಟಾರ್ಗೆಟ್ ನೀವು ಇಟ್ಟುಕೊಂಡು ಕೆಲಸ ಮಾಡಬೇಕು. ವಸತಿ ಶಾಲೆಯಲ್ಲಿ ಶೇ.96% ಫಲಿತಾಂಶ ಬಂದಿದೆ. ಇದನ್ನ ಶೇ.100% ಗೆ ಹೆಚ್ಚಿಸಬೇಕು. ಇದೇನು ಕಷ್ಟದ ಕೆಲಸ ಅಲ್ಲ ಎಂದು ಸೂಚಿಸಲಾಗಿದೆ ಎಂದರು.