ಬೈಜೂಸ್‌ ಲೆಕ್ಕಪತ್ರ ಪರಿಶೀಲನೆಗೆ ಕೇಂದ್ರದ ಸೂಚನೆ?

By Kannadaprabha NewsFirst Published Jul 12, 2023, 9:22 AM IST
Highlights

ಆನ್ಲೈನ್‌ ಶಿಕ್ಷಣ ಕ್ಷೇತ್ರದ ದೈತ್ಯ ಕಂಪನಿ ಬೈಜೂಸ್‌ ಲೆಕ್ಕಪತ್ರಗಳ ಬಗ್ಗೆ ತನಿಖೆ ನಡೆಸಿ 6 ವಾರಗಳಲ್ಲಿ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ ಎಂದು ವರದಿಯಾಗಿದೆ. 

ನವದೆಹಲಿ: ಆನ್ಲೈನ್‌ ಶಿಕ್ಷಣ ಕ್ಷೇತ್ರದ ದೈತ್ಯ ಕಂಪನಿ ಬೈಜೂಸ್‌ ಲೆಕ್ಕಪತ್ರಗಳ ಬಗ್ಗೆ ತನಿಖೆ ನಡೆಸಿ 6 ವಾರಗಳಲ್ಲಿ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ ಎಂದು ವರದಿಯಾಗಿದೆ. ಬೈಜೂಸ್‌ ಲೆಕ್ಕಪತ್ರ ಸಲ್ಲಿಸದ ಕಾರಣ ಹಾಗೂ ಇತ್ತೀಚಿಗೆ ಆಡಿಟರ್‌ ಸೇರಿದಂತೆ ಇಬ್ಬರು ಬೋರ್ಡ್‌ ಸದಸ್ಯರು ಹಠಾತ್ತನೆ ರಾಜೀನಾಮೆ ನೀಡಿದ ಬೆನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.

ಬೈಜೂಸ್‌ ಪಡೆದುಕೊಂಡಿದ್ದ 1.8 ಲಕ್ಷ ಕೋಟಿ ರು. ಸಾಲದ ಒಪ್ಪಂದಕ್ಕೆ ಸಂಬಂಧಿಸಿದಂತೆ ಹಲವು ನಿಯಮಗಳನ್ನು ಮುರಿದಿದೆ ಎಂಬ ಆರೋಪಗಳು ಕಂಪನಿಯ ವಿರುದ್ಧ ಕೇಳಿಬಂದಿವೆ. ಇದರ ಬೆನ್ನಲ್ಲೇ 10 ಸಾವಿರ ರು. ಸಾಲ ಪಡೆಯಲು ಕಂಪನಿ ಮಾತುಕತೆ ನಡೆಸುತ್ತಿದೆ ಎಂದು ಹೇಳಲಾಗಿದೆ. ಅಲ್ಲದೇ ಹಲವು ಹಣಕಾಸಿನ ಮಾಹಿತಿ ನೀಡಲು ವಿಳಂಬವಾದ ಹಿನ್ನೆಲೆಯಲ್ಲಿ ಬೈಜೂಸ್‌ನ ಆಡಿಟರ್‌ ಆಗಿದ್ದ ಡೆಲೋಟಿ ಹಸ್ಕಿನ್‌ ಕಳೆದ ತಿಂಗಳು ರಾಜೀನಾಮೆ ನೀಡಿದ್ದರು. ಜೊತೆಗೆ ಬೋರ್ಡ್‌ ಸದಸ್ಯರಾಗಿದ್ದ ಪೀಕ್‌, ಪ್ರೋರಸ್‌ ಮತ್ತು ಚಾನ್‌ ಜೂಕರ್‌ಬಗ್‌ರ್‍ ಅವರು ತಮ್ಮ ಸ್ಥಾನಕ್ಕೆ ಇದ್ದಕ್ಕಿದ್ದಂತೆ ರಾಜೀನಾಮೆ ನೀಡಿದ್ದರು.

Byju's Lays Off: ಮತ್ತೆ 1000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ ಬೈಜೂಸ್!

click me!