2022-23 ನೇ ಶೈಕ್ಷಣಿಕ ಸಾಲಿನಲ್ಲಿ 10 ಮತ್ತು 12ನೇ ತರಗತಿಯನ್ನು ಎರಡು ಭಾಗಗಳಾಗಿ ವಿಂಗಡಣೆ ಮಾಡಬೇಕೆ ಅಥವಾ ಒಂದೇ ಬೋರ್ಡ್ ಪರೀಕ್ಷೆ ಮಾದರಿಯಲ್ಲಿ ಮಾಡಬೇಕೆ ಎಂಬ ಬಗ್ಗೆ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ಇನ್ನೂ ನಿರ್ಧರಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವದೆಹಲಿ(ಏ.18): 2022-23 ನೇ ಶೈಕ್ಷಣಿಕ ಸಾಲಿನಲ್ಲಿ 10 ಮತ್ತು 12ನೇ ತರಗತಿಯನ್ನು ಎರಡು ಭಾಗಗಳಾಗಿ ವಿಂಗಡಣೆ ಮಾಡಬೇಕೆ ಅಥವಾ ಒಂದೇ ಬೋರ್ಡ್ ಪರೀಕ್ಷೆ (Board Exam) ಮಾದರಿಯಲ್ಲಿ ಉಳಿಸಿಕೊಳ್ಳಬೇಕೆ ಎಂಬ ಬಗ್ಗೆ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (Central Board of Secondary Education - CBSE) ಇನ್ನೂ ತೀರ್ಮಾನ ಮಾಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಶೈಕ್ಷಣಿಕ ಅವಧಿಯನ್ನು ವಿಭಜಿಸುವುದು, ಎರಡು ಅವಧಿಯ ಅಂತ್ಯದ ಪರೀಕ್ಷೆಗಳನ್ನು ನಡೆಸುವುದು ಮತ್ತು ಪಠ್ಯಕ್ರಮವನ್ನು ತರ್ಕಬದ್ಧಗೊಳಿಸುವುದು 2021-22 ರಲ್ಲಿ 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ ವಿಶೇಷ ಮೌಲ್ಯಮಾಪನ ಯೋಜನೆಯ ಭಾಗವಾಗಿತ್ತು.
ಆದರೆ ಈ ವರ್ಷ ಕೂಡ ಹಿಂದಿನ ವರ್ಷದ ರೀತಿ ಮುಂದುವರಿಯುತ್ತದೆಯೇ ಅಥವಾ ಕೋವಿಡ್ ಗಿಂತ ಮೊದಲಿನ ನಿಯಮ ಜಾರಿಗೆ ಬರುತ್ತದೆಯೇ ಎಂಬ ಬಗ್ಗೆ ಇನ್ನೂ ಸಿಬಿಎಸ್ಇ ತೀರ್ಮಾನ ಮಾಡಿಲ್ಲ.
545 PSI ಹುದ್ದೆ ನೇಮಕಾತಿಯಲ್ಲಿ ಆಕ್ರಮ ಪ್ರಕರಣ: ಮಹತ್ವದ ಹೇಳಿಕೆ ಕೊಟ್ಟ ಡಿಜಿ ಐಜಿಪಿ
ಕೋವಿಡ್-19 ಸೋಂಕು ಹಿನ್ನೆಲೆಯಲ್ಲಿ 2020-21ರ ಶೈಕ್ಷಣಿಕ ಅವಧಿಗೆ ಯಾವುದೇ ಬೋರ್ಡ್ ಪರೀಕ್ಷೆಗಳನ್ನು ನಡೆಸಲಾಗದ ಕಾರಣ ಪರ್ಯಾಯ ಮೌಲ್ಯಮಾಪನ ಯೋಜನೆಯನ್ನು ಬಳಸಿಕೊಂಡು ವಿದ್ಯಾರ್ಥಿಗಳನ್ನು ಮೌಲ್ಯಮಾಪನ ಮಾಡಬೇಕಾಗಿದ್ದ ಬೋರ್ಡ್ ಪರೀಕ್ಷೆಗಳನ್ನು ಎರಡು ಅವಧಿಗಳಲ್ಲಿ ನಡೆಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಈ ಕ್ರಮವನ್ನು ಒಂದು ಬಾರಿಯ ಕ್ರಮವಾಗಿ ಘೋಷಿಸಲಾಗಿತ್ತು ಎಂದು ಮಂಡಳಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ವಿಧಾನ ಈ ವರ್ಷ ಕೂಡ ಮುಂದುವರಿಯುತ್ತದೆಯೇ ಅಥವಾ ಹಳೆಯ ವಿಧಾನ ಪುನರಾವರ್ತನೆಯಾಗುತ್ತದೆಯೇ ಎಂದು ಗೊತ್ತಿಲ್ಲ ಎನ್ನುತ್ತಾರೆ. ಶೈಕ್ಷಣಿಕ ಅವಧಿ, ಸಿಲೆಬಸ್ ನ ವಿಂಗಡಣೆ ಸಮಯದಲ್ಲಿ ಮೊದಲ ಅವಧಿಯ ಬೋರ್ಡ್ ಪರೀಕ್ಷೆ ಕಳೆದ ವರ್ಷ ಡಿಸೆಂಬರ್ ನಲ್ಲಿ ನಡೆಸಲಾಗಿತ್ತು.
KPSC RDWSD Recruitment 2022 ಒಟ್ಟು 136 ಕಿರಿಯ ಇಂಜಿನಿಯರ್ ಹುದ್ದೆಗೆ ನೇಮಕಾತಿ
ಟರ್ಮ್ I ಪರೀಕ್ಷೆಗಳು ಈಗಾಗಲೇ ಮುಗಿದಿದ್ದು, 10 ಮತ್ತು 12 ಎರಡೂ ತರಗತಿಗಳಿಗೆ ಟರ್ಮ್-II ಪರೀಕ್ಷೆಗಳು ಏಪ್ರಿಲ್ 26 ರಿಂದ ಪ್ರಾರಂಭವಾಗುತ್ತವೆ. ಸಾಂಕ್ರಾಮಿಕ ರೋಗದಿಂದಾಗಿ ಶಾಲೆಗಳು ಬಂದ್ ಆಗಿದ್ದನ್ನು ಗಮನದಲ್ಲಿಟ್ಟುಕೊಂಡು ಎರಡು ಪರೀಕ್ಷೆಗಳ ನಡುವೆ ಸಾಕಷ್ಟು ಅಂತರವನ್ನು ನೀಡಲಾಗಿದೆ ಎಂದು ಮಂಡಳಿ ತಿಳಿಸಿದೆ.
ಜೆಇಇ-ಮೇನ್ ಸೇರಿದಂತೆ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ವೇಳಾಪಟ್ಟಿಯನ್ನು ಸಿದ್ಧಪಡಿಸುವಾಗ ಸಾಕಷ್ಟು ಕಾಳಜಿ ವಹಿಸಲಾಗಿದೆ. ಯಾವುದೇ ಎರಡು ವಿಷಯಗಳ ಪರೀಕ್ಷೆಗಳು ಒಂದೇ ದಿನಾಂಕದಂದು ಬರದಂತೆ ನೋಡಿಕೊಳ್ಳಲಾಗಿದೆ ಸಿಬಿಎಸ್ ಇ ಹೇಳಿದೆ.
Karnataka Politics: ಜೆಡಿಎಸ್ ಅಧಿಕಾರಕ್ಕೆ ತರುವುದು ನನ್ನ ಕೊನೇ ಆಸೆ: ದೇವೇಗೌಡ
ಕೋವಿಡ್ 4ನೇ ಅಲೆ ತಲೆದೋರುವ ಭೀತಿ ಹಿನ್ನೆಲೆಯಲ್ಲಿ ಮತ್ತೆ ಶಾಲಾ-ಕಾಲೇಜುಗಳು ಮುಚ್ಚಬಹುದು ಎಂಬ ಆತಂಕ ಉಂಟಾಗಿದೆ. ಆದರೆ ಈ ಬಾರಿ ದೀರ್ಘಕಾಲದವರೆಗೆ ಶಾಲಾ-ಕಾಲೇಜುಗಳನ್ನು ವಿದ್ಯಾರ್ಥಿಗಳ ಶಿಕ್ಷಣ ಹಿತದೃಷ್ಟಿಯಿಂದ ಮುಚ್ಚುವ ಸಾಧ್ಯತೆಗಳು ತೀರಾ ಕಡಿಮೆಯಾಗಿದೆ.
ದೆಹಲಿ ಮತ್ತು ಎನ್ ಸಿಆರ್ ಪ್ರದೇಶಗಳಲ್ಲಿ ಕೋವಿಡ್-19 ಸೋಂಕು ಕಂಡುಬಂದಿರುವ ಕಡೆಗಳಲ್ಲಿ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಶಾಲೆಗಳನ್ನು ಕೆಲ ದಿನಗಳವರೆಗೆ ಮುಚ್ಚಲಾಗುತ್ತಿದೆ.