ಸಿಬಿಎಸ್‌ಇ 12ನೇ ತರಗತಿ ರಿಸಲ್ಟ್‌ ತೃಪ್ತಿ ತರದಿದ್ದಲ್ಲಿ ಆಗಸ್ಟಲ್ಲಿ ಪರೀಕ್ಷೆ!

Published : Jun 22, 2021, 08:03 AM IST
ಸಿಬಿಎಸ್‌ಇ 12ನೇ ತರಗತಿ ರಿಸಲ್ಟ್‌ ತೃಪ್ತಿ ತರದಿದ್ದಲ್ಲಿ ಆಗಸ್ಟಲ್ಲಿ ಪರೀಕ್ಷೆ!

ಸಾರಾಂಶ

* ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿರುವ ಸಿಬಿಎಸ್‌ಇ ಸ್ಪಷ್ಟನೆ * ಸಿಬಿಎಸ್‌ಇ 12ನೇ ತರಗತಿ ರಿಸಲ್ಟ್‌ ತೃಪ್ತಿ ತರದಿದ್ದಲ್ಲಿ ಆಗಸ್ಟಲ್ಲಿ ಪರೀಕ್ಷೆ * ಸುಪ್ರೀಂಕೋರ್ಟ್‌ಗೆ ಸಿಬಿಎಸ್‌ಇ ಮಾಹಿತಿ

ನವದೆಹಲಿ(ಜೂ.22): ತಾನು ಸದ್ಯದಲ್ಲೇ ಪ್ರಕಟಿಸುವ 12ನೇ ತರಗತಿ ಫಲಿತಾಂಶವು ತೃಪ್ತಿ ತರದೇ ಹೋದರೆ ಅಂಥ ವಿದ್ಯಾರ್ಥಿಗಳಿಗೆ ಆಗಸ್ಟ್‌ 15ರಿಂದ ಸೆಪ್ಟೆಂಬರ್‌ 15ರ ನಡುವೆ ಪರೀಕ್ಷೆ ಏರ್ಪಡಿಸಲಾಗುತ್ತದೆ ಎಂದು ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ತಿಳಿಸಿದೆ.

ಈ ಬಗ್ಗೆ ಸೋಮವಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿರುವ ಸಿಬಿಎಸ್‌ಇ, ‘ಹಾಲಿ 30:30:40 ಆಧಾರದಲ್ಲಿ ನೀಡಲು ನಿರ್ಧರಿಸಿರುವ ಫಲಿತಾಂಶ ತೃಪ್ತಿ ತರದಿದ್ದರೆ ಸಿಬಿಎಸ್‌ಇ ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿಕೊಂಡು ಲಿಖಿತ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು. ಅಲ್ಲದೆ, ಫಲಿತಾಂಶ ಕುರಿತಾದ ಆಕ್ಷೇಪಗಳನ್ನು ಸ್ವೀಕರಿಸಲು ಸಮಿತಿಯೊಂದನ್ನು ರಚಿಸಲಾಗಿದೆ’ ಎಂದು ತಿಳಿಸಿದೆ.

ಕೋವಿಡ್‌ ಕಾರಣ ಈ ವರ್ಷದ ಪರೀಕ್ಷೆ ರದ್ದಾಗಿತ್ತು. ಈ ಕಾರಣ, 12ನೇ ತರಗತಿ ಫಲಿತಾಂಶವನ್ನು 10, 11ನೇ ತರಗತಿಯ ವಾರ್ಷಿಕ ಪರೀಕ್ಷಾ ಫಲಿತಾಂಶ ಹಾಗೂ 12ನೇ ತರಗತಿಯ ಆಂತರಿಕ ಮೌಲ್ಯಮಾಪನದ ಫಲಿತಾಂಶ ಆಧರಿಸಿ ಪ್ರಕಟಿಸಲು ಸಿಬಿಎಸ್‌ಇ ನಿರ್ಧರಿಸಿತ್ತು. ಇದಕ್ಕೆ ಕೆಲವು ಪಾಲಕರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಮೌಲ್ಯಮಾಪನ ಸೂತ್ರಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್‌, ‘ಮಂಗಳವಾರ ಈ ಬಗ್ಗೆ ಉತ್ತರಿಸಿ’ ಎಂದು ಸುಪ್ರೀಂ ಕೋರ್ಟ್‌ಗೆ ಸೂಚಿಸಿತು.

PREV
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ