Udupi ಹಿಜಾಬ್ ಹೋರಾಟಗಾರ್ತಿಯರು ಎರಡನೇ ದಿನ ಪಿಯುಸಿ ಪರೀಕ್ಷೆಗೆ ಬರಲೇ ಇಲ್ಲ!

Published : Apr 23, 2022, 03:22 PM IST
 Udupi ಹಿಜಾಬ್ ಹೋರಾಟಗಾರ್ತಿಯರು ಎರಡನೇ ದಿನ ಪಿಯುಸಿ  ಪರೀಕ್ಷೆಗೆ ಬರಲೇ ಇಲ್ಲ!

ಸಾರಾಂಶ

ಮೊದಲನೇ ದಿನದ ಹೈಡ್ರಾಮಾಗಳ ನಂತರ, ಎರಡನೇ ದಿನ ಹಿಜಾಬ್ ಹೋರಾಟಗಾರ್ತಿಯರು ಪಿಯುಸಿ ಪರೀಕ್ಷೆ ಬರೆಯಲು ಬರಲೇ ಇಲ್ಲ. ಶಾಸಕ ರಘುಪತಿ ಭಟ್ ಕೊಟ್ಟ ಎಚ್ಚರಿಕೆಗೆ, ಹುಡುಗಿಯರ ರೋಷಾವೇಷ ಸ್ವಲ್ಪಮಟ್ಟಿಗೆ ತಣ್ಣಗಾದಂತೆ ಕಂಡುಬರುತ್ತಿದೆ.

ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಏ.23): ಹಿಜಾಬ್ ಹೋರಾಟಗಾರ್ತಿಯರು 2ನೇದಿನದ ಪಿಯುಸಿ ಪರೀಕ್ಷೆ ಬರೆಯಲು ಬರಲೇ ಇಲ್ಲ. ಮೊದಲನೇ ದಿನದ ಹೈಡ್ರಾಮಾಗಳ ನಂತರ, ಎರಡನೇ ದಿನವೂ ಅದು ಮುಂದುವರಿಯಬಹುದು ಎಂಬ ಲೆಕ್ಕಾಚಾರ ತಲೆಕೆಳಗಾಗಿದೆ. ಶಾಸಕ ರಘುಪತಿ ಭಟ್ ಕೊಟ್ಟ ಎಚ್ಚರಿಕೆಗೆ, ಹುಡುಗಿಯರ ರೋಷಾವೇಷ ಸ್ವಲ್ಪಮಟ್ಟಿಗೆ ತಣ್ಣಗಾದಂತೆ ಕಂಡುಬರುತ್ತಿದೆ.

ಇಂದು 2ನೇದಿನದ ಪಿಯುಸಿ ಪರೀಕ್ಷೆ ನಡೆಯಿತು. ಉಡುಪಿಯ ಸರಕಾರಿ ಪದವಿಪೂರ್ವ ಕಾಲೇಜಿನ ಹಿಜಾಬ್ ಹೋರಾಟಗಾರ್ತಿಯರ ಪೈಕಿ ಮೂವರು ಇಂದು ಪರೀಕ್ಷೆ ಬರೆಯಬೇಕಾಗಿತ್ತು. ವಿಜ್ಞಾನ ವಿಭಾಗದ ಅಲ್ಮಾಸ್, ಹಝ್ರಾ ಶಿಫಾ, ಆಯಿಷಾ ಈ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ವಿದ್ಯಾರ್ಥಿನಿಯರು. ಹೈಕೋರ್ಟ್ ಮೊರೆ ಹೋದವರು ಪೈಕಿ ಈ ಮೂವರು ಕೂಡ ಸೇರಿದ್ದರು. ಇವರೆಲ್ಲರಿಗೂ ಇಂದು ಗಣಿತ ಪರೀಕ್ಷೆ ನಿಗದಿಯಾಗಿತ್ತು.

ಉನ್ನತ ವ್ಯಾಸಂಗ ಪಾಕ್‌ ನಲ್ಲಿ ಪಡೆಯದಂತೆ UGC AND AICTE ಸೂಚನೆ

ನಿನ್ನೆಯೇ ಹಾಲ್ ಟಿಕೆಟ್ ಪಡೆದು ಹೋಗಿದ್ದ ಅಲ್ಮಾಸ್: ನಿನ್ನೆ ಸಂಜೆ ವೇಳೆಗೆ ಸರಕಾರಿ ಪದವಿಪೂರ್ವ ಹೆಮ್ಮಕ್ಕಳ ಕಾಲೇಜಿಗೆ ಬಂದಿದ್ದ ಅಲ್ಮಾಸ್, ಹಾಲ್ ಟಿಕೆಟ್ ಪಡೆದು ಹೋಗಿದ್ದರು. ಹಾಗಾಗಿ ಗಣಿತ ಪರೀಕ್ಷೆಯನ್ನು ಖಂಡಿತವಾಗಿಯೂ ಈಕೆ ಬರೆಯಲು ಬರುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ ಈಕೆಯ ಜೊತೆ ಹೋರಾಟಗಾರ್ತಿಯರಾದ ಹಝ್ರಾ ಶಿಫಾ ಮತ್ತು ಆಯಿಷಾ ಹಾಲ್ ಟಿಕೆಟ್ ಪಡೆದುಕೊಳ್ಳಲೇ ಇಲ್ಲ. ಶನಿವಾರ 10:45 ರವರೆಗೆ ಹಾಲ್ ಟಿಕೆಟ್ ಪಡೆಯುವುದಕ್ಕೆ ಅವಕಾಶ ಇತ್ತು. ಇವರು ಮತ್ತೆ ಬಂದು ಹಾಲ್ ಟಿಕೆಟ್ ಪಡೆದು ಹೈಡ್ರಾಮಾ ಮಾಡಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಈ ನಿರೀಕ್ಷೆ ಸುಳ್ಳಾಗಿದೆ. ಮೂವರ ಪೈಕಿ ಇಬ್ಬರು ಹಾಲ್ ಟಿಕೇಟ್ ಪಡೆಯದಿದ್ದರೆ, ಪಡೆದ ಅಲ್ಮಾಸ್ ಕೂಡಾ ಪರೀಕ್ಷಾ ಕೇಂದ್ರಕ್ಕೆ ಬರಲಿಲ್ಲ.

 

ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದ ಶಾಸಕ: ಶಾಸಕ ರಘುಪತಿ ಭಟ್ ನಿನ್ನೆ ಹಿಜಬ್ ಹೋರಾಟಗಾರ್ತಿಯರಿಗೆ ಕಟುವಾದ ಮಾತುಗಳಲ್ಲಿ ಎಚ್ಚರಿಕೆ ನೀಡಿದ್ದರು. ಶನಿವಾರ ಮತ್ತೆ ಪರೀಕ್ಷಾ ಕೇಂದ್ರಕ್ಕೆ ಬಂದು ನಾಟಕ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಹೋರಾಟಗಾರ್ತಿಯರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇವೆ. ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕಾದೀತು ಎಚ್ಚರಿಕೆಯನ್ನು ಕೂಡ ನೀಡಿದ್ದರು. ಇದರ ಪ್ರತಿಫಲವೋ ಏನೋ ಎಂಬಂತೆ, ಶನಿವಾರ ಹಿಜಾಬ್ ಹೋರಾಟಗಾರ್ತಿಯರು ತಮ್ಮ ಕಾಲೇಜು ಅಥವಾ ಪರೀಕ್ಷಾ ಕೇಂದ್ರದತ್ತ ಮುಖ ಮಾಡಿಲ್ಲ.

Udupi ಪರೀಕ್ಷೆ ಬರೆಯಲು ಬಂದ ಹಿಜಾಬ್ ಹೋರಾಟಗಾರ್ತಿಯರ ಹೈಡ್ರಾಮಾ

ದೇಶ ಎತ್ತ ಸಾಗುತ್ತಿದೆ? ಅಲಿಯಾ ಟ್ವೀಟ್: ತನಗೆ ಮತ್ತು ರೇಶಂ ಗೆ ಪರೀಕ್ಷೆ ಬರೆಯಲು ಸಿಬ್ಬಂದಿಗಳು ನಿರಾಕರಿಸಿದ್ದಾರೆ. ನಾವು ಮತ್ತೆ ಮತ್ತೆ ನಿರಾಸೆಗೆ ಒಳಗಾಗುತ್ತಿದ್ದೇವೆ ಎಂದು ಶುಕ್ರವಾರ ರಾತ್ರಿ ಅಲಿಯಾ ಅಸಾದಿ (Aliya Assadi) ಟ್ವೀಟ್ ಮಾಡಿದ್ದಾರೆ. ನಮ್ಮ ಮೇಲೆ ಕ್ರಿಮಿನಲ್ ಕೇಸು, ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಶಾಸಕ ರಘುಪತಿ ಭಟ್ ಬೆದರಿಕೆ ಹಾಕಿದ್ದಾರೆ. ಕ್ರಿಮಿನಲ್ ಕೇಸು ಹಾಕಲು ಇಲ್ಲಿ ಯಾವ ಅಪರಾಧ ನಡೆದಿದೆ.ನ ಮ್ಮ ದೇಶ ಎತ್ತ ಸಾಗುತ್ತಿದೆ? ಎಂದು ಈ ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ