CBSE Merit Scholarship Scheme: ಒಬ್ಬಳೇ ಹೆಣ್ಣು ಮಗಳಾಗಿದ್ದರೆ ಇಂದೇ ಅರ್ಜಿ ಸಲ್ಲಿಸಿ

By Suvarna News  |  First Published Jan 1, 2022, 8:49 PM IST

ಕೇಂದ್ರ ಪ್ರೌಢಶಿಕ್ಷಣ ಮಂಡಳಿ  ಪೋಷಕರಿಗೆ ಒಬ್ಬಳೆ ಹೆಣ್ಣು ಮಗಳಾದ ವಿದ್ಯಾರ್ಥಿಗಳಿಂದ ಮೆರಿಟ್‌ ವಿದ್ಯಾರ್ಥಿ ವೇತನ ಸ್ಕೀಮ್‌ಗೆ ಅರ್ಜಿ ಆಹ್ವಾನಿಸಿದೆ. 2020ರ ವಿದ್ಯಾರ್ಥಿ ವೇತನಕ್ಕೆ ನವೀಕರಣ ಮಾಡಿಕೊಳ್ಳಲು ಅವಕಾಶ ನೀಡಿದೆ.


ಬೆಂಗಳೂರು: ಕೇಂದ್ರ ಪ್ರೌಢಶಿಕ್ಷಣ ಮಂಡಳಿ (Central Board of Secondary Education -CBSE) ಪೋಷಕರಿಗೆ ಒಬ್ಬಳೆ ಹೆಣ್ಣು ಮಗಳಾದ ವಿದ್ಯಾರ್ಥಿಗಳಿಂದ ಮೆರಿಟ್‌ ವಿದ್ಯಾರ್ಥಿ ವೇತನ (Merit Scholarship) ಸ್ಕೀಮ್‌ಗೆ ಅರ್ಜಿ ಆಹ್ವಾನಿಸಿದೆ. ಜೊತೆಗೆ ಹಿಂದಿನ ವರ್ಷ ಅಂದರೆ 2020ರಲ್ಲಿ ಮೆರಿಟ್ ಸ್ಕಾಲರ್‌ಶಿಪ್ ಯೋಜನೆಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸಿರುವವರು ಕೂಡ ನವೀಕರಣ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸಿಬಿಎಸ್‌ಇ ಸಿಂಗಲ್ ಗರ್ಲ್ ಚೈಲ್ಡ್ ಮೆರಿಟ್ (CBSE Merit Scholarship Scheme for Single Girl Child) ವಿದ್ಯಾರ್ಥಿ ವೇತನ ಸ್ಕೀಮ್‌ಗೆ ಬೋರ್ಡ್‌ನ ಅಧಿಕೃತ ವೆಬ್‌ಸೈಟ್ www.cbse.gov.in ಗೆ ಭೇಡಿ ನೀಡಿ ಜನವರಿ 17, 2022 ರೊಳಗೆ ಅರ್ಜಿಯನ್ನು ಸಲ್ಲಿಸಲು ಕೋರಲಾಗಿದೆ. 

ಅರ್ಹತೆಗಳು: ಕೇಂದ್ರ ಪ್ರೌಢಶಿಕ್ಷಣ ಮಂಡಳಿ (CBSE)  ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಯು ಹೆತ್ತವರಿಗೆ ಒಬ್ಬಳೇ ಹೆಣ್ಣು ಮಗುವಾಗಿರಬೇಕು. 10ನೇ ತರಗತಿ ಪಾಸ್‌ ಮಾಡಿ 11 ನೇ ತರಗತಿಯನ್ನು ಸಿಬಿಎಸ್‌ಇ ಸಂಯೋಜಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು. 10ನೇ ತರಗತಿ ಪರೀಕ್ಷೆಯಲ್ಲಿ ಕನಿಷ್ಠ 60% ರಷ್ಟು ಗ್ರೇಡ್ ಪಾಯಿಂಟ್ ಸರಾಸರಿಯನ್ನು ಹೊಂದಿರಬೇಕು. 10 ನೇ ತರಗತಿಯಲ್ಲಿ ಅರ್ಜಿದಾರರ ಬೋಧನಾ ಶುಲ್ಕವು ತಿಂಗಳಿಗೆ ರೂ 1500 ಮೀರಬಾರದು. ವಿದ್ಯಾರ್ಥಿನಿಯು 10 ಮತ್ತು 12 ನೇ ತರಗತಿಗಳಿಗೆ ಸಿಬಿಎಸ್‌ಇ ಶಾಲೆಗೆ ದಾಖಲಾಗಿರಬೇಕು. ಪ್ಲಸ್-2 ಕೋರ್ಸ್‌ಗಳಲ್ಲಿನ ಶಾಲಾ ಶುಲ್ಕವು 10 ನೇ ತರಗತಿಗಿಂತ ಶೇಕಡಾ 10% ಕ್ಕಿಂತ ಹೆಚ್ಚಿರಬಾರದು.

Tap to resize

Latest Videos

undefined

ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ ಜನವರಿ 17 , 2022 ಆಗಿದೆ. ಶಾಲೆಗಳು ಆನ್‌ಲೈನ್‌ ಅರ್ಜಿ ಪರಿಶೀಲನೆ ಮಾಡಲು ಜನವರಿ 25 , 2022 ಕೊನೆಯ ದಿನಾಂಕವಾಗಿದೆ.

UG-PG STUDENTS MATERNITY LEAVE: ರಾಜ್ಯದ UG-PG ವಿದ್ಯಾರ್ಥಿನಿಯರಿಗೆ ಶೀಘ್ರದಲ್ಲೇ ಹೆರಿಗೆ ರಜೆ

ಅರ್ಜಿ ಸಲ್ಲಿಸುವ ವಿಧಾನ:
ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ ವೆಬ್‌ಸೈಟ್‌ cbse.gov.in ಗೆ ಭೇಟಿ ನೀಡಿ, ವಿದ್ಯಾರ್ಥಿ ವೇತನ (Scholarship ) ಲಿಂಕ್‌ ಮೇಲೆ ಕ್ಲಿಕ್ ಮಾಡಿ. ಹೊಸ ಪುಟ ತೆರೆಯುತ್ತದೆ ಅಲ್ಲಿ ವಿದ್ಯಾರ್ಥಿವೇತನದ Fresh Application ಅಥವಾ Renewal ಲಿಂಕ್‌ಗಳ ಮೇಲೆ  ಕ್ಲಿಕ್ ಮಾಡಿ. ಬಳಿಕ ಅಗತ್ಯ ದಾಖಲೆಗಳೊಂದಿಗೆ  ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ.  ಹಾರ್ಡ್ ಕಾಪಿಯನ್ನು ತೆಗೆದು ಇಟ್ಟುಕೊಳ್ಳಿ. ಇಲ್ಲವಾದರೆ ತಮ್ಮ ಶಾಲೆಗಳಲ್ಲಿ ಆಡಳಿತ ಮಂಡಳಿಯವರಿಂದ ಸಹಾಯ ಪಡೆಯುವ ಮೂಲಕ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು.

Improve General Knowledge: ಸ್ಪರ್ಧಾತ್ಮಕ ಪರೀಕ್ಷೆಗೆ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳುವುದು ಹೇಗೆ?

ಸಿಬಿಎಸ್‌ಇ ಸಿಂಗಲ್ ಗರ್ಲ್‌ ಚೈಲ್ಡ್‌ ಸ್ಕಾಲರ್‌ಶಿಪ್‌ ನಲ್ಲಿ ಪ್ರತಿ ವಿದ್ಯಾರ್ಥಿನಿಗೆ ಮಾಸಿಕವಾಗಿ ರೂ.500/-ರೂ ಗಳು ಸಿಗಲಿದೆ.ವಿದ್ಯಾರ್ಥಿವೇತನವು ನೇರವಾಗಿ ವಿದ್ಯಾರ್ಥಿನಿಯ ಬ್ಯಾಂಕ್‌ ಖಾತೆಗೆ ಜಮಾ ಆಗುತ್ತದೆ. ಸಿಬಿಎಸ್‌ಇ ಮೆರಿಟ್‌ ಸ್ಕಾಲರ್‌ಶಿಪ್‌ ನವೀಕರಣಕ್ಕೆ ವಿದ್ಯಾರ್ಥಿನಿಯು 11ನೇ ತರಗತಿಯಲ್ಲಿ ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ವಿದ್ಯಾರ್ಥಿಗಳು ಸಿಬಿಎಸ್‌ಇ ಮೆರಿಟ್‌ ಸ್ಕಾಲರ್‌ಶಿಪ್‌ ಯೋಜನೆ ಕುರಿತು ಹೆಚ್ಚಿನ ಮಾಹಿತಿಯನ್ನು ಅಧಿಕೃತ ವೆಬ್ ತಾಣ cbse.gov.in ಗೆ ಭೇಟಿ ನೀಡಿ ತಿಳಿದುಕೊಳ್ಳಬಹುದು.  ಅರ್ಜಿ ನಮೂನೆಗೆ ಈ ಲಿಂಕ್ ಕ್ಲಿಕ್ ಮಾಡಿ  

BCWD PhD Students Scholarship 2021-22: ಗಮನಿಸಿ, ಪಿಹೆಚ್‌ಡಿ ಫೆಲೋಶಿಪ್‌ ಅರ್ಜಿ ಅವಧಿ ವಿಸ್ತರಣೆ

click me!