UG-PG Students Maternity Leave: ರಾಜ್ಯದ UG-PG ವಿದ್ಯಾರ್ಥಿನಿಯರಿಗೆ ಶೀಘ್ರದಲ್ಲೇ ಹೆರಿಗೆ ರಜೆ

By Suvarna NewsFirst Published Jan 1, 2022, 6:55 PM IST
Highlights

ಕರ್ನಾಟಕದ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ ಓದುತ್ತಿರುವ ವಿದ್ಯಾರ್ಥಿನಿಯರಿಗೆ  ಹೆರಿಗೆ, ಶಿಶುಪಾಲನಾ ರಜೆಯನ್ನು ನೀಡಲು ಆದೇಶ ಹೊರಡಿಸಲಾಗಿದೆ. 

ಬೆಂಗಳೂರು(ಜ.1): ಕರ್ನಾಟಕದ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ ಓದುತ್ತಿರುವ ವಿದ್ಯಾರ್ಥಿನಿಯರಿಗೆ  ಹೆರಿಗೆ (maternity), ಶಿಶುಪಾಲನಾ ರಜೆಯನ್ನು (childcare leave) ನೀಡಲು ಆದೇಶ ಹೊರಡಿಸಲಾಗಿದೆ. ವಿಶ್ವವಿದ್ಯಾಲಯ ಅನುದಾನ ಆಯೋಗ (University Grants Commission – UGC) ಈ ಬಗ್ಗೆ ವಿಶ್ವವಿದ್ಯಾಲಯಗಳಿಗೆ ಸೂಚನೆ  ಹೊರಡಿಸಿದೆ. ಹೀಗಾಗಿ ಕರ್ನಾಟಕದ ಯುಜಿ (under graduate) ಮತ್ತು ಪಿಜಿ (post graduate)ವಿದ್ಯಾರ್ಥಿನಿಯರಿಗೆ ಶೀಘ್ರದಲ್ಲೇ ಹೆರಿಗೆ/ಶಿಶುಪಾಲನಾ ರಜೆ ಸೌಲಭ್ಯಗಳನ್ನು ಪಡೆಯಲು ಅನುವು ಮಾಡಿಕೊಡಲಾಗುತ್ತಿದೆ. ಯುಪಿ ಹಾಗೂ ಪಿಜಿ ಹಂತಗಳಲ್ಲೂ ಮಹಿಳೆಯರಿಗೆ ಮಾತೃತ್ವ ರಜೆಯ ಸೌಕರ್ಯಗಳನ್ನು ವಿಸ್ತರಿಸಲು ಮಾರ್ಗಸೂಚಿಗಳನ್ನು ರೂಪಿಸುವಂತೆ ಯುಜಿಸಿ ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡಿದ ಬಳಿಕ ಇದಕ್ಕೆ ಉನ್ನತ ಶಿಕ್ಷಣ ಇಲಾಖೆ ಕೂಡ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದೆ.

ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆಯು ( Higher Education Department ) ಮಾಹಿತಿ ನೀಡಿದ್ದು, ಯುಜಿ ಮತ್ತು ಪಿಜಿ ಮಟ್ಟದಲ್ಲಿ  ( UG and PG level) ಹೆರಿಗೆ, ಶಿಶುಪಾಲನಾ ರಜೆ ಸೌಲಭ್ಯಗಳನ್ನು ನೀಡುವಂತೆ ಯುಜಿಸಿ ವಿಶ್ವವಿದ್ಯಾಲಯಗಳಿಗೆ ಮಾರ್ಗಸೂಚಿ ರೂಪಿಸಿ ಸೂಚನೆ ನೀಡಿದೆ. ಈ ಕ್ರಮವಾಗಿ ರಾಜ್ಯದಲ್ಲಿ ಯುಜಿ, ಪಿಜಿ ಓದುತ್ತಿರುವಂತ ವಿದ್ಯಾರ್ಥಿನಿಯರಿಗೆ ಹೆರಿಗೆ, ಶಿಶುಪಾಲನಾ ರಜೆ ನೀಡಲಾಗುತ್ತದೆ. ಇದರಿಂದಾಗಿ ಮಹಿಳಾ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಮುಂದುವರೆಸಲು ಅನುಕೂಲ ಆಗಲಿದೆ ಎಂದು ಹೇಳಿದೆ.

ಡಿಸೆಂಬರ್ 14, 2021ರಂದು ಈ ಸಂಬಂಧ ಯುಜಿಸಿ ಸುತ್ತೋಲೆ ಹೊರಡಿಸಿ, ಎಂ.ಫಿಲ್/ಪಿಎಚ್.ಡಿ ಸೇರಿದಂತೆ ಯುಜಿ, ಪಿಜಿ ಓದುತ್ತಿರುವಂತ ವಿದ್ಯಾರ್ಥಿನಿಯರು ತಮ್ಮ ಓದಿನ ಸಂಪೂರ್ಣ ಅವಧಿಯಲ್ಲಿ ಒಮ್ಮೆ ಹೆರಿಗೆ ರಜೆ/ಮಕ್ಕಳ ಆರೈಕೆ ರಜೆಯನ್ನು 240 ದಿನಗಳವರೆಗೆ ಒದಗಿಸಬಹುದು ಎಂದು ಹೇಳಿತ್ತು.

IMPROVE GENERAL KNOWLEDGE: ಸ್ಪರ್ಧಾತ್ಮಕ ಪರೀಕ್ಷೆಗೆ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳುವುದು ಹೇಗೆ?

ಈ ರೀತಿಯ ಒಂದು ಸೌಲಭ್ಯವನ್ನು ಒದಗಿಸುವುದರಿಂದ ಮಹಿಳಾ ವಿದ್ಯಾರ್ಥಿನಿಯರು ಉನ್ನತ ವ್ಯಾಸಂಗವನ್ನು ಮಾಡಲು ಇಚ್ಛಿಸುತ್ತಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ತಿಳಿಸಿದೆ. 

ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ತಮ್ಮ ತಮ್ಮ ಸಂಸ್ಥೆಗಳು/ ಅಂಗೀಕೃತ ಕಾಲೇಜುಗಳಲ್ಲಿ ದಾಖಲಾದ ಮಹಿಳಾ ವಿದ್ಯಾರ್ಥಿಗಳಿಗೆ ಹೆರಿಗೆ ರಜೆ ನೀಡುವ ಬಗ್ಗೆ ಸೂಕ್ತ ನಿಯಮಗಳು/ ನಿಯಮಗಳನ್ನು ರೂಪಿಸಬೇಕು ಮತ್ತು ಹಾಜರಾತಿಗೆ ಸಂಬಂಧಿಸಿದ ಎಲ್ಲಾ ಸಡಿಲಿಕೆಗಳು/ವಿನಾಯಿತಿಗಳನ್ನು ಒದಗಿಸಬೇಕು” ಎಂದು ಸುತ್ತೋಲೆಯಲ್ಲಿ ಕೋರಲಾಗಿತ್ತು.

BCWD PhD Students Scholarship 2021-22: ಗಮನಿಸಿ, ಪಿಹೆಚ್‌ಡಿ ಫೆಲೋಶಿಪ್‌ ಅರ್ಜಿ ಅವಧಿ ವಿಸ್ತರಣೆ

ಈ ಸುತ್ತೋಲೆಯ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ನಡೆಸುವ ಎಲ್ಲಾ ವಿಶ್ವವಿದ್ಯಾಲಯಗಳ ಉಪಕುಲಪತಿಗಳನ್ನು ತನ್ನ ಸದಸ್ಯರನ್ನಾಗಿ ಹೊಂದಿರುವ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಮುಂದಿನ ಸಭೆಯಲ್ಲಿ ಇಲಾಖೆ ಈ ಬಗ್ಗೆ ಚರ್ಚಿಸಲಿದೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ (ವಿಟಿಯು) ಉಪಕುಲಪತಿ ಪ್ರೊ.ಕರಿಸಿದ್ದಪ್ಪ ಮಾತನಾಡಿ, ಈ ಕ್ರಮವು ಮಹಿಳಾ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣವನ್ನು ಮುಂದುವರಿಸಲು ಉತ್ತೇಜಿಸುತ್ತದೆ. NEP(National Education Policy) ಯೊಂದಿಗೆ ಲಭ್ಯವಿರುವ ಆಯ್ಕೆಗಳು ಮತ್ತು ನಿರ್ಗಮನಗಳ ಅನುಷ್ಠಾನವನ್ನು ಸುಲಭಗೊಳಿಸುತ್ತದೆ" ಎಂದು  ಹೇಳಿದ್ದಾರೆ. 

Career Prediction 2022: ಹೊಸ ವರ್ಷದಲ್ಲಿ ಯಾವ ರಾಶಿಗೆ ಉದ್ಯೋಗದಲ್ಲಿ ಏಳ್ಗೆ?

ರಾಜ್ಯ ಸರ್ಕಾರಿ ಕಾಲೇಜು ಶಿಕ್ಷಕರ ಸಂಘವು ವಿಶ್ವವಿದ್ಯಾಲಯ ಅನುದಾನ ಆಯೋಗಸ ಈ ಕ್ರಮವನ್ನು ಸ್ವಾಗತಿಸಿದ್ದು, ಸಂಘದ ಅಧ್ಯಕ್ಷ ಟಿ.ಎಂ.ಮಂಜುನಾಥ್ ಮಾತನಾಡಿ, ‘ಮಹಿಳಾ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಮುಂದುವರಿಸಲು ಖಂಡಿತ ಇದು ಸಹಕಾರಿ’ ಎಂದಿದ್ದಾರೆ.

click me!