ನವದೆಹಲಿ(ಜು.29): ವಿದ್ಯಾರ್ಥಿಗಳಿಗೆ ವೈಜ್ಞಾನಿಕ ರೀತಿಯಲ್ಲಿ ಶಿಕ್ಷಣ, ಪರೀಕ್ಷಾ ಭಯದಿಂದ ಮುಕ್ತಿ, ಹೊಸ ಹೊಸ ಸಂಶೋಧನೆ, ವಿದ್ಯಾರ್ಥಿಗಳ ಕಲಿಕೆ ಹಾಗೂ ಜ್ಞಾನದ ಮಟ್ಟವನ್ನು ಹೆಚ್ಚಿಸಲು ಹೊಸ ಶಿಕ್ಷಣ ನೀತಿ ನೆರವಾಗಲಿದೆ. ಈ ನೀತಿಯಿಂದ ಭಾರತದ ಭಾಗ್ಯ ಬದಲಾಗಲಿದೆ. ಈ ಹಿಂದೆ ಭಾರತೀಯರು ಉತ್ತಮ ಶಿಕ್ಷಣಕ್ಕೆ ವಿದೇಶಕ್ಕೆ ಹೊಗಬೇಕಿತ್ತು. ಇದೀಗ ವಿದೇಶಿಗರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಇದು ನಿಜವಾದ ಬದಲಾವಣೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವೈದ್ಯಕೀಯ ಶಿಕ್ಷಣದಲ್ಲಿ ಐತಿಹಾಸಿಕ ನಿರ್ಧಾರ; OBCಗೆ ಶೇ. 27, ಆರ್ಥಿಕ ದುರ್ಬಲರಿಗೆ ಶೇ.10 ಮೀಸಲಾತಿ!
ರಾಷ್ಟ್ರೀಯ ಶಿಕ್ಷಣ ನೀತಿ-2020 ರ ಸುಧಾರಣೆಗಳ ಜಾರಿಯ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಮೋದಿ ದೇಶಾದ್ಯಂತ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ನೀತಿ ನಿರೂಪಕರು, ವಿದ್ಯಾರ್ಥಿಗಳು, ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದರು. ವರ್ಚವಲ್ ಸಭೆಯಲ್ಲಿ ಪ್ರಧಾನಿ ಮೋದಿ ಹಲವು ಯೋಜನೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಮೋದಿ, ದೇಶದಲ್ಲಿ ಹೊಸ ಶಿಕ್ಷಣ ನೀತಿಯಿಂದಾದ ಬದಲಾವಣೆ ಹಾಗೂ ಹೊಸ ಯೋಜನೆಗಳ ಕುರಿತು ಮಾಹಿತಿ ನೀಡಿದರು.
Addressing a programme to mark a year of the National Education Policy. https://t.co/65x9i0B0g1
— Narendra Modi (@narendramodi)ರಾಷ್ಟ್ರೀಯ ಶಿಕ್ಷಣ ನೀತಿ ಒಂದು ವರ್ಷ ಪೂರೈಸಿದ ಸಂಭ್ರಮದಲ್ಲಿ ಎಲ್ಲರಿಗೂ ವಿಶೇಷವಾಗಿ ವಿದ್ಯಾರ್ಥಿಗಳಿಗೂ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ. ಕೊರೋನಾ ಕಾರಣ ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಹೊಡೆತ ನೀಡಿತು. ಕಳೆದ ವರ್ಷ ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ನಮ್ಮ ದೇಶ 75ನೇ ಸ್ವಾತಂತ್ರ್ಯ ದಿನಾಚರಣೆ ತಯಾರಿಯಲ್ಲಿದ್ದೇವೆ. ಇಂತಹ ಶುಭ ಸಂದರ್ಭದಲ್ಲಿ ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮತ್ತಷ್ಟು ಹೊಸ ಯೋಜನೆಗಳನ್ನು ಪ್ರಕಟಿಸುತ್ತಿರುವುದು ನನ್ನ ಸಂತಸವನ್ನು ಮತ್ತಷ್ಟು ಹೆಚ್ಚಿಸಿದೆ. ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಸಂದರ್ಭದಲ್ಲಿ ಹೊಸ ಶಿಕ್ಷಣ ನೀತಿ ಅತ್ಯಂತ ಪ್ರಮುಖ ಹಾಗೂ ಸ್ಮರಣೀಯವಾಗಿದೆ.
ಕೊರೋನಾ ಎಫೆಕ್ಟ್: ಸರ್ಕಾರಿ ಶಾಲೆಗಳತ್ತ ಪಾಲಕರ ಚಿತ್ತ
ದೇಶದ ಮೂಲೆ ಮೂಲೆಯಿಂದ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು ನಮ್ಮ ಜೊತೆಗಿದ್ದಾರೆ. ನಮ್ಮ ಯುವ ಶಕ್ತಿ, ವಿದ್ಯಾರ್ಥಿಗಳು ಹೊಸ ಬದಲಾಣೆಯನ್ನು, ಸವಾಲುಗಳನ್ನು ಅಷ್ಟೇ ಸಮರ್ಥವಾಗಿ ಸ್ವೀಕರಿಸಲು ಹಾಗೂ ಎದುರಿಸಲು ಸಿದ್ದರಿದ್ದಾರೆ. ಕೊರೋನಾ ಕಾರಣ ಶಿಕ್ಷಣದಲ್ಲಿ ಮಹತ್ತರ ಬದಲಾವಣೆಗಳಾಗಿದೆ. ಆನ್‌ಲೈನ್ ತರಗತಿ ಸೇರಿದಂತೆ ಹಲವು ಸವಾಲುಗಳು ಎದುರಾಗಿತ್ತು. ಇವೆಲ್ಲವನ್ನು ವಿದ್ಯಾರ್ಥಿಗಳು ಯಶಸ್ವಿಯಾಗಿ ಎದುರಿಸಿದ್ದಾರೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯರ ಸಾಧನೆ ಹೊಗಳಿದ ಮೋದಿ:
ಹಳ್ಳಿಯ ಯುವ ಶಕ್ತಿಗಳು ಒಲಿಂಪಿಕ್ಸ್ ಸೇರಿದಂತೆ ಹಲವು ಕ್ಷೇತ್ರದಲ್ಲಿ ಭಾರತದ ಕೀರ್ತಿಯನ್ನು ವಿಶ್ವಕ್ಕೆ ಸಾರುತ್ತಿದ್ದಾರೆ. ನಮ್ಮ ವಿದ್ಯಾರ್ಥಿಗಳು ಆಧುನೀಕರಣ ಶಿಕ್ಷಣದಿಂದ ಅವರ ಇಷ್ಟದ ಕಾರ್ಯಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತಿದೆ. ಈ ಹಿಂದೆ ಇದ್ದ ತೊಡಕುಗಳು ನೂತನ ಶಿಕ್ಷಣ ನೀತಿಯಿಂದ ದೂರವಾಗಿದೆ ಎಂದು ಮೋದಿ ಹೇಳಿದರು.
ಇದೇ ಯುವ ಶಕ್ತಿ ಭಾರತದ ಸ್ಟಾರ್ಟ್ ಅಪ್, ಡಿಜಿಟಲ್ ಇಂಡಿಯಾಗೆ ಮತ್ತಷ್ಟು ವೇಗ ನೀಡಿದ್ದಾರೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಯುವಕರಲ್ಲಿ ಮತ್ತಷ್ಟು ಆತ್ಮವಿಶ್ವಾಸ ತುಂಬುತ್ತಿದೆ. ಅವರ ಇಷ್ಟದ, ಆಸಕ್ತಿಯ ಕಾರ್ಯಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ನೆರವಾಗುತ್ತಿದೆ. ಇಷ್ಟೇ ಅಲ್ಲ ಈ ಯುವ ಶಕ್ತಿ ಅಥವಾ ವಿದ್ಯಾರ್ಥಿಗಳ ಹಿಂದೆ ನಾವಿದ್ದೇವೆ. ಅವರಿಗೆ ಬೆಂಬಲ ಪ್ರೋತ್ಸಾಹ ಸಿಗಲಿದೆ ಎಂದು ಮೋದಿ ಹೇಳಿದ್ದಾರೆ.
ಭಾರತೀಯರು ವಿದೇಶಕ್ಕಲ್ಲ, ವಿದೇಶಿಯರು ಭಾರತಕ್ಕೆ ಆಗಮನ:
ವಿದ್ಯಾರ್ಥಿಗಳಿಗೆ ವೈಜ್ಞಾನಿಕ ರೀತಿಯಲ್ಲಿ ಶಿಕ್ಷಣ, ಪರೀಕ್ಷಾ ಭಯದಿಂದ ಮುಕ್ತಿ, ಹೊಸ ಹೊಸ ಸಂಶೋಧನೆ, ವಿದ್ಯಾರ್ಥಿಗಳ ಕಲಿಕೆ ಹಾಗೂ ಜ್ಞಾನದ ಮಟ್ಟವನ್ನು ಹೆಚ್ಚಿಸಲು ಹೊಸ ಶಿಕ್ಷಣ ನೀತಿ ನೆರವಾಗಲಿದೆ. ಈ ನೀತಿಯಿಂದ ಭಾರತದ ಭಾಗ್ಯ ಬದಲಾಗಲಿದೆ. ಈ ಹಿಂದೆ ಭಾರತೀಯರು ಉತ್ತಮ ಶಿಕ್ಷಣಕ್ಕೆ ವಿದೇಶಕ್ಕೆ ಹೊಗಬೇಕಿತ್ತು. ಇದೀಗ ವಿದೇಶಿಗರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಇದು ನಿಜವಾದ ಬದಲಾವಣೆ ಎಂದು ಮೋದಿ ಹೇಳಿದ್ದಾರೆ.
ಮಾತೃ ಭಾಷೆಯಲ್ಲಿ ಶಿಕ್ಷಣ:
ಸ್ಕಿಲ್ ಡೆವಲಪ್‌ಮೆಂಟ್ ಯೋಜನೆ ಅಡಿ ವಿದ್ಯಾರ್ಥಿಗಳು ತಮಗಿಷ್ಟವಾದ ಕೋರ್ಸ್ ಆಯ್ಕೆ ಮಾಡಿಕೊಂಡು ಕೌಶಲ್ಯ ಹೆಚ್ಚಿಸಲು ಸಾಧ್ಯವಿದೆ. ಶಿಕ್ಷಣದಲ್ಲಿ ಮಹತ್ಮಾ ಗಾಂಧಿ ಮಹತ್ವದ ಸೂಚನೆ ನೀಡಿದ್ದರು. ವಿದ್ಯಾರ್ಥಿಗಳಿಗೆ ತಮ್ಮ ತಮ್ಮ ಭಾಷೆಗಳಲ್ಲಿ ಕಲಿಕೆ ನೀಡಬೇಕು. ಇಲ್ಲೀವರೆಗೆ ಪ್ರಾಥಮಿಕ ಶಿಕ್ಷಣ, ಪ್ರೌಢ ಸೇರಿದಂತೆ ಹಲವು ಶಿಕ್ಷಣಗಳು ಸ್ಥಳೀಯ ಭಾಷೆಗಳಲ್ಲಿ ಲಭ್ಯವಿತ್ತು. ಇದೀಗ ಎಂಜನೀಯರಿಂಗ್ ಸೇರಿದಂತೆ ಉನ್ನತ ಶಿಕ್ಷಣ ಕೂಡ ಮಾತೃಭಾಷೆಯಲ್ಲಿ ಲಭ್ಯವಿದೆ ಎಂದು ಮೋದಿ ಹೇಳಿದರು.
ಹಿಂದೂಳಿದ ವಿಭಾಗದ ಮಕ್ಕಳು ಭಾಷೆಯ ಕಾರಣದಿಂದ ಹಲವು ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಇದೀಗ ಈ ಸಮಸ್ಯೆ ನಿವಾರಣೆಯಾಗಿದೆ. ತಮ್ಮ ಮಾತೃಭಾಷೆಯಲ್ಲಿ ಯಾವುದೇ ಶಿಕ್ಷಣ ಪಡೆಯಲು ರಾಷ್ಟ್ರೀಯ ಶಿಕ್ಷಣ ನೀತಿ ನೆರವಾಗುತ್ತದೆ. ಹೊಸ ಶಿಕ್ಷಣ ನೀತಿಯ ಹೊಸ ಹೊಸ ಯೋಜನೆಗಳು ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ನೀಡಲಿದೆ. ಇದರಿಂದ ಭಾರತದ ಭವಿಷ್ಯ ಉಜ್ವಲವಾಗಲಿದೆ ಎಂದು ಮೋದಿ ಹೇಳಿದರು.
ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ ಯೋಜನೆ
ಮೋದಿ ಭಾಷಣಕ್ಕೂ ಮೊದಲು ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಮೋದಿ, ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ ಯೋಜನೆಗೆ ಚಾಲನೆ ನೀಡಿದ್ದಾರೆ. ಈ ಯೋಜನೆಯಿಂದ ಉನ್ನತ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳಿಗೆ ಹಲವು ಹಂತದ ಪ್ರವೇಶ ಮತ್ತು ನಿರ್ಗಮನದ ಆಯ್ಕೆಗಳನ್ನು ಒದಗಿಸುತ್ತದೆ. ಇನ್ನು ಪ್ರಾದೇಶಿ ಭಾಷೆಯಲ್ಲಿ ಎಂಜಿನಿಯರಿಂಗ್ ಕಾರ್ಯಕ್ರಮ ಹಾಗೂ ಉನ್ನತ ಶಿಕ್ಷಣದಲ್ಲಿ ಅಂತಾರಾಷ್ಟ್ರೀಯ ಕ್ಷೇತ್ರದ ಮಾರ್ಗಸೂಚಿಗಳನ್ನು ಪ್ರಕಟಿಸಿದರು.
ವಿದ್ಯಾಪ್ರವೇಶ ಯೋಜನೆ:
ವಿದ್ಯಾರ್ಥಿಗಳಿಗೆ 3 ತಿಂಗಳ ನಾಟಕ ಆಧಾರಿಕ ಶಾಲಾ ತಯಾರಿ ಮಾದರಿ ವಿದ್ಯಾಪ್ರವೇಶ ಯೋಜನೆಗೂ ಪ್ರಧಾನಿ ಚಾಲನೆ ನೀಡಿದ್ದಾರೆ. ಇದೇ ವೇಳೆ ಮಾಧ್ಯಮಿಕ ಹಂತದಲ್ಲಿ ಭಾರತೀಯ ಸಂಕೇತ ಭಾಷೆ, ಎನ್.ಸಿ.ಇ.ಆರ್.ಟಿ. ವಿನ್ಯಾಸಗೊಳಿಸಿರುವ ಸಮಗ್ರ ತರಬೇತಿ ಕಾರ್ಯಕ್ರಮ, ನಿಶಾಂತ 2.0, ಸಫಲ್ ( ಸ್ಟ್ರಕ್ಚರ್ ಅಸೆಸ್ ಮೆಂಟ್ ಫಾರ್ ಅನಲೈಜಿಂಗ್ ಲರ್ನಿಂಗ್ ಲೆವೆಲ್ಸ್), CBSC ಶಾಲೆಗಳಲ್ಲಿ 3, 5 ಮತ್ತು 8 ನೇ ತರಗತಿಗಳಲ್ಲಿ ಸಾಮರ್ಥ್ಯ ಆಧಾರಿತ ಮೌಲ್ಯಮಾಪನ ಚೌಕಟ್ಟು ಮತ್ತು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಗಾಗಿ ಮೀಸಲಾದ ವೆಬ್ ಸೈಟ್‌ನ್ನು ಮೋದಿ ಬಿಡುಗಡೆ ಮಾಡಿದರು.
NDEAR ಮತ್ತು NETF ಉದ್ಘಾಟನೆ
ಕಾರ್ಯಕ್ರಮದಲ್ಲಿ ನ್ಯಾಷನಲ್ ಡಿಟಿಟಲ್ ಎಜುಕೇಷನ್ ಆರ್ಕಿಟೆಕ್ಚರ್(NDEAR)ಮತ್ತು ನ್ಯಾಷನಲ್ ಎಜುಕೇಷನ್ ಟೆಕ್ನಾಲಜಿ ಪೋರಂ(NETF) ಉದ್ಘಾಟನೆ ಮಾಡಿದರು. ಈ ಯೋಜನೆ ರಾಷ್ಟ್ರೀಯ ಶಿಕ್ಷಣ ನೀತಿ -2020 ರ ಗುರಿ ಸಾಕಾರಕ್ಕೆ ಮಹತ್ವದ ಹೆಜ್ಜೆಯಾಗಿದೆ. ಶಿಕ್ಷಣ ಕ್ಷೇತ್ರವನ್ನು ಹೆಚ್ಚು ಸ್ಪಂದನೀಯವಾಗಿಸುವ ಜತೆಗೆ ಕೈಗೆಟುವಂತೆ ಮಾಡುತ್ತದೆ.
21ನೇ ಶತಮಾನ ಅಗತ್ಯಕ್ಕೆ ಹೊಸ ಶಿಕ್ಷಣ ನೀತಿ ನೆರವು
ಇದು 21 ನೇ ಶತಮಾನದ ಮೊದಲ ಶಿಕ್ಷಣ ನೀತಿಯಾಗಿದೆ ಮತ್ತು 1986 ರ ಶಿಕ್ಷಣ ನೀತಿಯನ್ನು (34 ವರ್ಷದ ಹಳೆಯ ರಾಷ್ಟ್ರೀಯ ಶಿಕ್ಷಣ ನೀತಿ) ಬದಲಿಸಲಿದೆ. ಉಜ್ವಲ ಜ್ಞಾನ ಸಮಾಜವನ್ನಾಗಿ ಭಾರತವನ್ನು ಬದಲಿಸುವ ಗುರಿ ಹೊಂದಲಾಗಿದೆ. ಶಾಲೆ ಮತ್ತು ಕಾಲೇಜು ಶಿಕ್ಷಣವನ್ನು ಹೆಚ್ಚು ಸಮಗ್ರ, ಹೊಂದಿಕೊಳ್ಳುವಂತೆ, ಬಹುಶಿಸ್ತಿನ ಜಾಗತಿಕ ಜ್ಞಾನದ ಮಹಾಶಕ್ತಿಯನ್ನಾಗಿ ರೂಪಿಸುವ ಗುರಿ ಹೊಂದಲಾಗಿದ್ದು, 21 ನೇ ಶತಮಾನದ ಅಗತ್ಯಗಳಿಗೆ ಇದು ಸೂಕ್ತವಾಗಲಿದೆ. ಎಂದು ಮೋದಿ ಹೇಳಿದರು.