CBSE 10th Result : ಸಿಬಿಎಸ್ಇ 10ನೇ ತರಗತಿ ಫಲಿತಾಂಶವೂ ಪ್ರಕಟ, ಶೇ. 94.40 ವಿದ್ಯಾರ್ಥಿಗಳು ಉತ್ತೀರ್ಣ

Published : Jul 22, 2022, 02:40 PM ISTUpdated : Jul 22, 2022, 03:08 PM IST
CBSE 10th Result : ಸಿಬಿಎಸ್ಇ 10ನೇ ತರಗತಿ ಫಲಿತಾಂಶವೂ ಪ್ರಕಟ, ಶೇ. 94.40 ವಿದ್ಯಾರ್ಥಿಗಳು ಉತ್ತೀರ್ಣ

ಸಾರಾಂಶ

CBSE ಕ್ಲಾಸ್ 10 ಟರ್ಮ್ 2 ಫಲಿತಾಂಶ 2022 ಘೋಷಿಸಲಾಗಿದೆ. ಈ ಕೆಳಕಂಡ ವೆಬ್‌ಸೈಟ್‌ಗಳ ಮೂಲಕ ವಿದ್ಯಾರ್ಥಿಗಳು 10ನೇ ತಗತಿ ಫಲಿತಾಂಶವನ್ನು ವೀಕ್ಷಿಸಬಹುದು. ಬೆಳಗ್ಗೆ 10 ಗಂಟೆಯ ವೇಳೆಗೆ 12ನೇ ತರಗತಿ ಫಲಿತಾಂಶ ಪ್ರಕಸಿಟಿಸಿದ್ದ ಸಿಬಿಎಸ್ಇ, 2 ಗಂಟೆಯ ವೇಳೆಗೆ 10ನೇ ತರಗತಿಯ ಫಲಿತಾಂಶವನ್ನೂ ಘೋಷಣೆ ಮಾಡಿದೆ.

ನವದೆಹಲಿ (ಜುಲೈ 22): ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್  2022 ನೇ ತರಗತಿಯ 10 ಬೋರ್ಡ್ ಪರೀಕ್ಷೆಯ ಟರ್ಮ್‌ 2 ಮತ್ತು ಅಂತಿಮ ಫಲಿತಾಂಶಗಳನ್ನು ಪ್ರಕಟಿಸಿದೆ. ಸಿಬಿಎಸ್ಇ ರಿಸಲ್ಟ್‌ ಸಿಬಿಎಸ್ಇ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿವೆ, ಅಲ್ಲಿ ವಿದ್ಯಾರ್ಥಿಗಳು ತಮ್ಮ ರೋಲ್‌ ನಂಬರ್ ಹಾಗೂ ಶಾಲಾ ಕೋಡ್‌ನೊಂದಿಗೆ ಅಂಕಪಟ್ಟಿಗಳನ್ನು ವೀಕ್ಷಣೆ ಮಾಡಬಹುದು. ಸಿಬಿಎಸ್ಇ 10ನೇ ತರಗತಿಯ ಫಲಿತಾಂಶದಲ್ಲಿ ಒಟ್ಟಾರೆ ಉತ್ತೀರ್ಣ ಶೇಕಡಾ 94.40 ಆಗಿದೆ. 10ನೇ ತರಗತಿ ಫಲಿತಾಂಶದಲ್ಲೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಒಟ್ಟಾರೆಯಾಗಿ ಶೇ 95.21ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದರೆ, ಶೇ. 93.80ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ. ತೃತೀಯ ಲಿಂಗಿಗಳ ಪೈಕಿ ಶೇ.90 ಮಂದಿ ಪಾಸ್‌ ಆಗಿದ್ದಾರೆ. 12ನೇ ತರಗತಿ ಫಲಿತಾಂಶದಂತೆ 10ನೇ ತರಗತಿಯಲ್ಲೂ ಪ್ರದೇಶವಾರು ಲೆಕ್ಕಾಚಾರದಲ್ಲಿ ತಿರುವನಂತಪುರ ಅಗ್ರಸ್ಥಾನ ಪಡೆದುಕೊಂಡಿದೆ. ಇಲ್ಲಿನ ಶೇ. 99,68ರಷ್ಟು ಮಕ್ಕಳು ಉತ್ತೀರ್ಣರಾಗಿದ್ದರೆ, ಗುವಾಹಟಿ ಅತ್ಯಂತ ಕೆಳ ಸ್ಥಾನದಲ್ಲಿದ್ದು ಶೇ. 82.23ರಷ್ಟು ಪಾಸ್‌ ಪರ್ಸಂಟೇಜ್‌ ಪಡೆದುಕೊಂಡಿದೆ.ಪರೀಕ್ಷೆಗೆ ಒಟ್ಟಾರೆ 21, 09, 208 ಮಂದಿ ನೋಂದಣಿ ಮಾಡಿಕೊಂಡಿದ್ದರೆ, 20,93,978 ಮಂದಿ ಪರೀಕ್ಷೆ ಬರೆದಿದ್ದರು. ಇವರ ಪೈಕಿ, 19,76, 668 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಸಿಬಿಎಸ್‌ಇ ಟರ್ಮ್‌ 2 ಫಲಿತಾಂಶಕ್ಕಾಗಿ ಈ ವೆಬ್‌ಸೈಟ್‌ಗಳನ್ನು ಪರಿಶೀಲಿಸಬಹುದು: cbseresults.nic.in, results.gov.in ಹಾಗೂ digilocker.gov.in ಮೂಲಕ ಫಲಿತಾಂಶವನ್ನು ವೀಕ್ಷಿಸಬಹುದು. ಅದರೊಂದಿಗೆ ವಿದ್ಯಾರ್ಥಿಗಳು ಡಿಜಿಲಾಕರ್‌ ಹಾಗೂ ಉಮಂಗ್‌ ಆಪ್‌ ಬಳಸಿಯೂ ಫಲಿತಾಂಶವನ್ನು ತಿಳಿಯಬಹುದು.

ಬೆಂಗಳೂರಿನಲ್ಲಿ ಶೇ.99.22ರಷ್ಟು ಫಲಿತಾಂಶ: ಪ್ರಾದೇಶಿಕವಾರು ಫಲಿತಾಂಶದ ಲೆಕ್ಕಾಚಾರದಲ್ಲಿ ತಿರುವನಂತಪುರ ಶೇ. 99.68 ಫಲಿತಾಂಶದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಬೆಂಗಳೂರು 2ನೇ ಸ್ಥಾನದಲ್ಲಿದ್ದು ಶೇ. 99.22ರಷ್ಟು ಫಲಿತಾಂಶ ದಾಖಲಾಗಿದೆ. ಉಳಿದಂತೆ, ಚೆನ್ನೈ: 98.97%; ಅಜ್ಮೀರ್: 98.14%; ಪಾಟ್ನಾ: 97.65%; ಪುಣೆ: 97.41%; ಭುವನೇಶ್ವರ: 96.46%; ಪಂಚಕುಲ: 96.33%; ನೋಯ್ಡಾ: 96.08%; ಚಂಡೀಗಢ: 95.38%; ಪ್ರಯಾಗರಾಜ್: 94.74%, ಡೆಹ್ರಾಡೂನ್: 93.43%; ಭೋಪಾಲ್: 93.33%; ದೆಹಲಿ ಪೂರ್ವ: 86.96%; ದೆಹಲಿ ಪಶ್ಚಿಮ: 85.94% ಹಾಗೂ ಗುವಾಹಟಿ: 82.23% ನಂತರದ ಸ್ಥಾನಗಳಲ್ಲಿವೆ.

10ನೇ ತರಗತಿಯಲ್ಲೂ ನವೋದಯ ವಿದ್ಯಾಲಯ ಬೆಸ್ಟ್‌: ಇನ್ನು ಶಾಲಾವಾರು ಫಲಿತಾಂಶದ ಪೈಕಿ, 12ನೇ ತರಗತಿ ಫಲಿತಾಂಶದಂತೆ 10ನೇ ತರಗತಿಯನ್ನೂ ಜವಾಹರ್‌ ನವೋದಯ ವಿದ್ಯಾಲಯ ಅತ್ಯುತ್ತಮ ಪಾಸ್‌ ಪರ್ಸಂಟೇಜ್‌ ಸಾಧನೆ ಮಾಡಿದೆ. ಜೆಎನ್‌ವಿಯಲ್ಲಿ ಶೇ. 99.71ರಷ್ಟು ಮಕ್ಕಳು ಉತ್ತೀರ್ಣರಾಗಿದ್ದರೆ, ಇಂಡಿಪೆಂಡೆಂಟ್‌ ಶಾಲೆಗಗಳಲ್ಲಿ ಶೇ. 96.86, ಕೇಂದ್ರೀಯ ವಿದ್ಯಾಲಯಗಳಲ್ಲಿ ಶೇ.96.61, ಸಿಟಿಎಸ್ಎಗಳಲ್ಲಿ ಶೇ.91.27, ಸರ್ಕಾರಿ ಶಾಲೆಗಳಲ್ಲಿ ಶೇ.80.68  ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಶೇ.76.73ರಷ್ಟು ಫಲಿತಾಂಶ ದಾಖಲಾಗಿದೆ.

CBSE Result 2022: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ, ಬಾಲಕಿಯರೇ ಮೇಲುಗೈ

ಸಿಬಿಎಸ್ಇ  ಕ್ಲಾಸ್ 10 ಟರ್ಮ್ 2 ಫಲಿತಾಂಶ 2022 ಅನ್ನು ಪರಿಶೀಲನೆ ಮಾಡುವುದು ಹೇಗೆ:
- ಸಿಬಿಎಸ್ಇ ಫಲಿತಾಂಶ ಪೋರ್ಟಲ್‌ಗೆ  cbseresults.nic.in ಹೋಗಿ
- ಮುಖಪುಟದಲ್ಲಿ, ಸಿಬಿಎಸ್‌ಇ ತರಗತಿ 10 ಅಥವಾ 12 ನೇ ತರಗತಿ ಫಲಿತಾಂಶಗಳಿಗಾಗಿ ಲಿಂಕ್ ಅನ್ನು ಹುಡುಕಿ ಮತ್ತು ಕ್ಲಿಕ್ ಮಾಡಿ.
- ನಿಮ್ಮ ರೋಲ್ ಸಂಖ್ಯೆ ಮತ್ತು ಶಾಲೆಯ ಕೋಡ್ ಅನ್ನು ನಮೂದಿಸಿ 
- ಕ್ಲಿಕ್‌ ಮಾಡಿದ ಬಳಿಕ ನಿಮ್ಮ ಅಂಕಪಟ್ಟಿ ಪ್ರಕಟವಾಗುತ್ತದೆ.

Karnataka Live Updates: CBSE 10ನೇ ತರಗತಿ ಫಲಿತಾಂಶ ಪ್ರಕಟ, ರಿಸಲ್ಟ್‌ ಹೀಗೆ ನೋಡಿ

ಸಿಬಿಎಸ್ಇ 10ನೇ ತರಗತಿಯ ಟರ್ಮ್ 2 ಪರೀಕ್ಷೆಗಳು ಏಪ್ರಿಲ್ 26 ರಿಂದ ಮೇ 24 ರವರೆಗೆ ನಡೆದಿದ್ದವು ಮತ್ತು 12 ನೇ ತರಗತಿಯ ಪರೀಕ್ಷೆಗಳು ಏಪ್ರಿಲ್ 26 ರಿಂದ ಜೂನ್ 15 ರವರೆಗೆ ನಡೆದಿದ್ದವು ಟರ್ಮ್ 1 ಪರೀಕ್ಷೆಗಳು ಕಳೆದ ವರ್ಷ ನವೆಂಬರ್, ಡಿಸೆಂಬರ್‌ನಲ್ಲಿ ನಡೆದಿದ್ದು, ಈಗಾಗಲೇ ಫಲಿತಾಂಶಗಳನ್ನು ಪ್ರಕಟಿಸಲಾಗಿದೆ.
 

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ