
ನವದೆಹಲಿ(ಡಿ.27): ಸಿಬಿಎಸ್‌ಇಯ 10 ಮತ್ತು 12ನೇ ತರಗತಿಗಳ ಪರೀಕ್ಷಾ ದಿನಾಂಕವನ್ನು ಡಿಸೆಂಬರ್ 31ಕ್ಕೆ ಘೋಷಣೆ ಮಾಡಲಾಗುತ್ತದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಹೇಳಿದ್ದಾರೆ.
ಈ ಸಂಬಂಧ ಶನಿವಾರ ಟ್ವೀಟ್ ಮಾಡಿರುವ ಅವರು, ‘ಸಿಬಿಎಸ್‌ಇಯ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಯಾವಾಗ ಪರೀಕ್ಷೆ ಹಮ್ಮಿಕೊಳ್ಳಬೇಕೆಂಬ ದಿನಾಂಕವನ್ನು ನಾನು ಡಿ.31ರಂದು ಘೋಷಣೆ ಮಾಡುತ್ತೇನೆ’ ಎಂದಿದ್ದಾರೆ.
ಯತ್ನಾಳ್ ವಿರುದ್ಧ ಕ್ರಮ ಪಕ್ಷದ ಪ್ರಮುಖರಿಗೆ ಬಿಟ್ಟದ್ದು: ಸದಾನಂದ ಗೌಡ
ಈ ಮುನ್ನ ಕೊರೋನಾ ಹಿನ್ನೆಲೆಯಲ್ಲಿ ದೇಶದಲ್ಲಿ ಯಾವುದೇ ಕಾರಣಕ್ಕೂ ಫೆಬ್ರವರಿಯಲ್ಲಿ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಸಾಮಾನ್ಯವಾಗಿ ಸಿಬಿಎಸ್‌ಇಯ 10 ಮತ್ತು 12ನೇ ತರಗತಿಗೆ ಜನವರಿಯಲ್ಲಿ ಪ್ರಯೋಗ ಪರೀಕ್ಷೆ ಆರಂಭವಾಗುತ್ತದೆ. ಫೆಬ್ರವರಿಯಲ್ಲಿ ಲಿಖಿತ ಪರೀಕ್ಷೆ ಆರಂಭವಾಗಿ ಮಾಚ್‌ರ್ ವೇಳೆಗೆ ಮುಕ್ತಾಯವಾಗುತ್ತದೆ.
'ಮುಂದಿನ ವರ್ಷ ಅಂದರೆ 2021ರ ಫೆಬ್ರವರಿ ತನಕ ಬೋರ್ಡ್ ಪರೀಕ್ಷೆಗಳನ್ನು ನಡೆಸಲಾಗುವುದಿಲ್ಲ ಮತ್ತು ಪರೀಕ್ಷೆಯ ವೇಳಾಪಟ್ಟಿಯ ಬಗ್ಗೆ ಆ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು. ಜನವರಿಯಿಂದ ಶಾಲಾ-ಕಾಲೇಜುಗಳ ಪುನಾರಂಭ ಮಾಡಲು ಶಿಕ್ಷಣ ಸಂಸ್ಥೆಗಳು ಸಿದ್ಧತೆ ನಡೆಸುತ್ತಿವೆ ಎಂದು ಈ ಹಿಂದೆ ಹೇಳಿದ್ದರು.