CBSE: 10ನೇ ತರಗತಿ ಪರೀಕ್ಷೆ ರದ್ದು, 12ನೇ ತರಗತಿ ಪರೀಕ್ಷೆ ಮುಂದೂಡಿಕೆ!

Published : Apr 14, 2021, 02:23 PM ISTUpdated : Apr 14, 2021, 05:40 PM IST
CBSE: 10ನೇ ತರಗತಿ ಪರೀಕ್ಷೆ ರದ್ದು, 12ನೇ ತರಗತಿ ಪರೀಕ್ಷೆ ಮುಂದೂಡಿಕೆ!

ಸಾರಾಂಶ

ದಿನೇ ದಿನೇ ಏರುತ್ತಿದೆ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ| ಏರುತ್ತಿರುವ ಪ್ರಕರಣಗಳ ಮಧ್ಯೆ CBSE ಹತ್ತನೇ ತರಗತಿ ಪರೀಕ್ಷೆ ರದ್ದು, 12ನೇ ತರಗತಿ ಪರೀಕ್ಷೆ ಮುಂದೂಡಿಕೆ| ಜೂನ್ 1ರ ಬಳಿಕ ಹನ್ನೆರಡನೇ ತರಗತಿ ಪರೀಕ್ಷೆ ದಿನಾಂಕ ಪ್ರಕಟ

ನವದೆಹಲಿ(ಏ.14): ದೇಶಾದ್ಯಂತ ಕೊರೋನಾ ಹಾವಳಿ ಮತ್ತೆ ಹೆಚ್ಚಾದ ಬೆನ್ನಲ್ಲೇ ಇತ್ತ ಸಿಬಿಎಸ್‌ಸಿ ಹತ್ತನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಿದೆ. ಅಲ್ಲದೇ ಹನ್ನೆರಡನೇ ತರಗತಿ ಪರೀಕ್ಷೆಯನ್ನು ಮುಂದೂಡಿದೆ. ಶಿಕ್ಷಣ ಸಚಿವ ಪೋಕ್ರಿಯಾಲ್ ಹಾಗೂ ಇನ್ನಿತರ ಅಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ಸಭೆ ನಡೆಸಿದ ಬೆನ್ನಲ್ಲೇ ಇಂತಹುದ್ದೊಂದು ಮಹತ್ವದ ನಿರ್ಧಾರ ಪ್ರಕಟಗೊಳಿಸಲಾಗಿದೆ.

"

ದಯವಿಟ್ಟು CBSE ಪರೀಕ್ಷೆ ರದ್ದು ಮಾಡಿ, ಕೇಂದ್ರಕ್ಕೆ ಕೇಜ್ರಿ ಮನವಿ

ಇನ್ನು ಹನ್ನೆರಡನೇ ತರಗತಿ ವಿದ್ಯಾರ್ಥಿಗಳಿಗೆ, ಜೂನ್ 1 ರಂದು ಪರಿಸ್ಥಿತಿ ಅವಲೋಕಿಸಿ ಮುಂದಿನ ಪರೀಕ್ಷಾ ದಿನಾಂಕವನ್ನು ಪ್ರಕಟಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಪರೀಕ್ಷೆ ಆರಂಭವಾಗುವ ಕನಿಷ್ಟ ಹದಿನೈದು ದಿನಗಳ ಮೊದಲೇ ದಿನಾಂಕ ಪ್ರಕಟಿಸುತ್ತೇವೆ ಎಂದೂ ತಿಳಿಸಿದ್ದಾರೆ.

ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಹೀಗೆ ಅಂಕ ನೀಡುತ್ತಾರೆ

ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಆಂತರಿಕ ಪರೀಕ್ಷೆಯ ಅಂಕಗಳನ್ನು ಆಧಾರವಾಗಿಟ್ಟುಕೊಂಡು ತೇರ್ಗಡೆ ಮಾಡಲಾಗುತ್ತದೆ. ಈ ಫಲಿತಾಂಶ ಸರಿ ಇಲ್ಲ, ಅಥವಾ ತನಗೆ ಹೆಚ್ಚು ಅಂಕ ಬರಬೇಕಿತ್ತು ಎನ್ನುವ ವಿದ್ಯಾರ್ಥಿಗಳಿಗೆ ಪರಿಸ್ಥಿತಿ ಸುಧಾರಿಸಿದ ಬಳಿಕ ಪರೀಕ್ಷೆ ನಡೆಸಿ ಫಲಿತಾಂಶ ನೀಡಲಾಗುತ್ತದೆ ಎಂದಿದ್ದಾರೆ. 

ಸಭೆಯಲ್ಲಿ ಮಕ್ಕಳ ಬಗ್ಗೆ ಮೋದಿ ಕಾಳಜಿ

ಇನ್ನು ಶಿಕ್ಷಣ ಸಚಿವರ ಜೊತೆಗಿನ ಸಭೆ ವೇಳೆ ಮಕ್ಕಳ ಸುರಕ್ಷತೆಯೇ ಪ್ರಮುಖ ಆದ್ಯತೆ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆಂಂದು ಉನ್ನತ ಮೂಲಗಳು ತಿಳಿಸಿವೆ.

ಸಿಬಿಎಸ್‌ಇ ಶಾಲೆಗಳಲ್ಲಿ ಕಲಿಯುವ ಮಕ್ಕಳ ಪೋಷಕರಿಗಿದು ಗುಡ್ ನ್ಯೂಸ್

2021 ರ ಶೈಕ್ಷಣಿಕ ವರ್ಷದ ಪರೀಕ್ಷೆಗಳನ್ನು ಕೋವಿಡ್-19 ಕಾರಣದಿಂದಾಗಿ ರದ್ದುಗೊಳಿಸಬೇಕು, ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸುವುದಕ್ಕಾಗಿ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ರಾಜಕೀಯ ವಲಯ ಹಾಗೂ ಮಕ್ಕಳ ಪೋಷಕರು ಒತ್ತಾಯಿಸಿದ್ದರು. 

ಕಳೆದ ಡಿಸೆಂಬರ್‌ನಲ್ಲಷ್ಟೇ ಸಿಬಿಎಸ್‌ಸಿ ಹತ್ತನೇ ಹಾಗೂ ಹನ್ನೆರಡನೇ ತರಗತಿ ಪರೀಕ್ಷೆಯನ್ನು 2021ರ ಮೇ ತಿಂಗಳಿಗೆ ಮುಂದೂಡಲಾಗಿತ್ತು. ಆದರೀಗ ಮತ್ತೆ ಕೊರೋನಾ ಪ್ರಕರಣಗಳು ಏರಿರುವುದರಿಂದ ಸಿಬಿಎಸ್‌ಸಿ ನಿರ್ಧಾರವನ್ನೇ ಬದಲಿಸುವಂತಾಗಿದೆ  

PREV
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ