ಸಿಬಿಎಸ್‌ಸಿ 12 ನೇ ತರಗತಿ ಫಲಿತಾಂಶ ಬಿಡುಗಡೆ, ಒಟ್ಟು ಶೇ.87.98 ಫಲಿತಾಂಶ!

By Gowthami K  |  First Published May 13, 2024, 12:25 PM IST

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್  ಮೇ 13 ರಂದು ಅಂದರೆ ಇಂದು CBSE 2024ರ 12 ನೇ ತೆರಗತಿ ಫಲಿತಾಂಶವನ್ನು ಬಿಡುಗಡೆ ಮಾಡಿದೆ.


ನವದೆಹಲಿ (ಮೇ.13): ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಮೇ 13 ರಂದು ಅಂದರೆ ಇಂದು CBSE 2024ರ  12 ನೇ ತೆರಗತಿ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಒಟ್ಟು 87.98 ಫಲಿತಾಂಶ ಬಂದಿದೆ. ವಿದ್ಯಾರ್ಥಿಗಳು cbse  ಅಧಿಕೃತ ವೆಬ್‌ಸೈಟ್‌ cbse.gov.in ಅಥವಾ results.cbse.nic.in ತಮ್ಮ ಫಲಿತಾಂಶಗಳನ್ನು ವೀಕ್ಷಿಸಿ, ಪ್ರಮಾಣ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.  

ಈ ವರ್ಷ ಸುಮಾರು 26 ವಿವಿಧ ದೇಶಗಳಿಂದ ಒಟ್ಟು 39 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ  5.80 ಲಕ್ಷ ವಿದ್ಯಾರ್ಥಿಗಳು 2024 ರ CBSE ಬೋರ್ಡ್ ಪರೀಕ್ಷೆಗಳನ್ನು ಬರೆದಿದ್ದರು. ಒಟ್ಟು 877 ಕೇಂದ್ರಗಳಲ್ಲಿ  ಪರೀಕ್ಷೆಗಳು ನಡೆದಿತ್ತು. CBSE 12 ನೇ ತರಗತಿ ಪರೀಕ್ಷೆಗಳನ್ನು ಫೆಬ್ರವರಿ 15ರಿಂದ ಮತ್ತು ಏಪ್ರಿಲ್ 2 ರವರೆಗೆ ನಡೆಸಲಾಗಿತ್ತು.

Tap to resize

Latest Videos

undefined

10ನೇ ಕ್ಲಾಸಲ್ಲಿ ಜಸ್ಟ್‌ ಪಾಸಾದರೂ ಬ್ಯಾನರ್‌ ಕಟ್ಟಿ ಸಂಭ್ರಮಾಚರಣೆ..!

ಸಿಬಿಎಸ್‌ಇ ಫಲಿತಾಂಶ ಪರಿಶೀಲನೆ ಹೇಗೆ?
ಅಧಿಕೃತ CBSE ವೆಬ್‌ಸೈಟ್‌ cbseresults.nic.in ಅಥವಾ results.cbse.nic.in ಭೇಟಿ ನೀಡಿ.
ಮುಖಪುಟದಲ್ಲಿ ಕಾಣಿಸುವ ಪರೀಕ್ಷೆಗಳು/ಬೋರ್ಡ್ ಫಲಿತಾಂಶ 2024  ಗಾಗಿ ಲಿಂಕ್ ಅನ್ನು ಕ್ಲಿಕ್ ಮಾಡಿ.
ಹೊಸ ವಿಂಡೋ ತೆರೆಯುತ್ತದೆ. ಅಲ್ಲಿ ನಿಮ್ಮ ರೋಲ್ ಸಂಖ್ಯೆ, ಶಾಲಾ ಸಂಖ್ಯೆ ಮತ್ತು ಭದ್ರತಾ ಪಿನ್ ಬಳಸಿ ಲಾಗ್ ಇನ್ ಮಾಡಿ. ಫಲಿತಾಂಶವನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಿ.

ಸುಳ್ಳು ದಾಖಲೆ ನೀಡಿ MBBS ಪೂರೈಸಿದ ವೈದ್ಯೆಯ ಪದವಿ ಮಾನ್ಯಗೊಳಿಸಿದ ಬಾಂಬೆ ಹೈಕೋರ್ಟ್: ಮಾನ್ಯತೆಗೆ ನೀಡಿದ ಕಾರಣವಿದು

ಡಿಜಿಲಾಕರ್ ಮೂಲಕ ಪರಿಶೀಲಿಸುವುದು ಹೇಗೆ?
ನಿಮ್ಮ ಡಿಜಿಲಾಕರ್ ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಿ ಅಥವಾ ಖಾತೆಯನ್ನು ರಚಿಸಿ
CBSE ಫಲಿತಾಂಶ 2024 ಆಯ್ಕೆಯ ಮೇಲೆ ಕ್ಲಿಕ್ ಮಾಡಿ
CBSE  ಫಲಿತಾಂಶ 2024 ಗಾಗಿ ಸಕ್ರಿಯಗೊಂಡ ಲಿಂಕ್ ಅನ್ನು ಆಯ್ಕೆಮಾಡಿ
ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿದಾಗ ಸ್ಕೋರ್‌ಕಾರ್ಡ್ ಕಾಣಿಸುತ್ತದೆ.

click me!