ಮಾರಕ ಕೊರೋನಾ ವೈರಸ್ ಭೀತಿ: ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್ ಕೊಟ್ಟ ಸಚಿವರು

By Suvarna News  |  First Published Dec 22, 2020, 7:22 PM IST

ಮಹಾಮಾರಿ ಕೊರೋನಾ ವೈರಸ್ ಭೀತಿ ಹಿನ್ನೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಕ್ರಿಯಾಲ್ ನಿಶಾಂಕ್ ಅವರು ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ಕೊಟ್ಟಿದ್ದಾರೆ.


ನವದೆಹಲಿ, (ಡಿ.22): ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ ಹಿನ್ನಲೆಯಲ್ಲಿ 2021ರ ಫೆಬ್ರವರಿ ವರೆಗೂ ಸಿಬಿಎಸ್‌ಇ ಪರೀಕ್ಷೆಗಳನ್ನು ನಡೆಸಲಾಗುವುದಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಕ್ರಿಯಾಲ್ ನಿಶಾಂಕ್ ಹೇಳಿದ್ದಾರೆ.

ರಮೇಶ್ ಪೋಕ್ರಿಯಾಲ್ ನಿಶಾಂಕ್ ಅವರು ಇಂದು (ಮಂಗಳವಾರ) ದೇಶಾದ್ಯಂತ ಶಿಕ್ಷಕರೊಂದಿಗೆ ಸಂವಾದ ವೆಬಿನಾರ್ ಸಂವಾದ ನಡೆಸಿದರು. ಸಂವಾದದ ಸಂದರ್ಭದಲ್ಲಿ, ಶಿಕ್ಷಣ ಸಚಿವರು ಜನವರಿ ಮತ್ತು ಫೆಬ್ರವರಿಯಲ್ಲಿ ಯಾವುದೇ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲಾಗುವುದಿಲ್ಲ ಎಂದು ಹೇಳಿದರು.

Latest Videos

undefined

ವೇಗವಾಗಿ ಹರಡುವ ಹೊಸ ವೈರಸ್ ಪತ್ತೆ: ಎಚ್ಚರಿಕೆ ವಹಿಸಲು ಸಚಿವರು ಮನವಿ

'ಮುಂದಿನ ವರ್ಷ ಅಂದರೆ 2021ರ ಫೆಬ್ರವರಿ ತನಕ ಬೋರ್ಡ್ ಪರೀಕ್ಷೆಗಳನ್ನು ನಡೆಸಲಾಗುವುದಿಲ್ಲ ಮತ್ತು ಪರೀಕ್ಷೆಯ ವೇಳಾಪಟ್ಟಿಯ ಬಗ್ಗೆ ಆ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು. ಜನವರಿಯಿಂದ ಶಾಲಾ-ಕಾಲೇಜುಗಳ ಪುನಾರಂಭ ಮಾಡಲು ಶಿಕ್ಷಣ ಸಂಸ್ಥೆಗಳು ಸಿದ್ಧತೆ ನಡೆಸುತ್ತಿವೆ ಎಂದು ತಿಳಿಸಿದರು.

click me!